ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕಸಾಯಿಖಾನೆ ಸ್ಥಳಗಳು ಜಪ್ತಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಜಾನುವಾರು ಹತ್ಯೆ ಪ್ರಕರಣಗಳ ತನಿಖೆಯ ಭಾಗವಾಗಿ ಸಂಬಂಧಿಸಿದ ಸ್ಥಳಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
1) ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 125/2025, ಕಲಂ: 303(2) BNS, ಮತ್ತು ಕಲಂ: 4, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020, ಜೊತೆಗೆ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ಸಮಯದಲ್ಲಿ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕೆರೆಬಳಿ ಪ್ರದೇಶದಲ್ಲಿ ಆರೋಪಿಗಳಾದ ನಾಸೀರ್ ಮತ್ತು ಇತರರು ದನವನ್ನು ತಂದು ವಧೆ ಮಾಡಿದ ಸ್ಥಳವೆಂದು ಪತ್ತೆಯಾಗಿದ್ದು, ಅಲ್ಲಿನ ಆರೋಪಿಗಳ ವಾಸದ ಮನೆ, ಕಸಾಯಿಖಾನೆಯ ಶೆಡ್ ಹಾಗೂ ಜಾನುವಾರನ್ನು ಕಟ್ಟು ಹಾಕಿದ್ದ ಶೆಡ್‌ಗಳನ್ನು ಕಾಯ್ದೆಯ ಕಲಂ 8(1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿದ್ದಾರೆ.
ಮುಟ್ಟುಗೋಲು ವಿಧಿಸಲು ಮಂಗಳೂರು ಉಪವಿಭಾಗಿ ದಂಡಾಧಿಕಾರಿ ರವರಿಗೆ ಸಂಬಂಧಿಸಿದ ವರದಿ ನಿವೇದಿಸಲಾಗಿದೆ.
2) ಬೆಳ್ತಂಗಡಿ ಪೊಲೀಸ್ ಠಾಣೆ ಪ್ರಕರಣ
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 103/2025, ಕಲಂಗಳು: 4, 5, 7, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020, ಮತ್ತು 112(2), 303(2) BNS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ವೇಳೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬಳಿಯ ಮಹಮ್ಮದ್ ರಫೀಕ್ ಅವರ ಮನೆ ಹಾಗೂ ಪ್ರಸ್ತುತ ಖಾಲಿ ಜಾಗವನ್ನು, ಕೃತ್ಯಕ್ಕೆ ಬಳಸಿರುವ ಸ್ಥಳವೆಂದು ಪತ್ತೆ ಹಚ್ಚಿ, ಅದನ್ನು ಕಲಂ 8(1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿದ್ದಾರೆ.
ಮುಟ್ಟುಗೋಲು ವಿಧಿಸಲು ಪುತ್ತೂರು ಉಪವಿಭಾಗಿ ದಂಡಾಧಿಕಾರಿ ರವರಿಗೆ ವರದಿ ಸಲ್ಲಿಸಲಾಗಿದೆ.