ಡಿಸಿ ಸಸಿಕಾಂತ್ ಸೆಂಥಿಲ್ ರಾಜಿನಾಮೆ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕಾಗಿದೆ: ಎಂ.ಬಿ.ಸದಾಶಿವ

Spread the love

ಡಿಸಿ ಸಸಿಕಾಂತ್ ಸೆಂಥಿಲ್ ರಾಜಿನಾಮೆ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕಾಗಿದೆ: ಎಂ.ಬಿ.ಸದಾಶಿವ

ಮಂಗಳೂರು: ಕಳೆದ ಎರಡು ವರ್ಷಗಳಿಂದ ದ.ಕ.ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರ ಹಠಾತ್‌ ರಾಜಿನಾಮೆ‌ ಎಲ್ಲರಿಗೂ ಆಘಾತವನ್ನು ಉಂಟುಮಾಡಿದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಯಾವ ಒತ್ತಡ ಇದೆ ಎಂಬುವುದನ್ನು ನಾವು ತಿಳಿದುಕೊಂಡು ಅದನ್ನು ಬಯಲಿಗೆಳೆಯಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು‌.

ಪ್ರಜಾಪ್ರಭುತ್ವದ ಸ್ತಂಭಗಳು, ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಿದ್ದಾರೆ. ಓರ್ವ ಐಎಎಸ್ ಅಧಿಕಾರಿಗೆ ರಾಷ್ಟ್ರೀಯತೆ, ರಾಷ್ಟ್ರದ ವಿಪತ್ತು ನಿರ್ವಹಣೆ, ಆರ್ಥಿಕ ನಿರ್ವಹಣೆ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ನಿರ್ವಹಣೆ, ನಾಯಕತ್ವದ ನಿರ್ವಣೆ ಈ ಎಲ್ಲದರ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಈ ಎಲ್ಲದರ ಬಗ್ಗೆ ತರಬೇತಿ ಪಡೆದವರೇ ರಾಜಿನಾಮೆ ನೀಡುತ್ತಿರುವುದು ದಿಗ್ಭ್ರಮೆ ಮೂಡಿಸುತ್ತದೆ. ಈ ದೇಶದ ಆಡಳಿತ ವ್ಯವಸ್ಥೆಗೆ ಕಪ್ಪುಚುಕ್ಕಿ ಎಂದರೆ ತಪ್ಪಿಲ್ಲ ಎಂದು ಎಂ.ಬಿ.ಸದಾಶಿವ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವವರು ಈ ರೀತಿಯಲ್ಲಿ ರಾಜಿನಾಮೆ ನೀಡಿದ್ದಾರೆಂದರೆ ಬಹುಶಃ ಅವರ ಪರಿಸರದಲ್ಲಿ ಒತ್ತಡ ಬಂದಿದೆ. ಅದನ್ನು ಅವರು ತಮ್ಮ ಒಳ್ಳೆಯತನದಿಂದ ಹೇಳಲಿಚ್ಚಿಸಿದ್ದಿಲ್ಲ. ಆದರೆ ಅದನ್ನು ತಿಳಿಯಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕೇರಳದ ಗೋಪಿನಾಥ್ ಕಣ್ಣನ್, ನಮ್ಮ ಪಕ್ಕದ ಅಣ್ಣಾಮಲೈ ರಾಜಿನಾಮೆ ನೀಡಿದಾಗ ಏನೋ ವೈಯುಕ್ತಿಕ ಕಾರಣ ಎಂದು ಸುಮ್ಮನಾದೆವು. ಆದರೆ ನಮ್ಮ ಊರಿನಲ್ಲೇ ಸೇವೆ ಮಾಡಿದ, ಅಸ್ಕಲಿತ ವ್ಯಕ್ತಿತ್ವದ ಜಿಲ್ಲಾಧಿಕಾರಿ ಯೋರ್ವರು ರಾಜಿನಾಮೆ ನೀಡಿರುವುದು ಎಲ್ಲೋ ಏನೋ ತಪ್ಪಿದೆ ಎಂದೆನಿಸುತ್ತದೆ. ಮುಂದೆ ಇಂತಹ ಅಧಿಕಾರಿಗಳಿಗೆ ಆತ್ಮವಿಶ್ವಾಸ ತುಂಬಿ ಆಡಳಿತ ಯಂತ್ರವನ್ನು ಬಲಿಷ್ಠಗೊಳಿಸಬೇಕಾಗಿದೆ. ಆ ದೃಷ್ಟಿಯಿಂದ ಸಸಿಕಾಂತ್ ಸೆಂಥಿಲ್ ಅವರು ಯಾವ ಕಾರಣಕ್ಕೆ ರಾಜಿನಾಮೆ ನೀಡಿದರು ಎಂದು ತಿಳಿದುಕೊಂಡು, ಅವರು ರಾಜಿನಾಮೆ ಹಿಂಪಡೆಯುವಂತೆ ಒತ್ತಾಯ ಮಾಡಬೇಕಾಗಿದೆ‌. ಮತ್ತೆ ಅವರು ಸೇವೆ ಮತ್ತೆ ರಾಷ್ಟ್ರಕ್ಕೆ ದೊರುಕುವಂತೆ ಮಾಡಬೇಕೆಂದು ಜನತಾದಳ ಒತ್ತಾಯ ಮಾಡುತ್ತದೆ ಎಂದು ಎಂ.ಬಿ.ಸದಾಶಿವ ಹೇಳಿದರು.

ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಅಧಿಕಾರಿಯೋರ್ವ ಈ ರೀತಿಯಲ್ಲಿ ರಾಜಿನಾಮೆ ನೀಡಿದ್ದಾರೆಂದರೆ ಅದಕ್ಕೆ ಕಾರಣ ತಿಳಿಯಬೇಕಾಗಿದೆ. ಆದರೆ ಈಗ ಅವರನ್ನು ಮನವೊಲಿಸಿ ಮತ್ತೆ ಜಿಲ್ಲಾಧಿಕಾರಿಯಾಗಿ ನೇಮಿಸುವ ಬದಲು ಮತ್ತೊಂದು ಜಿಲ್ಲಾಧಿಕಾರಿ ಯನ್ನು ತುರ್ತಾಗಿ ನೇಮಕ ಮಾಡಲಾಗಿದೆ. ಇದರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ. ಸರಕಾರ ಆದಷ್ಟು ಬೇಗ ಅವರ ಮನವೊಲಿಸುವ ಕೆಲಸ ಮಾಡಿ ಅವರ ರಾಜಿನಾಮೆ ಹಿಂದೆ ಪಡೆದು, ಮತ್ತೆ ಅವರಿಗೆ ಸರಕಾರಿ ಸೇವೆಯಲ್ಲಿ ಮುಂದುವರಿಸಲು ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಜೆಡಿಎಸ್ ಸ್ಪೋಕ್ ಪರ್ಸನ್ ಸುಶೀಲ್ ನೊರೊನ್ಹಾ, ವಸಂತ ಪೂಜಾರಿ { ಮಂಗಳೂರು ದಕ್ಷಿಣವಿಧಾನಸಭದ ಅಧ್ಯಕ್ಷರು } ಮಹಿಳಾ ಘಟಕದ ಅಧ್ಯಕ್ಷ ಸುಮತಿ ಹೆಗ್ಡೆ, ರಮಿಝಾ ಬಾನು, ಪುಷ್ಪರಾಜ್ ಮತ್ತಿತರರು ಉಪಸ್ಥಿತರಿದ್ದರು.


Spread the love