ದೀಪಕ್ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಹತ್ಯೆ ಮಾಡಿದರೆ ತಪ್ಪೇನು? ವಿವಾದಾತ್ಮಕ ಹೇಳಿಕೆ ನೀಡಿದ ಜಗದೀಶ್ ಶೇಣವ

Spread the love

ದೀಪಕ್ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಹತ್ಯೆ ಮಾಡಿದರೆ ತಪ್ಪೇನು? ವಿವಾದಾತ್ಮಕ ಹೇಳಿಕೆ ನೀಡಿದ ಜಗದೀಶ್ ಶೇಣವ

ಮಂಗಳೂರು: ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಅಮಾಯಕ ದೀಪಕ್ ರಾವ್ ಹತ್ಯೆಯಾಗಿದ್ದು ಅದಕ್ಕೆ ಪ್ರತಿಕಾರವಾಗಿ ಕೊಟ್ಟಾರ ಚೌಕಿಯ ಬಶೀರ್ ಹತ್ಯೆಯಾದರೆ ನಮಗೇನು ಚಿಂತೆಯಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ದೀಪಕ್ ರಾವ್ ಕೊಲೆಗೆ ಪ್ರತಿಕಾರವಾಗಿ ಬಶೀರ್ ಕೊಲೆ ನಡೆಯಿತು. ಈ ಕುರಿತು ಮಾಧ್ಯಮಗಳಲ್ಲಿ ಒರ್ವ ಅಮಾಯಕ ಮುಗ್ದ ಮುಸ್ಲಿಂನ ಹತ್ಯೆಯಾಯಿತು ಎಂದು ಬೊಬ್ಬಿಡಲಾಯಿತು.

ಬಶೀರ್ ಹತ್ಯೆಗೂ ಮುನ್ನ ಅಮಾಯಕ ದೀಪಕ್ ರಾವ್ ಹತ್ಯೆ ನಡೆಯಿತು ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತಿಯಾಗಿ ಬಶೀರ್ ಹತ್ಯೆಯಾದರೆ ವಿಶ್ವ ಹಿಂದೂ ಪರಿಷತ್ ಗೆ ಏನೂ ಕೂಡ ಚಿಂತೆ ಇಲ್ಲ. ಅಶ್ರಫ್ ಕೊಲೆಯಾದದ್ದಕ್ಕೆ ಶರತ್ ಮಡಿವಾಳನ ಹತ್ಯೆ ಮಾಡಬಹುದಾದರೆ ದೀಪಕ್ ರಾವ್ ಎನ್ನುವ ಮುಗ್ದನ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಹತ್ಯೆ ಮಾಡಬಾರದಾ ಎಂದು ಪ್ರಶ್ನಿಸಿದರು.

ಈ ನಮ್ಮ ಹೇಳಿಕೆಗೆ ನಾಳೆ ನಮ್ಮ ಮೇಲೆ ಕೇಸು ಆಗಬಹುದು ಆದರೆ ನಾವು ನಮ್ಮ ಹೇಳಿಕೆಗೆ ಬದ್ಧರು, ಏಕೆಂದರೆ ಸಮಾಜ ರೊಚ್ಚಿಗೆದ್ದಿದೆ. ನಮಗೆ ಇದನ್ನು ಮಾಡಲು ಸಾಧ್ಯವಾಗದೆ ಹೋದರು ಕೂಡ ಒಂದು ವರ್ಗ ಅದಕ್ಕಾಗಿ ಸ್ಪಂದಿಸಲು ತಯಾರಿಗದೆ. ಅಂತಹವರಿಗೆ ರಕ್ಷಣೆ ಕೊಡುವುದು ಸಮಾಜದ ಕರ್ತವ್ಯ ಎಂದರು.


Spread the love