ದರೋಡೆ ಪ್ರಕರಣದಲ್ಲಿ ಭಾಗಿಯಾದ  ಇಬ್ಬರ ಸೆರೆ

Spread the love

ದರೋಡೆ ಪ್ರಕರಣದಲ್ಲಿ ಭಾಗಿಯಾದ  ಇಬ್ಬರ ಸೆರೆ

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಬಳಿಯ ಸ್ಟೂಡೆಂಟ್ ಹೌಸ್ ಎಂಬ ಕಟ್ಟಡದ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ.

ಪ್ರಕರಣದ ವಿವರ:

22-12-2018 ರಂದು ಸಂಜೆ ಸುಮಾರು 3-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಬಳಿಯಿರುವ ಸಹಾಲ್ ಸ್ಟೂಡೆಂಟ್ ಹೌಸ್ ಎಂಬಲ್ಲಿ ಲೆನಿನ್ ಮತ್ತು ಅವರ ಸ್ನೇಹಿತ ವಿಷ್ಣು ಪ್ರಕಾಶನ್ ಪಿ ಪಿ ರವರು ಇದ್ದಾಗ ಆರೋಪಿಗಳಾದ ಲುಕ್ಮಾನ್, ಅಕ್ಬರ್ ಮತ್ತು ಇತರ ಇಬ್ಬರು ಯುವಕರು ರೂಮಿನ ಒಳಗಡೆ ಬಂದು ಲೆನಿನ್ ಮತ್ತು ವಿಷ್ಣು ಪ್ರಕಾಶ್ ಟಿ ಪಿ ರವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಫಿರ್ಯಾದಿದಾರರ ಬಾಬ್ತು ರೂ. 8000/- ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್ ಮತ್ತು ಅದರಲ್ಲಿದ್ದ  ಸಿಮ್  ಮತ್ತು ವಿಷ್ಣು ಪ್ರಕಾಶ್ ರವರ ರೂ. 10000/- ಮೌಲ್ಯದ ಮೊಬೈಲ್ ಮತ್ತು ಸಿಮ್ ಕಾರ್ಡ್ ನ್ನು ಆರೋಪಿಗಳು ಬಲತ್ಕಾರವಾಗಿ ಕಸಿದುಕೊಂಡು ಹೋಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಮಂಗಳೂರು ನಗರದ ದೇರಳಕಟ್ಟೆಯ ಪರಿಸರದಲ್ಲಿದ್ದಾರೆಂಬ  ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮೊಹಮ್ಮದ್ ಅಕ್ಬರ್ (22), ಸಾವಿರ್, ಪ್ರಾಯ(23) ಎಂಬವರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.  ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶಾಂತಾರಾಮ, ಎಎಸ್ಐ ಶಶಿಧರ ಶೆಟ್ಟಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love