ತೂಗು ಸೇತುವೆ ತಜ್ಞ ಗಿರೀಶ್ ಭಾರಧ್ವಾಜ್ ನಿಧನಕ್ಕೆ ಆರೋಗ್ಯ ಸಚಿವರ ಸಂತಾಪ

Spread the love

ತೂಗು ಸೇತುವೆ ತಜ್ಞ ಗಿರೀಶ್ ಭಾರಧ್ವಾಜ್ ನಿಧನಕ್ಕೆ ಆರೋಗ್ಯ ಸಚಿವರ ಸಂತಾಪ

ಮಂಗಳೂರು:  ದೇಶದ ಖ್ಯಾತ ತೂಗು ಸೇತುವೆ ತಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತರು ಗಿರೀಶ್ ಭಾರಧ್ವಾಜ್ ಅವರ ನಿಧನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್ ಸಂತಾಪ ಸೂಚಿಸಿದ್ದಾರೆ.

ಗಿರೀಶ್ ಭಾರಧ್ವಾಜ್ ಅವರು ತಮ್ಮ ವಿಶಿಷ್ಟ ತಾಂತ್ರಿಕ ಪರಿಣತಿ ಮತ್ತು ಸಮರ್ಪಿತ ಸೇವೆಯಿಂದ ದೇಶದಾದ್ಯಂತ ಅನೇಕ ತೂಗು ಸೇತುವೆಗಳ ನಿರ್ಮಾಣದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ವಿಶೇಷವಾಗಿ ದ್ವೀಪ ಪ್ರದೇಶದ ಜನರಿಗೆ ದೈನಂದಿನ ಜೀವನ ನಡೆಸಲು ಸಂಪರ್ಕ ಕಲ್ಪಿಸಿದ ಅನೇಕ ಸೇತುವೆಗಳು ಅವರ ಸೇವೆಯ ಸಾಕ್ಷಿಯಾಗಿವೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ.

ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಉಳಿಯ ಪ್ರದೇಶದಲ್ಲಿ ನಿರ್ಮಾಣವಾಗುವ ತೂಗು ಸೇತುವೆ ಕುರಿತು ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಕ್ಷಣಗಳು ನೆನಪಾಗುತ್ತಿವೆ. ಅವರ ಮಗ ಕೂಡ ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವುದು ಹೆಮ್ಮೆಕರ ಸಂಗತಿ ಎಂದು ಹೇಳಿದ್ದಾರೆ.


Spread the love
Subscribe
Notify of

0 Comments