ಜೇಸಿಐ ವಲಯ ಹದಿನೈದರ ವಲಯಾಧ್ಯಕ್ಷರಾಗಿ ರಾಕೇಶ್ ಕುಂಜೂರು

Spread the love

ಜೇಸಿಐ ವಲಯ ಹದಿನೈದರ ವಲಯಾಧ್ಯಕ್ಷರಾಗಿ ರಾಕೇಶ್ ಕುಂಜೂರು

ಉಡುಪಿ: ಜೇಸಿಐ ಭಾರತದ ಪ್ರತಿಷ್ಠಿತ ವಲಯ ಹದಿನೈದರ ನೂತನ ವಲಯಾಧ್ಯಕ್ಷರಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕøತ ಜೇಸಿಐ ಕಾಪುವಿನ ಪೂರ್ವಾಧ್ಯಕ್ಷ ಪತ್ರಕರ್ತ ರಾಕೇಶ್ ಕುಂಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜೇಸಿಐ ಕಲ್ಯಾಣಪುರ ಕಾಸ್ಮೋ ಸಿಟಿಯ ಆತಿಥ್ಯದಲ್ಲಿ ಜರಗಿದ ನನಸು ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.

ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಕೇಶ್ ಕುಂಜೂರು 2002ರಿಂದ ಜೇಸಿ ಆಂದೋಲನದಲ್ಲಿ ಸಕ್ರಿಯರಾಗಿದ್ದು, 2013ರಲ್ಲಿ ಘಟಕಾಧ್ಯಕ್ಷರಾಗಿ ವಲಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2016ರಲ್ಲಿ ವಲಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಷ್ಟ್ರ ಮಟ್ಟದ ಅತ್ಯುತ್ತಮ ವಲಯ ಉಪಾಧ್ಯಕ್ಷ ಪ್ರಶಸ್ತಿಯನ್ನು ಗಳಿಸಿದ್ದರು. ವಿವಿಧ ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿರುವ ಅವರು ಪತ್ರಕರ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ನೂತನ ವಲಯ ಉಪಾಧ್ಯಕ್ಷರಾಗಿ ಜೇಸಿಐ ಕುಂದಾಪುರದ ಅಕ್ಷತಾ ಗಿರೀಶ್, ಜೇಸಿಐ ಉಡುಪಿ ಸಿಟಿಯ ರಾಘವೇಂದ್ರ ಪ್ರಭು, ಜೇಸಿಐ ಬೆಳ್ಮಣ್‍ನ ರಘುನಾಥ್ ನಾಯಕ್, ಜೇಸಿಐ ಪುತ್ತೂರಿನ ಪಶುಪತಿ ಶರ್ಮಾ, ಜೇಸಿಐ ಸುಬ್ರಹ್ಮಣ್ಯದ ರವಿ ಕಕ್ಕೆಪದವು (ಲಿಂಗಪ್ಪ) ಮತ್ತು ಜೇಸಿಐ ಸುಳ್ಯ ಪಯಸ್ವಿನಿಯ ಮನಮೋಹನ್ ಬಲ್ಲಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾಯಿತ ವಲಯಾಧ್ಯಕ್ಷ ಮತ್ತು ವಲಯ ಉಪಾಧ್ಯಕ್ಷರಿಗೆ ವಲಯ ಸಮ್ಮೇಳನದ ವಿಶೇಷ ಕರ್ತವ್ಯಾ„ಕಾರಿ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ರಾಬಿನ್ ಅಬ್ರಾಹಂ ಅವರ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಭೋದಿಸಲಾಯಿತು. ನಿರ್ಗಮನ ವಲಯಾಧ್ಯಕ್ಷ ಸಂತೋಷ್ ಜಿ., ನಿಟಕಪೂರ್ವ ವಲಯಾಧ್ಯಕ್ಷ ಸಂದೀಪ್ ಕುಮಾರ್, ಜೇಸಿಐ ಇಂಡಿಯಾ ಫೌಂಡೇಷನ್‍ನ ನಿರ್ದೇಶಕ ವೈ. ಸುಕುಮಾರ್, ರಾಷ್ಟ್ರೀಯ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಸದಾನಂದ ನಾವಡ, ಮುರಳೀ ಶ್ಯಾಂ, ಪೂರ್ವ ವಲಯಾಧ್ಯಕ್ಷರಾದ ಅರವಿಂದ ರಾವ್, ಉದಯ್ ಕುಮಾರ್ ಶೆಟ್ಟಿ ಇನ್ನಾ, ಆಶಿತ್ ಕುಮಾರ್, ಕೃಷ್ಣ ಮೋಹನ್ ಪಿ. ಎಸ್., ಶ್ರೀಧರ್ ಪಿ. ಎಸ್. ಮೊದಲಾದವರು ಉಪಸ್ಥಿತರಿದ್ದರು.


Spread the love