ಟೋಲ್ ಸಮಸ್ಯೆ : ರಾಷ್ಟ್ರೀಯ ಹೆದ್ದಾರಿ ಜಾಗ್ರತಿ ಸಮಿತಿಯಿಂದ ಹೊಸ ಜಿಲ್ಲಾಧಿಕಾರಿ ಭೇಟಿ

Spread the love

ಟೋಲ್ ಸಮಸ್ಯೆ : ರಾಷ್ಟ್ರೀಯ ಹೆದ್ದಾರಿ ಜಾಗ್ರತಿ ಸಮಿತಿಯಿಂದ ಹೊಸ ಜಿಲ್ಲಾಧಿಕಾರಿ ಭೇಟಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಜಾಗ್ರತಿ ಸಮಿತಿ ಸಾಸ್ತಾನ ಸದಸ್ಯರು ಶನಿವಾರ ಜಿಲ್ಲೆಯ ನೂತನ  ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಹೆದ್ದಾರಿ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಮನವಿ ಅರ್ಪಿಸಿದರು.

ಈ ವೇಳೆ ಉಪಸ್ಥಿತರಿದ್ದ ವಿಧಾನ ಪರಿಷತ್ತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು  ಹೆದ್ದಾರಿ ಸಮಸ್ಯೆಗಳ ಬಗ್ಗೆ ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿ ಬಗ್ಗೆ  ಜಿಲ್ಲಾಧಿಕಾರಿಗಳಿಗೆ ವಿವರಣೆ ನೀಡಿದರು. ಹಾಗೂ ಸ್ಥಳೀಯರಿಗೆ ಟೋಲ್ ವಿನಾಯತಿ ನೀಡದಿದ್ದಲ್ಲಿ ಜನರೊಂದಿಗೆ ಸೇರಿ  ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಹಾಗೂ ಹೆದ್ದಾರಿ ಹೋರಾಟಗಾರರಿಗೆ ಸಂಪೂರ್ಣ ಬೆಂಬಲ ಘೋಷಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆ ಅನುಭವಿಸುತ್ತಿರುವ ಮರಳು ಸಮಸ್ಯೆ ಬಗ್ಗೆ  ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿ ಶೀಘ್ರದಲ್ಲಿ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಿದರು.

ಜಿಲ್ಲಾಧಿಕಾರಿಯವರು ತಮ್ಮ ವ್ಯಾಪ್ತಿಯಲ್ಲಿ ಆಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

ಸಮಿತಿಯ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ, ಸದಸ್ಯರಾದ ಆಲ್ವಿನ್ ಅಂದ್ರಾದೆ, ಗೋವಿಂದ ಪೂಜಾರಿ, ರಾಜೇಶ್ ಕಾವೇರಿ ಹಾಗೂ ಇತರರು ಉಪಸ್ಥಿತರಿದ್ದರು.

 


Spread the love