ತೂಕ ಇಳಿಸಿಕೊಂಡ ಪೋಲಿಸರಿಗೆ ವರ್ಗಾವಣೆ ಭಾಗ್ಯ ಕಲ್ಪಿಸಿದ ಎಸ್ಪಿ ಅಣ್ಣಾಮಲೈ!

Spread the love

ತೂಕ ಇಳಿಸಿಕೊಂಡ ಪೋಲಿಸರಿಗೆ ವರ್ಗಾವಣೆ ಭಾಗ್ಯ ಕಲ್ಪಿಸಿದ ಎಸ್ಪಿ ಅಣ್ಣಾಮಲೈ!

ಚಿಕ್ಕಮಗಳೂರು:  3 ಕೆಜಿ ತೂಕ ಇಳಿಸಿಕೊಂಡ ಪೋಲಿಸರಿಗೆ ತಾವು ಕೇಳಿದ್ದಲ್ಲಿಗೆ ವರ್ಗಾವಣೆ ಭಾಗ್ಯ ಕಲ್ಪಿಸಿವುದರೊಂದಿಗೆ ಕೊಟ್ಟ ಮಾತನ್ನು ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಉಳಿಸಕೊಂಡಿದ್ದಾರೆ.

ಉತ್ತಮ ಕಾರ್ಯನಿರ್ವಹಣೆಯಲ್ಲಿ ಹೆಸರು ಗಳಿಸಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಈ ಹಿಂದೆ 2016ನೇ ಸಾಲಿನ ಜಿಲ್ಲಾ ಪೋಲಿಸ್ ಕ್ರೀಡಾ ಕೂಟದಲ್ಲಿ ಪೋಲಿಸ್ ಸಿಬಂದಿ ತಮ್ಮ ದೇಹ ತೂಕ 3 ಕೆಜಿ ಕಡಿಮೆ ಮಾಡಿಕೊಂಡರೆ ತಾವು ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದರು.

ಅದರಂತೆ ಎಸ್ಪಿಯವರ ಆಫರ್ ಒಪ್ಪಿ 35 ಮಂದಿ ಸಿಬಂದಿ ಮೂರು ತಿಂಗಳ ಹಿಂದೆ ತಮ್ಮ ತೂಕ ಸಹಿತ ಹೆಸರು ನೊಂದಾಯಿಸಿದ್ದರು. 35 ಸಿಬಂದಿಯ ಹಳೆ ತೂಕದ ಜೊತೆ ಈಗಿನ ತೂಕವನ್ನು ತಾಳೆ ಹಾಕಲಾಯಿತು. ಈ ಪರಿಕ್ಷೇಯ್ಲಲ್ಲಿ 16 ಮಂದಿ ತೇರ್ಗಡೆಯಾದರು. ತೇರ್ಗಡೆಯಾದ ಪೋಲಿಸರಿಗೆ ಅವರು ಕೇಳಿದ ಸ್ಥಳಕ್ಕೆ ವರ್ಗಾವಣೆ ಆದೇಶ ನೀಡಿ ಕೊಟ್ಟ ಮಾತು ಉಳಿಸಿಕೊಂಡರು ಅಲ್ಲದೆ ಇದರ ಮೂಲಕ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಬುಧವಾರ   ವರ್ಗಾವಣಾ ಪ್ರಕ್ರಿಯೆ ನಡೆಯಿತು. ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ ಐ, ಹೆಡ್ ಕಾನ್ಸ್ ಟೇಬಲ್, ಕಾನ್ಸ್ ಟೇಬಲ್ ವರ್ಗಾವಣಾ ಪ್ರಕ್ರಿಯೆಗೆ ಹಾಜರಾಗಿದ್ದರು. ಎಸ್ಪಿ ಕೆ ಅಣ್ಣಾ ಮಲೈ ಖುದ್ದಾಗಿ ಪ್ರತಿಯೊಬ್ಬರ ತೂಕವನ್ನು ಪರಿಕ್ಷಿಸುತ್ತಿದ್ದರು. ವರ್ಗಾವಣೆಗೆ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕ ಯುವಕರೇ ಹೆಚ್ಚಾಗಿದ್ದರು.

 


Spread the love