ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಅಣ್ಣಾಮಲೈ ಬೆಂಬಲ

Spread the love

ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಅಣ್ಣಾಮಲೈ ಬೆಂಬಲ

ಉಡುಪಿ: ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ತುಳುನಾಡಿಗರ ಪುನರ್ ಹೋರಾಟಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬೆಂಬಲ ಘೋಷಿಸಿದ್ದಾರೆ.

ತುಳು ಹೋರಾಟಕ್ಕೆ ಬೆಂಬಲವನ್ನು ಘೋಷಿಸಿ ಅಣ್ಣಾಮಲೈ ಭಾನುವಾರ ರಾತ್ರಿ ಸುಮಾರು 11:58ಕ್ಕೆ ಟ್ವಿಟ್ ಮಾಡಿದ್ದು, ಈವರೆಗೆ 1200ಕ್ಕೂ ಅಧಿಕ ಮಂದಿ ಈ ಟ್ವಿಟ್ನ್ನು ಲೈಕ್ ಮಾಡಿದ್ದರೆ 250ಕ್ಕೂ ಅಧಿಕ ಮಂದಿ ಅದನ್ನು ಮರು ಟ್ವಿಟ್ ಮಾಡಿದ್ದಾರೆ.

ತುಳು ಭಾಷೆ ಅಗಾಧ ಇತಿಹಾಸ ಮತ್ತು ಸಂಪ್ರದಾಯದೊಂದಿಗೆ ವಿಕಸನಗೊಂಡ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಇಂತಹ ತುಳುನಾಡಿನಲ್ಲಿ ಸೇವೆ ಸಲ್ಲಿಸುವ ಗೌರವ ನನ್ನ ಪಾಲಿಗೆ ಒದಗಿರುವುದು ನನ್ನ ಭಾಗ್ಯ. ನಾನು ತುಳು ಭಾಷೆ ಹಾಗೂ ಅದರ ಮಹಾಕಾವ್ಯಗಳು ಮತ್ತು ಸಿರಿ ಮತ್ತು ಕೋಟಿ ಚೆನ್ನಯ್ಯರ ಸಿರಿವಂತಿಕೆಯನ್ನು ನಾನು ಚೆನ್ನಾಗಿ ಅರಿತಿರುತ್ತೇನೆ. ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳ್ಳಲು ತುಳು ಭಾಷೆ ಸಂಪೂರ್ಣ ಅರ್ಹವಾಗಿದೆ’ ಎಂದವರು ಟ್ವಿಟ್ನಲ್ಲಿ ಬರೆದುಕೊಂಡಿದ್ದಾರೆ.

ಅಣ್ಣಾಮಲೈ ಅವರು ಉಡುಪಿಯಲ್ಲಿ ಸಮಾರು ಮೂರು ವರ್ಷ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅವರು ತುಳು ಭಾಷೆಯ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿದ್ದರು. ಇತ್ತೀಚೆಗೆ ಪುತ್ತೂರಿನಲ್ಲಿ ಯುವ ವಾಹಿನ ಕಾರ್ಯಕ್ರಮಕ್ಕೆ ಬಂದಾಗ ತುಳುವಿನಲ್ಲಿ ಮಾತನಾಡಿ ಗಮನವನ್ನು ಸೆಳೆದಿದ್ದರು.


Spread the love