ಜೆಪ್ಪು ಆಶ್ರಮದಲ್ಲಿ ಸಂತ ಆಂತೋನಿಯವರ ಹಬ್ಬದ ಆಚರಣೆ

Spread the love

ಜೆಪ್ಪು ಆಶ್ರಮದಲ್ಲಿ ಸಂತ ಆಂತೋನಿಯವರ ಹಬ್ಬದ ಆಚರಣೆ

ಮಂಗಳೂರು: ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.

ಅ. ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜ, ಮಂಗಳೂರಿನ ಧರ್ಮಾಧ್ಯಕ್ಷರು ಜೂನ್ 13 ಸಂತ ಆಂತೋನಿಯವರ ಹಬ್ಬದಂದು ಸಾಯಾಂಕಾಲ 6 ಗಂಟೆಗೆ ಸಂಭ್ರಮದ ಬಲಿಪೂಜೆಯನ್ನು 33 ಯಾಜಕರೊಂದಿಗೆ ಅರ್ಪಿಸಿದರು. ಬಲಿಪೂಜೆಯ ಕೊನೆಗೆ ಸಂತ ಆಂತೋನಿ ಆಶ್ರಮ 120ನೇ ಸಂವತ್ಸರಕ್ಕೆ ಕಾಲಿಡುವ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಆಯೋಜಿಸಲಾದ ಯೋಜನೆಗಳ ವಿವರಗಳನ್ನೊಳಗೊಂಡ ಹಸ್ತಪತ್ರದ ಪ್ರತಿಯನ್ನು ಬಿಡುಗಡೆಗೊಳಿಸಿದರು. 120ನೇ ವರ್ಷದ ನೆನಪಿಗೆ ಕೈಗೊಳ್ಳಲಾದ ಪ್ರಮುಖ ಕಾರ್ಯಕ್ರಮಗಳೆಂದರೆ-ತೀವ್ರ ಕಾಯಿಲೆಗಳಿಂದ ಬಳಲುವ 120 ಬಡ ಜನರಿಗೆ ಚಿಕಿತ್ಸೆಗೆ ಸಹಾಯ, 12 ಉಚಿತ ಆರೋಗ್ಯ ಶಿರಗಳು, ನಗರದಲ್ಲಿ ಉನ್ನತ ಶಿಕ್ಷಣ ಪಡೆಯುವ ಹಳ್ಳಿಯ ವಿಧ್ಯಾರ್ಥಿಗಳಿಗೆ ಉಚಿತ ವಾಸ್ತವ್ಯ, ವøದ್ದರ ಮತ್ತು ಅಸ್ವಸ್ಥರ ಸೇವೆ ಮಾಡಲು ಬಯಸುವವರಿಗೆ ಮೂರು ತಿಂಗಳ ಉಚಿತ ತರಬೇತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಾಥ ಆಶ್ರಮಗಳಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಗಳ ಸಂಯೋಜನೆ, ಸಂತ ಆಂತೋನಿ ಧಾರ್ಮಿಕ ನಾಟಕ ಪ್ರದರ್ಶನ ಇತ್ಯಾದಿ.

ಧರ್ಮಾಧ್ಯಕ್ಷರು ಸಂತ ಆಂತೋನಿ ಆಶ್ರಮದ ಮೂಲಕ ಕಳೆದ 119 ವರ್ಷಗಳಲ್ಲಿ ಬಡವರಿಗೆ ಮತ್ತು ನಿರಾಶ್ರಿತರಿಗೆ ನೀಡಿದ ಸೇವೆಯನ್ನು ಶ್ಲಾಘಿಸಿದರು. ಧರ್ಮಕೇಂದ್ರಗಳಲ್ಲಿ ಸೇವೆ ನೀಡುವ ಧರ್ಮಗುರುಗಳು ನಡೆಸಿಕೊಡು ಹೋಗುವ ಈ ಸಂಸ್ಥೆ ಭಾರತೀಯ ಕಥೋಲಿಕ ಧರ್ಮಸಭೆಯಲ್ಲಿ ಇದೊಂದು ವಿಶಿಷ್ಟ ಸೇವೆ ಎಂದರು.
ನಾಗೋರಿ ಚರ್ಚ್‍ನ ಧರ್ಮಗುರು ಫಾ. ಮ್ಯಾಥ್ಯು ವಾಸ್‍ರವರು ಬಲಿಪೂಜೆಯ ಸಮಯದಲ್ಲಿ ಪ್ರವಚನ ನೀಡಿದರು. ಸಂತ ಆಂತೋನಿಯವರು ಕಷ್ಟ-ಸಂಕಷ್ಟದಲ್ಲಿದ್ದವರಿಗೆ, ನಿರಾಶೆಯಲ್ಲಿದ್ದವರಿಗೆ ಭರವಸೆಯಾಗಿದ್ದಾರೆ. ಅವರ ಹತ್ತಿರ ನೆರವು ಕೋರಿ ಬಂದವರು ಯಾರೂ ಕೂಡ ಬರಿಗೈಯಲ್ಲಿ ಹಿಂತುರುಗುವುದಿಲ್ಲ. ಜಾತಿ-ಮತ ಎನ್ನದೆ ಎಲ್ಲಾ ರೀತಿಯ ಜನರು ಸಂತ ಆಂತೋನಿಯವರಲ್ಲಿ ಪ್ರಾರ್ಥಿಸಲು ಬರುತ್ತಾರೆ. ಪ್ರತೀ ದಿವಸ ಪ್ರತ್ಯೇಕವಾಗಿ ಮಂಗಳವಾರ ಅವರಲ್ಲಿ ಬರುವ ಜನರ ಸಂಖ್ಯೆ ಅವರ ಪ್ರಭಲವಾದ ಮಧ್ಯಸ್ತಿಕೆಗೆ ಸಾಕ್ಷಿಯಾಗಿದೆ ಎಂದರು.

ಪ್ರಾಯಸ್ತರಿಗೆ ಮತ್ತು ಅಸ್ವಸ್ತರಿಗಾಗಿ ಬೆಳಗ್ಗೆ 8.15 ಕ್ಕೆ ಸಾಯಾಂಕಾಲ 4 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಬಲಿಪೂಜೆಯನ್ನು ಮಿಲಾಗ್ರಿಸ್ ಚರ್ಚ್‍ನಲ್ಲಿ ಅರ್ಪಿಸಲಾಯ್ತು. ಬೆಳಗ್ಗೆ 11 ಗಂಟೆಗೆ ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭುರವರು ಆಶ್ರಮದಲ್ಲಿ ಆಶ್ರಮದ ನಿವಾಸಿಗಳಿಗಾಗಿ ಹಬ್ಬದ ಪೂಜೆಯನ್ನು ಅರ್ಪಿಸಿದರು. ಪಾಟ್ನ, ಸಾವಿರಾರು ಜನರ ಜೊತೆ ದೆಹಲಿ ಮತ್ತು ಮುಂಬಾಯಿಂದ ಬಂದ ಭಕ್ತಾಧಿಗಳು ಕೂಡ ಹಬ್ಬದ ಸಂಬ್ರಮದಲ್ಲಿ ಭಾಗವಹಿಸಿದರು.

ಫಾ. ಒನಿಲ್ ಡಿ’ಸೋಜ, ಸಂಸ್ಥೆಯ ನಿರ್ದೇಶಕರು; ಫಾ. ಫ್ರಾನ್ಸಿಸ್ ಡಿ’ಸೋಜ ಆಡಳಿತಧಿಕಾರಿ ಮತ್ತು ಫಾ. ಪೀಟರ್ ಗೊನ್ಸಾಲ್ವಿಸ್ ಸಹಾಯಕ ನಿರ್ದೇಶರು ಹಬ್ಬದ ಬಲಿಪೂಜೆಗಳಲ್ಲಿ ಭಾಗವಹಿಸಿ ಭಕ್ತಾಧಿಗಳನ್ನು ಹರಸಿದರು


Spread the love