ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(DKSC) ಕತ್ತರ್ ರಾಷ್ಟ್ರೀಯ ಸಮಿತಿಗೆ ಚಾಲನೆ 

Spread the love

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(DKSC) ಕತ್ತರ್ ರಾಷ್ಟ್ರೀಯ ಸಮಿತಿಗೆ ಚಾಲನೆ 

ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ರಂಗಗಳಲ್ಲಿ ಸ್ತುತ್ಯರ್ಹ ಸೇವೆಯನ್ನು ಸಲ್ಲಿಸುತ್ತಾ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಧಾರ್ಮಿಕ, ಲೌಕಿಕ ವಿಧ್ಯಾಭ್ಯಾಸ ನೀಡುವ ಮೂಲಕ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ರಿ.) ಮಂಗಳೂರು ಎಂಬ ಬೃಹತ್ ಸಂಘಟನೆಯು ಸೌದಿ ಅರೇಬಿಯಾ, ಯು.ಎ.ಇ., ಬಹ್ ರೈನ್, ಓಮಾನ್ ಹಾಗೂ ಕತ್ತರ್ ಮುಂತಾದ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿದ್ದು, ಇದೀಗ ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಅಧ್ಯಕ್ಷರಾದ ಬಹು. ಕೆ.ಎಸ್. ಆಟಕೋಯ ತಂಙಳ್’ರವರ ನೇತೃತ್ವದಲ್ಲಿ ನೂತನ ಕತ್ತರ್ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು.

ಬಹು. ಕುಂಬೋಳ್ ತಂಙಳರವರ ದುಆಶೀರ್ವಚನದ ಮೂಲಕ ಆರಂಭಗೊಂಡ ಸಭೆಯಲ್ಲಿ ನೆರೆದ ಸಭಿಕರನ್ನು ಉಸ್ತಾದ್ ಇಸ್ಹಾಖ್ ನಿಝಾಮಿಯವರು ಸ್ವಾಗತಿಸಿದರು.

ಮರ್ಕಝ್ ತ’ಅಲೀಮಿಲ್ ಇಹ್ಸಾನ್ ಮೂಳೂರು ಇದರ ಜನರಲ್ ಮ್ಯಾನೇಜರ್ ಮೌಲಾನಾ ಯು.ಕೆ. ಮುಸ್ತಫಾ ಸಅದಿ ಉದ್ಘಾಟಿಸಿ, ಅಲ್-ಇಹ್ಸಾನ್ ವುಮೆನ್ಸ್ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಬಹು. ಮುಹಮ್ಮದ್ ಅಲ್-ಖಾಸಿಮಿ ಮುಖ್ಯ ಪ್ರಭಾಷಣ ಮಾಡಿದರು.

ನೂತನ ಕತ್ತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಜನಾಬ್ ಸುಲೈಮಾನ್ ಮುಂಡ್ಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಇಸ್’ಹಾಖ್ ನಿಝಾಮಿ, ಕೋಶಾಧಿಕಾರಿಯಾಗಿ ಅಯ್ಯೂಬ್ ಹೊನ್ನಾವರ ಆಯ್ಕೆಗೊಂಡರೆ, ಉಪಾಧ್ಯಕ್ಷರುಗಳಾಗಿ ಅಸ್ಗರ್ ಮೂಳೂರು ಹಾಗೂ ಸಂಶುದ್ದೀನ್ ಕಾಟಿಪಳ್ಳ, ಜತೆ ಕಾರ್ಯದರ್ಶಿಗಳಾಗಿ ಸಯ್ಯದ್ ಅಬ್ದುಲ್ ರಝಾಖ್ ಮುಂಡ್ಕೂರ್ ಹಾಗೂ ನಿಹಾಲ್ ಇಬ್ರಾಹಿಂ ಕಾಪು, ಸಂಚಾಲಕರಾಗಿ ಪಿ.ಕೆ. ಮುಹಮ್ಮದ್ ಪೂಂಜಾಲಕಟ್ಟೆ, ಅನ್ವರ್ ಹಳೆಯಂಗಡಿ, ಅನ್ಸಾರ್ ಮಟ್ಪಾಡಿ ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ, ಜಮಾಲುದ್ದೀನ್ ಪಕ್ಷಿಕೆರೆ, ಹೈದರ್ ಅಲಿ ಹಸನ್ ಕುಂಜತ್ತಬೈಲು, ಅಬ್ದುಲ್ ಹಮೀದ್ ತೋಕೆ, ನಝೀರ್ ವಳಚ್ಚಿಲ್, ಅಬ್ದುಲ್ಲಾ ಮುಹಿಯದ್ದೀನ್ ಉಚ್ಚಿಲ, ಮುಹಮ್ಮದ್ ಅಶ್ರಫ್ ವಳಚ್ಚಿಲ್, ಫೈಝಲ್ ಬರ್ವ, ಅಬ್ದುಲ್ ರಹಿಮಾನ್ ಶಿರ್ವ, ಸೂಫಿ ಇಬ್ರಾಹಿಂ ನೇಜಾರ್, ಯಹ್ಯಾ ಕೊಡಗೈ, ಮುಹಮ್ಮದ್ ಶರೀಫ್ ಮಾಡೂರ್, ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಇಮ್ತಿಯಾಝ್ ಕಾರ್ನಾಡ್, ತಬ್’ಶೀರ್ ಮನ್’ಹರ್, ಇಮ್ರಾನ್ ಬಂಟ್ವಾಳ, ಫಾರೂಖ್ ಬೆಳಪು ಮತ್ತು ಹಬೀಬ್ ಹಿಮಮಿ ಇವರುಗಳನ್ನು ಆರಿಸಲಾಯಿತು.

ಸಭೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷರಾದ ಹಾಜಿ ಹಾತಿಂ ಕಂಚಿ, ಮಾಜಿ ಕಾರ್ಯಧ್ಯಕ್ಷರಾದ ಅಬ್ದುಲ್ ಹಮೀದ್ ಅರಾಮೆಕ್ಸ್, ಸಂಘಟನಾ ಕಾರ್ಯದರ್ಶಿ ಹಾಜಿ ಹಾತಿಂ ಕೂಳೂರು, ಕೋಶಾಧಿಕಾರಿ ಜನಾಬ್ ಸುಲೈಮಾನ್ ಸೂರಿಂಜೆ, ಸಂಘಟನಾ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್ ಆತೂರು, ಕಾರ್ಯದರ್ಶಿ ಜನಾಬ್ ಅಬೂಬಕ್ಕರ್ ಬರ್ವ, ಉಪಾಧ್ಯಕ್ಷರಾದ ಜನಾಬ್ ಇಮ್ತಿಯಾಝ್ ಕುಂದಾಪುರ ಹಾಗೂ ಮಕ್ಕಾಃ ವಲಯ ಸಮಿತಿಯ ಅಧ್ಯಕ್ಷ ಜನಾಬ್ ಇಬ್ರಾಹಿಂ ಕನ್ನಂಗಾರ್, ಬಹ್,ರೈನ್ ರಾಷ್ಟ್ರೀಯ ಸಮಿತಿಯ ನೇತಾರ ಸೀದಿ ಹಾಜಿ, ಒಮಾನ್ ರಾಷ್ಟ್ರೀಯ ಸಮಿತಿಯ ನೇತಾರ ಹಾಜಿ ಮೋನಬ್ಬ ಮುಂತಾದ ಘನ್ಯರು ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭಹಾರೈಸಿ ಹಿತವಚನ ನೀಡಿದರು.

ಡಿ.ಕೆ.ಎಸ್.ಸಿ. ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಜನಾಬ್ ದಾವೂದ್ ಕಜಮಾರ್ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ದೊಡ್ಡನಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ನೂತನ ಸಮಿತಿಯ ಉಪಾಧ್ಯಕ್ಷರಾದ ಸಂಶುದ್ದೀನ್ ಕಾಟಿಪಳ್ಳ ಸಭೆಯಲ್ಲಿ ಹಾಜರಿದ್ದ ಘನ್ಯರು ಹಾಗೂ ಸಭಿಕರನ್ನು ಅಭಿನಂದಿಸಿದರು


Spread the love