ತಮಿಳುನಾಡು ರಾಜಕೀಯಕ್ಕೆ ‘ಕರ್ನಾಟಕ ಸಿಂಗಂ‘ ಅಣ್ಣಾಮಲೈ ಪ್ರವೇಶ: 2021ರ ಚುನಾವಣೆಯಲ್ಲಿ ಸ್ಪರ್ಧೆ

Spread the love

ತಮಿಳುನಾಡು ರಾಜಕೀಯಕ್ಕೆ ‘ಕರ್ನಾಟಕ ಸಿಂಗಂ‘ ಅಣ್ಣಾಮಲೈ ಪ್ರವೇಶ: 2021ರ ಚುನಾವಣೆಯಲ್ಲಿ ಸ್ಪರ್ಧೆ

ಬೆಂಗಳೂರು : ರಾಜ್ಯ ಪೊಲೀಸ್​​ ಇಲಾಖೆಯಲ್ಲಿ ಐಪಿಎಸ್​​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಅಪರಾಧಿಗಳಿಗೆ ನಡುಕ ಹುಟ್ಟಿಸಿದ್ದ ಮತ್ತು ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದವರು ಅಣ್ಣಾಮಲೈ. ವರ್ಷದ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪೊಲೀಸ್ ಸೇವೆಯಿಂದ ವಿಮುಕ್ತಗೊಂಡ ಬಳಿಕ ಸಿಂಗಂ ಖ್ಯಾತಿಯ ಅಣ್ಣಾಮಲೈ ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮುಂಬರುವ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಅಣ್ಣಾಮಲೈ ಭಾನುವಾರ(ಮೇ.17) ಫೇಸ್​​ಬುಕ್​​ ಲೈವ್​​ನಲ್ಲಿ ಮಾತಾಡುವ ವೇಳೆ ಘೋಷಿಸಿದರು. ತಮಿಳುನಾಡಿನ ತನ್ನ ಹುಟ್ಟೂರಿನಲ್ಲೇ ವಾಸ್ಯವ್ಯ ಹೂಡಿ ಮುಂದಿನ ಚುನಾವಣೆಗೆ ಬೇಕಾದ ಅಗತ್ಯ ಕೆಲಸಗಳನ್ನು ಆರಂಭಿಸುವುದಾಗಿ ತಿಳಿಸಿದರು.

ಇನ್ನು, ‘ಮಿಸ್​​ ಯೂ ಕರ್ನಾಟಕ’ ಎಂದು ಮಾತು ಆರಂಭಿಸಿದ ಅಣ್ಣಾಮಲೈ, ನಾನು ಪೊಲೀಸ್​​​ ಸೇವೆಯಲ್ಲಿದ್ದಾಗ ಕನ್ನಡಿಗರು ಬೆಟ್ಟದಷ್ಟು ಪ್ರೀತಿ ಕೊಟ್ಟರು. ನಿಮ್ಮ ಪ್ರೀತಿಗೆ ನಾ ಅಭಾರಿ. ನನಗೆ ಜನರೊಂದಿಗೆ ಇದ್ದು ರಾಜಕೀಯ ಸುಧಾರಣೆ ಮಾಡುವ ಆಲೋಚನೆ ಇದೆ. ಆದ್ದರಿಂದ ಕರ್ನಾಟಕ ಪೊಲೀಸ್​​ ಇಲಾಖೆಗೆ ರಾಜೀನಾಮೆ ನೀಡಿ ನನ್ನೂರಿಗೆ ಬಂದಿದ್ದೇನೆ. ಜನರ ಸೇವೆ ಮಾಡಲಿದ್ದೇನೆ ಎಂದರು.

ಕರ್ನಾಟಕದಲ್ಲಿ 10 ವರ್ಷ ಪೊಲೀಸ್​​ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಮುಂದಿನ ಆಲೋಚನೆ ಬೇರೆ ಇದೆ. ಕುಟುಂಬದ ಜತೆ ಸಮಯ ಕಳೆಯುವುದು, ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಬೇಕು, ಜನರ ಸೇವೆ ಮಾಡಬೇಕು, ರಾಜಕೀಯ ವ್ಯವಸ್ಥೆ ಬದಲಾಯಿಸಬೇಕು, ಪೊಲೀಸ್​​ ಅಧಿಕಾರಿಗಳಿ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ಹೇಳಿಕೊಂಡರು.

ಈ ಹಿಂದೆಯೇ ಕಳೆದ ವರ್ಷ ತಿಂಗಳು ಮೇ 28ಕ್ಕೆ ಭಾರತೀಯ ಪೊಲೀಸ್ ಸೇವೆಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದರು. ಪತ್ರ ವ್ಯವಹಾರ ಎಲ್ಲಾ ಪ್ರಕ್ರಿಯೆಗಳಿಗೂ ಕೆಲ ಕಾಲ ಸಮಯ ತೆಗೆದುಕೊಂಡಿದ್ದ ಸರ್ಕಾರ ಬಳಿಕ ರಾಜೀನಾಮೆ ಅಂಗೀಕಾರ ಮಾಡಿತ್ತು.

ರಾಜೀನಾಮೆ ನೀಡುವ ಮುನ್ನ ಅಣ್ಣಾಮಲೈ ಅವರು, ಸುಮಾರು 6 ತಿಂಗಳಿನಿಂದಲೂ ನಾನು ಈ ಆಲೋಚನೆಯಲ್ಲಿದ್ದೆ. ಐಪಿಎಸ್​​ಗೆ ಆಯ್ಕೆಯಾಗಿ 9 ವರ್ಷಗಳೇ ಆಗಿವೆ. ನಾನು ಆ 9 ವರ್ಷಗಳ ಪ್ರತಿಯೊಂದು ಕ್ಷಣದಲ್ಲೂ ಖಾಕಿ ಜೊತೆಯಲ್ಲೇ ಬದುಕಿದೆ. ಪೊಲೀಸ್ ಕೆಲಸಕ್ಕಿಂತ ಸರಿ ಸಮನಾದ ಮತ್ತೊಂದು ಕೆಲಸ ಇಲ್ಲ ಎಂದು ನಂಬಿದವನು ನಾನು. ಇದನ್ನ ನನ್ನ ಎಷ್ಟೋ ಮಂದಿ ಜೊತೆಗಾರರೊಂದಿಗೂ ಹಂಚಿಕೊಂಡಿದ್ದೇನೆ ಎಂದಿದ್ದರು.

Source: News 18


Spread the love