ದಕ, ಉಕ ಮತ್ತು ಶಿವಮೊಗ್ಗದವರಿಗೆ ಬಿಟ್ಬೇಟು ರೆಯವರಿಗೆ ಶುದ್ದಕನ್ನಡ ಮಾತನಾಡುವ ಯೋಗತ್ಯೆ ಇಲ್ಲ ; ಅನಂತ ಕುಮಾರ್ ಹೆಗಡೆ

Spread the love

ದಕ, ಉಕ ಮತ್ತು ಶಿವಮೊಗ್ಗದವರಿಗೆ ಬಿಟ್ಬೇಟು ರೆಯವರಿಗೆ ಶುದ್ದಕನ್ನಡ ಮಾತನಾಡುವ ಯೋಗತ್ಯೆ ಇಲ್ಲ ; ಅನಂತ ಕುಮಾರ್ ಹೆಗಡೆ

ಪುತ್ತೂರು: ಇಂಗ್ಲಿಷ್‌ ಅನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದಿನ ಸವಾಲು. ಶುದ್ಧ ಕನ್ನಡ ಯಾರಲ್ಲೂ ಇಲ್ಲ. ಎಲ್ಲೋ ಒಂದು ಕಡೆ ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಪ್ರದೇಶದವರನ್ನು ಹೊರತುಪಡಿಸಿದರೆ ಇತರರಿಗೆ ಆ ಯೋಗ್ಯತೆಯೇ ಇಲ್ಲ ಎನ್ನುವ ಮೂಲಕ ಕೇಂದ್ರ ಕೌಶಲ್ಯ ಅಭಿವೃದ್ದಿ ಸಚಿವ ಅನಂತ ಕುಮಾರ್ ಹೆಗಡೆ ವಿವಾದ ಸೃಷ್ಟಿಸಿದ್ದಾರೆ.

ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಅಡಿಯಲ್ಲಿ ಆರಂಭಿಸಲಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಅಲ್ಲಿನ ಸ್ಥಿತಿ ಚಿಂತಾ‌ಜನಕವಾಗಿದೆ. ಬೇಸಿಕ್ ಸ್ಕಿಲ್ ಇಲ್ಲದ ಸಿದ್ದಣ್ಣ ಸರಕಾರ ಇದೆ.
ರೀಜನಲ್ ಸ್ಕಿಲ್ ಗ್ಯಾಪ್ ಎನಾಲಿಸಿಸ್ ಮಾಡಲು ಕೇಂದ್ರ ಸರಕಾರ ನಮ್ಮ ರಾಜ್ಯ ಸರಕಾರಕ್ಕೆ ಅನುದಾನ ನೀಡಿದೆ. ಅದನ್ನು ನಮ್ಮ ಸಿದ್ದಣ್ಣ ಸರಕಾರ ಹೇಗೆ ಬಳಸುತ್ತದೋ ನೋಡಬೇಕು. ಬೇಸಿಕ್ ಸ್ಕಿಲ್ ಇಲ್ಲದವರು ಏನು ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಇದಕ್ಕೂ ಮೊದಲು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ಅಡಕೆ ಕ್ಯಾನ್ಸರ್ ಕಾರಕ ಎಂಬ ಕೇಂದ್ರ ಸರಕಾರದ ವರದಿಯ ಬಗ್ಗೆ ಬೆಳೆಗಾರರು ಚಿಂತೆ ಮಾಡಬೇಕಿಲ್ಲ ಎಂದರು.

ಕೇಂದ್ರ ಆರೋಗ್ಯ ಸಚಿವರು ಈ ವರದಿಯನ್ನು ಆಧರಿಸಿ ಸಂಸತ್ತಿನಲ್ಲಿ ಉತ್ತರ ನೀಡಿದ್ದು ಆ ಮೇಲೆ ನಮಗೆ ತಿಳಿಯಿತು. ಈ ಬಗ್ಗೆ ಸಚಿವರ ಜತೆ ಮಾತಾಡಿದ್ದೇವೆ. ಅಡಕೆಯ ಬಗ್ಗೆ ಮತ್ತೊಮ್ಮೆ ಸಿಪಿಸಿಆರ್ ಐ ಮೂಲಕ ಸಂಶೋಧನೆ ಮಾಡಿಸುವಂತೆ ಇಲಾಖೆಗೆ ಮನವರಿಕೆ ಮಾಡಲಾಗುವುದು ಎಂದು ಸಚಿವರು ಹೇಳಿದರು.


Spread the love