ತಾಂತ್ರಿಕ ಶಿಕ್ಷಣದಲ್ಲಿ ಪ್ರಾಯೋಗಿಕ ಅನುಭವಗಳಿಗೆ ಆದ್ಯತೆ ನೀಡಿ: ಪ್ರೊ. ಆರ್.ವಿ.ರವಿಕೃಷ್ಣ

Spread the love

ತಾಂತ್ರಿಕ ಶಿಕ್ಷಣದಲ್ಲಿ ಪ್ರಾಯೋಗಿಕ ಅನುಭವಗಳಿಗೆ ಆದ್ಯತೆ ನೀಡಿ: ಪ್ರೊ. ಆರ್.ವಿ.ರವಿಕೃಷ್ಣ 

ಮಂಗಳೂರು: ತಾಂತ್ರಿಕ ಶಿಕ್ಷಣವನ್ನು ವಿದ್ಯಾರ್ಥಿಗಳು ಕೇವಲ ಪರೀಕ್ಷೆಯನ್ನು ಗೆಲ್ಲುವ ಅಂಕಗಳ ಸಂಪಾದನೆಯ ಗುರಿಯನ್ನಾಗಿ ನೋಡದೇ ಪ್ರಾಯೋಗಿಕ ಅನುಭವಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೈತಿಕತೆಯನ್ನು ಕಾಯ್ದುಕೊಂಡು ಸಂವಹನ ಕೌಶಲಗಳನ್ನು ಬೆಳೆಸಿಕೊಂಡು ತಮ್ಮ ಗ್ರಾಮಾಂತರ ಪರಿಸರದಲ್ಲಿ ಅಗತ್ಯತೆಗಳಿಗೆ ತಾಂತ್ರಿಕ ಕಲಿಕೆಯನ್ನು ಅನ್ವಯಿಸಿ ಕೊಡುಗೆ ಸಲ್ಲಿಸುವಂತಾಗಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಆರ್.ವಿ.ರವಿಕೃಷ್ಣ ಹೇಳಿದರು. ಅವರು ಮಂಗಳವಾರ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನಗಳ ಕ್ಯಾನ್ಟೆಕ್, ಎಕ್ಸ್ಟ್ಯಾಟಿಕ್ ತಾಂತ್ರಿಕ ಸಾಂಸ್ಕೃತಿಕ ಉತ್ಸವ,   ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮೂಲಭೂತ ಸೌಕರ್ಯಗಳಿಲ್ಲದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪರಿಸರದಿಂದ ವಿದ್ಯಾಥರ್ಿಗಳಲ್ಲಿ ಗುಣಮಟ್ಟದ ಕೊರತೆ ರಾಷ್ಟ್ರಮಟ್ಟದಲ್ಲಿನ ಸಮಸ್ಯೆಯಾಗಿದೆ. ಇನ್ನೊಂದೆಡೆ ವೃತ್ತಿ ಶಿಕ್ಷಣದಲ್ಲಿ ನೈತಿಕತೆಯ ಪಠ್ಯವಸ್ತು ವಿದೇಶೀ ಮೌಲ್ಯಗಳಿಂದ ಕೂಡಿದ್ದು ಭಾರತೀಯತೆಗೆ ಹೊಂದುತ್ತಿಲ್ಲ ಎಂದವರು ವಿಷಾದಿಸಿದ ಅವರು ಕೇಂದ್ರ ಸರ್ಕಾರ ನೀತಿ ಆಯೋಗದ ಮೂಲಕ ತಾಂತ್ರಿಕ ಶಿಕ್ಷಣದ ಬೆಳವಣಿಗೆಗೆ ನೀಡುತ್ತಿರುವ ಅನುದಾನ, ಪ್ರೋತ್ಸಾಹವನ್ನು ಬಳಸಿಕೊಳ್ಳಬೇಕಾಗಿದೆ ಎಂದವರು ಹೇಳಿದರು.

ಎಂದು ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ರೊಬೋಸಾಫ್ಟ್ ಟೆಕ್ನಾಲಜೀಸ್ನ ಸಿಒಒ. ಶೈಲಜಾ ರಾವ್ ಮಾತನಾಡಿ ತಂತ್ರಜ್ಞಾನದ ಬೆಳವಣಿಗೆಯನ್ನು ಅರ್ಥ ಮಾಡಿಕೊಂಡು ಯುವಜನತೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರೀಯ ಪ್ರಗತಿಯಲ್ಲಿ ಸಹಭಾಗಿಗಳಾಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ ಕಾಲೇಜಿನಲ್ಲಿ ಪ್ರಾಯೋಗಿಕ ಚಟುವಟಿಕೆಗಳನ್ನು ಹೆಚ್ಚಿಸಿ ಉತ್ಪಾದಕತೆಯುಳ್ಳ ಪ್ರಾಜೆಕ್ಟ್ಗಳನ್ನು ಅಭಿವೃದ್ಧಿ ಪಡಿಸಲು ನೂತನ ಇನ್ಕುಬೇಷನ್ ಸೆಂಟರ್ ತೆರೆಯುವ ನಿರ್ಧಾರ ತಳೆಯಲಾಗಿದೆ ಎಂದರು. ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರೀಕರಾಗುವುದರ ಜತೆಗೆ ಯಶಸ್ವೀ ಇಂಜಿನಿಯರ್ಗಳಾಗುವಂತೆ ಅವರು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಾಮತ್ ಮಾತನಾಡಿ ನೈತಿಕತೆ, ಕರ್ತವ್ಯ ಪ್ರಜ್ಞೆಯೊಂದಿಗೆ ವಿದ್ಯಾಥರ್ಿಗಳು ಶಿಕ್ಷಣದಿಂದ ವಿನಯವಂತರಾಗಬೇಕು ಎಂದರು.

ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ವಾರ್ಷಿಕ ವರದಿ ಮಂಡಿಸಿದರು. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ಡೇಮಿಯನ್. ಎ.ಡಿಮೆಲ್ಲೋ, ಇಲೆಕ್ಟ್ರಿಕಲ್ ವಿಭಾಗ ಮುಖ್ಯಸ್ಥೆ ಡಾ.ರಾಜಲಕ್ಷ್ಮೀ ಸಾಮಗ ಅತಿಥಿಗಳನ್ನು ಪರಿಚಯಿಸಿದರು. ಸಹ ಪ್ರಾಧ್ಯಾಪಕಿ ಶಿವಾನಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಸ್ನೇಹಾ ಕೆ, ರೇಹಾ ಸಹನಾ ತಮ್ಮ ಅನಿಸಿಕೆ, ಶುಭ ಹಾರೈಕೆ ವ್ಯಕ್ತಪಡಿಸಿದರು. ಕಾಲೇಜಿನ ಶೈಕ್ಷಣಿಕ,ಸಾಂಸ್ಕೃತಿಕ, ಕ್ರೀಡಾ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು.

ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ. ಅಣ್ಣಪ್ಪ ಪೈ, ಕೋಶಾಧಿಕಾರಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಎಂ.ವಾಮನ ಕಾಮತ್, ಸದಸ್ಯರಾದ ಕೊಚ್ಚಿಕಾರ್ ಸುಧಾಕರ ಪೈ, ಬಸ್ತಿ ಪುರುಷೋತ್ತಮ ಶೆಣೈ, ಎಂ.ಗಣೇಶ್ ಕಾಮತ್, ಸುರೇಶ್ ಕಾಮತ್,  ಕೌನ್ಸಿಲ್ ಸದಸ್ಯರಾದ ಎಂ. ರಮೇಶ್ ಕಾಮತ್, ಗೋಪಾಲ ರಾವ್, ಎಂ.ಬಿ. ಪಡಿಯಾರ್,  ವಿದ್ಯಾಥರ್ಿ ಮುಖ್ಯ ಸಮನ್ವಯಕಾರ ಅವಿನಾಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕ ಎಂ.ಪದ್ಮನಾಭ ಪೈ ಸ್ವಾಗತಿಸಿದರು. ಸಾಂಸ್ಕೃತಿಕ ಕಲಾಪದ ಸಮನ್ವಯಕಾರ ಎನ್.ಸತೀಶ್ ಕುಮಾರ್ ವಂದಿಸಿದರು.

 


Spread the love