ತುಳು ನಾಟಕ ಪರ್ಬ – 2018 ಕೆ. ಎನ್. ಟೇಲರ್ ನೆಂಪು ;ತುಳು ರಂಗಭೂಮಿಯ ಪ್ರಾತಸ್ಮರಣೀಯರು

Spread the love

ತುಳು ನಾಟಕ ಪರ್ಬ – 2018 ಕೆ. ಎನ್. ಟೇಲರ್ ನೆಂಪು ;ತುಳು ರಂಗಭೂಮಿಯ ಪ್ರಾತಸ್ಮರಣೀಯರು

ಮಂಗಳೂರು: ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ವರನಟ ರಾಜ್‍ಕುಮಾರ್‍ರಂತೆ ತುಳು ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕೆ. ಎನ್. ಟೇಲರ್ ಪ್ರಾತ:ಸ್ಮರಣೀಯರಾಗಿದ್ದಾರೆ ಎಂದು ತುಳು ರಂಗ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಎಮಿ ಮತ್ತು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಪುರಭವನದಲ್ಲಿ ನಡೆಯುತ್ತಿರುವ 8 ದಿನಗಳ ತುಳು ನಾಟಕ ಪರ್ಬದಲ್ಲಿ 5ನೇ ದಿನದ ಕಾರ್ಯಕ್ರಮದಲ್ಲಿ ತುಳುರಂಗ ಭೂಮಿಯ ದಿಗ್ಗಜ ಕೆ. ಎನ್ ಟೇಲರ್‍ರವರ ಸಂಸ್ಮರಣೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಕಾರ್ಕಳದ ಕಡಂದಲೆಯ ನಾರಾಯಣ ಅವರು ಮಂಗಳೂರಿಗೆ ಬಂದು ತನ್ನ ನಿಕಟ ಬಂಧುಗಳ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ವೃತ್ತಿ ಕಲಿತು ಕೆ. ಎನ್. ಟೈಲರ್ ಎಂದು ಗುರುತಿಸಿ ಕೊಂಡರು. ನಾಟಕದ ಮೇಲಿನ ಅಭಿಮಾನದಿಂದ ತನ್ನ ವೃತ್ತಿಯಲ್ಲಿ ನಷ್ಟ ಹೊಂದಿ ಮುಂಬಯಿಗೆ ಹೋಗಿ ಬಳಿಕ ವೃತ್ತಿಯಲ್ಲಿ ಹಾಗೂ ಪ್ರವೃತ್ತಿಯಲ್ಲಿ ಯಶಸ್ಸು ಕಂಡರು. ಉರಿಗೆ ಬಂದು ಟೈಲರ್ ವೃತ್ತಿಯನ್ನು ಮುಂದುವರಿಸಿದರು. ನಾಟಕ ಕ್ಷೇತ್ರಕ್ಕೆ ಪೂರಕ ವಾತಾವರಣ ಇಲ್ಲದಂತಹ ಸಂದರ್ಭದಲ್ಲಿಯೂ, ಲಭ್ಯ ತಂತ್ರಜಾನ ಬಳಸಿ ರಂಗ ಚಟುವಟಿಕೆಗೆ ಆಧುನಿಕ ಸ್ಪರ್ಶ ನೀಡಿದವರು ಕೆ. ಎನ್ ಟೈಲರ್ ಎಂದು ನವನೀತ ಶೆಟ್ಟಿ ನುಡಿದರು.

70 ರ ದಶಕದಲ್ಲಿ ಪ್ರಥಮ ತುಳು ಸಿನೇಮಾವನ್ನು ಮಾಡಿದರು. ಕೆ. ಎನ್ ಟೇಲರ್ ಆದರೆ ಬಿಡುಗಡೆಯಾದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನಗಳಿಸಿದೆ. 80 ರ ದಶಕದಲ್ಲಿ ಬಿಡುಗಡೆಯಾದ ಹೆಚ್ಚಿನ ಸಿನೇಮಾಗಳು ಕೆ. ಎನ್ ಟೆಲರ್ ಅವರದ್ದು, ಅವರ ಎಲ್ಲಾ ನಾಟಕ ಹಾಗೂ ಸಿನೇಮಾಗಳಲ್ಲಿ ನಾಯಕ ನಟನಾಗಿಯೇ ಗುರುತಿಸಿಕೊಂಡದ್ದು ಟೇಲರ್ ಅವರ ಹೆಗ್ಗಳಿಕೆ ಎಂದು ನವನೀತ್‍ರವರು ಹೇಳಿದರು.

ಹಿರಿಯ ರಂಗನಟ, ಟೇಲರ್‍ರವರ ಒಡನಾಡಿ ಸೀತಾರಾಮ ಶೆಟ್ಟಿ ದೀಪ ಪ್ರಜ್ವಲನ ಮಾಡಿ ಪುಷ್ಪಾರ್ಚನೆ ಮಾಡಿದರು. ಮಮತಾ ಸುರೇಶ್ ಹಾಗೂ ಕುಟುಂಬ ಸದಸ್ಯರು, ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ, ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ, ಡಾ. ವೈ. ಎನ್ ಶೆಟ್ಟಿ, ಚಂದ್ರಶೇಖರ ಗಟ್ಟಿ, ಸುಧಾನಾಗೇಶ್, ಡಾ. ವಾಸುŒದೇವ ಬೆಳ್ಳೆ, ತಾರನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು. ಸಂಸ್ಮರಣೆಯ ಬಳಿಕ ಕೆ. ಎನ್. ಟೇಲರ್‍ರವರ ಕೃತಿ ತಮ್ಮಲೆ ಅರ್ವತ್ತನ ಕೋಲ ನಾಟಕವನ್ನು ರಮೇಶ್ ಆಚಾರ್ಯ ಪೆರ್ಡೂರುರವರ ನಿರ್ದೇಶನದಲ್ಲಿ ಕೂಡ್ದಿ ಕಲಾವಿದೆರ್ ರಂಗದ ಮೇಲೆ ಪ್ರದರ್ಶಿಸಿದರು.

ಕೆ. ಬಿ ಭಂಡಾರಿ ನೆಂಪು: ತುಳು ನಾಟಕ ಪರ್ಬದ 6ನೇ ದಿನದ ಕಾರ್ಯಕ್ರಮದಲ್ಲಿ ಕೆ. ಬಿ ಭಂಡಾರಿ ಅವರ ನೆಂಪು ಕಾರ್ಯಕ್ರಮ ಜರಗಿತು. ಹಿರಿಯ ಚಲನಚಿತ್ರ ನಟಿ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಸರೋಜಿನಿ ಶೆಟ್ಟಿ ನುಡಿನಮನ ಸಲ್ಲಿಸಿದರು. ಕೆ. ಬಿ ಭಂಡಾರಿ ತನ್ನ ಜೀವನವನ್ನು ಸಂಪೂರ್ಣವಾಗಿ ತುಳು ರಂಗಭೂಮಿಗೆ ಅರ್ಪಿಸಿಕೊಂಡು ಏಕಾಂಗಿಯಾಗಿ ಜೀವನ ನಡೆಸಿದವರು. ತುಳು ರಂಗ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡವರನ್ನು ಮಕ್ಕಳಂತೆ ಪ್ರೀತಿಸುತ್ತಿದ್ದ ಅವರು ತುಳು ರಂಗ ಭೂಮಿಯ ಎಲ್ಲಾ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದರು ಎಂದು ಹೇಳಿದರು. ರಂಗಕಲಾವಿದ ನಿರಂಜನ್‍ಸಾಲ್ಯಾನ್ ದೀಪ ಪ್ರಜ್ವಲನ ಮಾಡಿ ಪುಷ್ಪಾರ್ಜನೆ ನಡೆಸಿದರು. ಕೆ. ಬಿ ಭಂಡಾರಿಯವರ ಕುಟುಂಬದ ಪ್ರತಿನಿಧಿಯಾಗಿ ಕಿಶನ್‍ಚಂದ್ ಮಾಡ, ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ, ಮಹಾನಗರಪಾಲಿಕೆ ಸದಸ್ಯರಾದ ಎಂ. ಅಬ್ದುಲ್ ಅಜೀಜ್, ದೀಪಕ್ ಪೂಜಾರಿ ಭಾಗವಹಿಸಿದ್ದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಎ. ಶಿವಾನಂದ ಕರ್ಕೇರ, ತಾರನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು.


Spread the love