ಟಿ. ವಿ. ಮೋಹನದಾಸ ಪೈ ಯುವ ಸಂಶೋಧಕ ಪ್ರಶಸ್ತಿ 2020

Spread the love

ಟಿ. ವಿ. ಮೋಹನದಾಸ ಪೈ ಯುವ ಸಂಶೋಧಕ ಪ್ರಶಸ್ತಿ 2020

ವಿಶ್ವ ಕೊಂಕಣಿ ಕೇಂದ್ರದ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ಅಲುಮ್ನಿ ಸಂಘವು 2020ನೇ ಸಾಲಿನ ಟಿ.ವಿ. ಮೋಹನದಾಸ ಪೈ ಯುವ ಸಂಶೋಧಕ ಪ್ರಶಸ್ತಿಗೆ ಸ್ವಯಂ ನಾಮನಿರ್ದೇಶನಗಳನ್ನು ಆಹ್ವಾನಿಸುತ್ತಿದೆ. ವಿಶ್ವದ ಪ್ರಸಿದ್ಧ ವಿಶ್ವ ವಿದ್ಯಾಲಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಅರ್ಹ ಕೊಂಕಣಿ ಭಾಷಿಕ ಸಂಶೋಧಕರನ್ನು ಗುರುತಿಸಲು ಗೌರವಿಸಲು ಟಿ.ವಿ. ಮೋಹನದಾಸ ಪೈ ಯುವ ಸಂಶೋಧಕ ಪ್ರಶಸ್ತಿ ಸ್ಥಾಪಿಸಲಾಗಿದೆ.

ಪ್ರಶಸ್ತಿ ಫಲಕ ಮತ್ತು ಮೂರು ಲಕ್ಷ ರೂಪಾಯಿ ಬಹುಮಾನವನ್ನು ಒಳಗೊಂಡಿರುವ ಈ ಪ್ರಶಸ್ತಿಗೆ ಈ ಕೆಳಕಂಡ ಅರ್ಹತೆಗಳಿರುವ ಯುವ ಸಂಶೋಧಕರಿಂದ ಈ ಮೂಲಕ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

1. ಅಭ್ಯರ್ಥಿಯು ಕೊಂಕಣಿ ಮಾತೃಭಾಷಿಕನಾ(ಳಾ)ಗಿರಬೇಕು.
2. ಯಾವುದೇ ಭಾರತೀಯ ಅಥವಾ ವಿದೇಶೀ ವಿಶ್ವ ವಿದ್ಯಾಲಯಗಳಿಂದ ಸ್ನಾತಕೋತ್ತರ ಪದವೀಧರನಾ (ಳಾ)ಗಿರಬೇಕು.
3. ಅಭ್ಯರ್ಥಿಯು ಪೂರ್ಣ ಕಾಲಿಕ ಪಿ.ಹೆಚ್.ಡಿ. ವಿದ್ಯಾರ್ಥಿಯಾಗಿದ್ದು ಪ್ರಸಕ್ತ ಪ್ರತಿಷ್ಟಿತ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನಾ ನಿರತನಾ(ಳಾ)ಗಿರಬೇಕು.
4. ಅಭ್ಯರ್ಥಿಯು ಉನ್ನತ ಸಂಶೋಧನಾ ಸಾಮಥ್ರ್ಯವನ್ನು ಪ್ರದರ್ಶಿಸಿರಬೇಕು.

ಅರ್ಹ ವಿದ್ಯಾರ್ಥಿಗಳು ಅಡ್ಮಿನ್-ಎಟ್-ಕೊಂಕಣಿಸ್ಕಾಲರ್ಶಿಪ್.ಕೊಮ್ ಗೆ ಸ್ವಯಂ – ನಾಮನಿರ್ದೇಶನಗಳನ್ನು ಸಲ್ಲಿಸಬೇಕು. ಜೊತೆಗೆ 500 ಪದಗಳಿಗೆ ಮೀರದಂತೆ ಸಂಶೋಧನಾ ಸಾರಾಂಶ, ಕರಿಕ್ಯುಲಮ್ ವಿಟೇ (ಸಿ.ವಿ.), ಇಮೇಲ್ ಮತ್ತು ದೂರವಾಣಿ ಸಂಖ್ಯೆ ಹಾಗೂ ಎರಡು ಶಿಫಾರಸು ಪತ್ರಗಳನ್ನು ಲಗ್ತೀಕರಿಸಬೇಕು. ಇವುಗಳಲ್ಲಿ ಒಂದು ಶಿಫಾರಸು ಪತ್ರವನ್ನು ವಿಶ್ವ ವಿದ್ಯಾಲಯದ ಶೈಕ್ಷಣಿಕ ಸಲಹೆಗಾರರಿಂದ ಪಡೆದುಕೊಂಡು ಲಗ್ತೀಕರಿಸಬೇಕು.

ಟಿ.ವಿ. ಮೋಹನದಾಸ ಪೈ ಯುವ ಸಂಶೊಧಕ ಪ್ರಶಸ್ತಿ 2020 ಸ್ವಯಂ ನಾಮ ನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 25, 2020.


Spread the love