ತೃತೀಯ ಭಾಷೆಯಾಗಿ ತುಳು: ಉಭಯ ಜಿಲ್ಲೆಗಳಲ್ಲಿ ಒಟ್ಟು 1584 ವಿದ್ಯಾರ್ಥಿಗಳು.

Spread the love

ತೃತೀಯ ಭಾಷೆಯಾಗಿ ತುಳು: ಉಭಯ ಜಿಲ್ಲೆಗಳಲ್ಲಿ ಒಟ್ಟು 1584 ವಿದ್ಯಾರ್ಥಿಗಳು.

ಮ0ಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಪ್ರಸ್ತುತ ಸಾಲಿನಲ್ಲಿ ಜ್ಯಾರಿ ಮಾಡಿರುವ ಶಾಲೆಗಳ ಸಂಖ್ಯೆ 13, 2016-17ರ ಸಾಲಿನ ಒಟ್ಟು 20 ಶಾಲೆಗಳು ಸೇರಿದಂತೆ ಪ್ರಸ್ತುತ ಒಟ್ಟು 33 ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಭೋಧಿಸಲಾಗುತ್ತಿದೆ.

ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಮತ್ತು ಉಡುಪಿ ಜಿಲ್ಲೆಯಲ್ಲಿ 3 ಶಾಲೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-15, ಬೆಳ್ತಂಗಡಿ-5, ಸುಳ್ಯ-4, ಬಂಟ್ವಾಳ-3, ಮಂಗಳೂರು-3 ಮತ್ತು ಉಡುಪಿ-3 ಶಾಲೆಗಳಿವೆ. ಪ್ರಸ್ತುತ 2017-18ರ ಸಾಲಿನಲ್ಲಿ 33 ಶಾಲೆಗಳಲ್ಲಿ ಒಟ್ಟಾರೆ 1574 ವಿದ್ಯಾರ್ಥಿಗಳಿರುತ್ತಾರೆ. ಈ ಪೈಕಿ 6ನೇ ತರಗತಿಯಲ್ಲಿ 97, 7ನೇ ತರಗತಿಯಲ್ಲಿ 126, 8ನೇ ತರಗತಿಯಲ್ಲಿ 418, 9ನೇ ತರಗತಿಯಲ್ಲಿ 517 ಮತ್ತು 10ನೇ ತರಗತಿಯಲ್ಲಿ 426 ವಿದ್ಯಾರ್ಥಿಗಳು ತುಳುವನ್ನು ಕಲಿಯುತ್ತಿದ್ದಾರೆ.

2016-17ರ ಸಾಲಿನಲ್ಲಿ ಒಟ್ಟು 956 ವಿದ್ಯಾರ್ಥಿಗಳಿದ್ದು 283 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದರು ಮತ್ತು ಎಲ್ಲರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು.


Spread the love