ಡೀಸೆಲ್ ಕಳ್ಳತನದ ಆರೋಪಿಗಳ ಬಂಧನ

Spread the love

ಡೀಸೆಲ್ ಕಳ್ಳತನದ ಆರೋಪಿಗಳ ಬಂಧನ

ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಪಣಂಬೂರು ಎನ್.ಎಂ.ಪಿ.ಟಿ ಬಸ್ ನಿಲ್ದಾಣದ ಬಳಿ ರೀನಸ್ ಲೊಜಿಸ್ಟಿಕ್ ಕಂಪನಿಯ ಟ್ಯಾಂಕರೊಂದರಿಂದ ಆರೋಪಿತರು ಸುಮಾರು 900 ಲೀಟರ್ ಡೀಸೆಲ್ ಕಳ್ಳತನ ಮಾಡಿದ ಬಗ್ಗೆ ರೀನಸ್ ಲೊಜಿಸ್ಟಿಕ್ ಕಂಪನಿಯ ಮ್ಯಾನೇಜರ್ ರವರು ನೀಡಿದ ದೂರಿನಂತೆ ಕಳ್ಳತನ ಪ್ರಕರಣ ದಾಖಲಾಗಿದ್ದು, 04 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿತರು ಕಳ್ಳತನ ಮಾಡಿ ಬಚ್ಚಿಟ್ಟ ಸ್ಥಳದಿಂದ 900 ಲೀಟರ್ ಡೀಸೆಲ್ ಮತ್ತು ಕೃತ್ಯಕ್ಕೆ ಬಳಸಿದ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

ಬಂಧಿತ ಆರೋಪಿಗಳನ್ನು ಉತ್ತರಪ್ರದೇಶ ನಿವಾಸಿ ಪ್ರೇಮಚಂದ್ರ ಯಾದವ್ ಯಾನೆ ಪ್ರೇಮ್, ತುಳಸಿಪುರ್ ನಿವಾಸಿ ನಾನ್ ಬಾನು ಯಾನೆ ಬಾಬು, ಬಲವಂತ್ ಕುಮಾರ್ ಮತ್ತು ರಾಜ್ ಕುಮಾರ್ ರಜಾಕ್ ಯಾನೆ ಲಾಲಾ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಕೆಎ-19-ಎಬಿ-0301 ನೊಂದಣಿ ಸಂಖ್ಯೆಯ 12 ಚಕ್ರದ ಟಾಟಾ ಕಂಪನಿಯ ಟ್ಯಾಂಕರ್ ಲಾರಿ, ಅಂದಾಜು ಮೌಲ್ಯ ರೂ.40,00,000/- ಮತ್ತು 900 ಲೀಟರ್ ಡೀಸೆಲ್, ಅಂದಾಜು ಮೌಲ್ಯ ರೂ. 46,000/- ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಉಮೇಶ್ ಕುಮಾರ್.ಎಂ.ಎನ್ ಹಾಗೂ ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love