ದನದ ವ್ಯಾಪಾರಿ ಅನುಮಾಸ್ಪದ ಸಾವು; ಮೂವರು ಬಜರಂಗದಳ ಕಾರ್ಯಕರ್ತರು ವಶಕ್ಕೆ?

Spread the love

ದನದ ವ್ಯಾಪಾರಿ ಅನುಮಾಸ್ಪದ ಸಾವು; ಮೂವರು ಬಜರಂಗದಳ ಕಾರ್ಯಕರ್ತರು ವಶಕ್ಕೆ?

ಉಡುಪಿ/ಬಳ್ಳಾರಿ: ಉಡುಪಿ ಜಿಲ್ಲೆಯಲ್ಲಿ ಮಂಗಳೂರಿನ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೋಲಿಸರು ಬಳ್ಳಾರಿ ಪೋಲಿಸರ ಸಹಾಯದೊಂದಿಗೆ ಮೂರು ಮಂದಿ ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ವಶಕ್ಕೆ ಪಡೆದವರನ್ನು ಹೆಚ್.ಪ್ರಸಾದ್, ದೀಪಕ್ ಅಲಿಯಾಸ್ ಶೆಟ್ಟಿ ಮತ್ತು ಸುರೇಶ್ ಮೆಂಡನ್ ಅಲಿಯಾಸ್ ಸೂರಿ ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲೆ ಪೆರ್ಡೂರು ಗ್ರಾಮದ ಕೊಟ್ಟಾರು ಹಾಡಿಯಲ್ಲಿ ಹುಸೈನಬ್ಬ ಅವರ ಶವ ನಿನ್ನೆ ಪತ್ತೆಯಾಗಿದೆ. ಸ್ಕಾರ್ಪಿಯೋ ವಾಹನದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದ್ದನ್ನು ಬಜರಂಗ ದಳದ ಕಾರ್ಯಕರ್ತರು ದಾಳಿ ನಡೆಸಿದಾಗ ಹುಸೇನಬ್ಬ ತಪ್ಪಿಸಿಕೊಂಡಿದ್ದ. ಹುಸೈನಬ್ಬ ಅವರದು ಸಹಜ ಸಾವಲ್ಲ ಅವರನ್ನು  ಹತ್ಯೆ ಮಾಡಿದ್ದಾರೆಂದು ಹುಸೈನಬ್ಬ ಅವರ ಸಂಬಂಧಿಗಳು ದೂರು ನೀಡಿದ್ದರು.

ಮೃತ ವ್ಯಕ್ತಿ ಕಳೆದ 35 ವರ್ಷಗಳಿಂದ ಪೆರ್ಡೂರು ಸುತ್ತ ಮುತ್ತ ದಲ್ಲಾಳಿಗಳ ಮೂಲಕ ದನ ಖರೀದಿಸಿ ಸಾಗಿಸುತ್ತಿದ್ದ ಅದೇ ರೀತಿ ಮೇ.29ರಂದು ಬೆಳಗಿನ ಜಾವ ಎಂದಿನಂತೆ ಸ್ಕಾರ್ಪಿಯೋದಲ್ಲಿ ನಾಲ್ವರೊಂದಿಗೆ ದನ ಖರೀದಿಗೆ ಬೆಳಗ್ಗೆ ಹೊರಟಾಗ ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ಈ ವೇಳೆ ಹೆದರಿದ ಹುಸೈನಬ್ಬ ವಾಹನ ಬಿಟ್ಟು ಓಡಿ ಹೋಗಿದ್ದರು.

ನಂತರ ಅಕ್ರಮ ಜಾನುವಾರು ಸಾಗಣೆ ಎಂದು ಹಿರಿಯಡ್ಕ ಠಾಣೆಯಲ್ಲಿ ಪಿಎಸ್‍ಐ ಡಿ.ಎನ್. ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ, ಈ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಪಿಎಸ್‍ಐ ಕುಮಾರ್ ಅವರನ್ನು ಅಮಾನತ್ತು ಕೂಡ ಮಾಡಲಾಗಿದೆ.

ಮಾಹಿತಿಗಳ ಪ್ರಕಾರ ಈ ಮಧ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಜರಂಗದಳದ ಕಾರ್ಯಕರ್ತರು ತಲೆ ಮರೆಸಿಕೊಂಡಿದ್ದರು. ಅವರು ಬಳ್ಳಾರಿ ನಗರಕ್ಕೆ.ಎ.20 ಎಂ.ಬಿ.7864 ಕಾರಿನಲ್ಲಿ ಬಂದು ಆಶ್ರಯ ಪಡೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಎಸ್.ಪಿ. ಅವರು ಬಳ್ಳಾರಿ ಎಸ್ಪಿ ಅವರಿಗೆ ಮಾಹಿತಿ ನೀಡಿ ಅವರನ್ನು ವಶಕ್ಕೆ ಪಡೆಯಲು ಸೂಚಿಸಿದ್ದರೆಂದು ತಿಳಿದು ಬಂದಿದೆ. ವಶಕ್ಕೆ ಪಡೆದವರನ್ನು ಪೋಲಿಸರು ಉಡುಪಿಗೆ ಕರೆದು ತರುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು ಆ ಬಳಿಕವಷ್ಠೆ ಅಧಿಕೃತವಾಗಿ ಹೇಳಲಾಗುವುದು ಎಂದು ಉಡುಪಿ ಎಸ್ಪಿ ತಿಳಿಸಿದ್ದಾರೆ.


Spread the love