ದೇಯಿ ಬೈದೇತಿಗೆ ಅವಮಾನ: ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ದಕ ಯುವ ಜೆಡಿಎಸ್ ಆಗ್ರಹ

Spread the love

ದೇಯಿ ಬೈದೇತಿಗೆ ಅವಮಾನ: ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ದಕ ಯುವ ಜೆಡಿಎಸ್ ಆಗ್ರಹ

ಮಂಗಳೂರು: ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳವಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದೇತಿ ಔಷಧೀಯ ವನವಿದೆ. ಈ ವನದಲ್ಲಿರುವ ದೇಯಿ ಬೈದೇದಿಯವರ ವಿಗೃಹಕ್ಕೆ ಯುವಕನೋರ್ವ ಅವಮಾನ ಮಾಡಿ ಅನಾಗರಿಕನಂತೆ  ವರ್ತಿಸಿದ್ದಾನೆ. ಈಗಾಗಲೇ ಬಂಧಿತನಾಗಿರುವ ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರು ಈ ಈ ಕೃತ್ಯದಿಂದ ಇಡೀ ನಮ್ಮ ಸಮಾಜಕ್ಕೆ ನೋವಾಗಿದೆ ಈತನ ಮೇಲೆ ಗೂಂಡಾ ಕಾಯ್ದೆಯನ್ನು ಹಾಕಿ ಕಠಿಣ ಕ್ರಮವನ್ನು ಕೈಗೊಳ್ಳಬೇಕು ದೇಹಿ ಬೈದೇಹಿ ಔಷಧಿ ವನ ಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು ಅಲ್ಲದೆ ಔಷದಿ ವನಕ್ಕೆ ಭದ್ರತಾ ಸಿಬಂದಿಗಳನ್ನು ನಿಯೋಜಿಸಬೇಕು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಜಾತ್ಯತೀತ ಜನತಾದಳ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ, ರಾಜ್ಯ ನಾಯಕರಾದ ಗೋಪಾಲಕೃಷ್ಣ, ಯುವ ಜನತಾದಳ ಮಹಾಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ರೈ, ಜಿಲ್ಲಾ ಯುವ ಕಾರ್ಯದರ್ಶಿ ಫೈಸಲ್, ಯುವ ನಾಯಕರುಗಳಾದ ಸಿನಾನ್, ತೇಜಸ್ ನಾಯಕ್, ಹಿತೇಶ್ ರೈ, ಹಾಜಿಕ್, ಪ್ರಜ್ವಲ್   ಮುಂತಾದವರು ಈ ನಿಯೋಗದಲ್ಲಿ ಉಪಸ್ಥಿತರಿದ್ದರು .


Spread the love