ದ.ಕ. ಜಿಲ್ಲಾದ್ಯಂತ   ಮಾ.31ರವರೆಗೆ ಸೆಕ್ಷನ್ 144 ಜಾರಿ

Spread the love

ದ.ಕ. ಜಿಲ್ಲಾದ್ಯಂತ   ಮಾ.31ರವರೆಗೆ ಸೆಕ್ಷನ್ 144 ಜಾರಿ

ಮಂಗಳೂರು : ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕರು ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ.

ಮಾ.22ರ ಮಧ್ಯರಾತ್ರಿ 12 ಗಂಟೆಯಿಂದ ಮಾ.31ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ರಾಜ್ಯ ಜಿಲ್ಲೆಗಳಲ್ಲಿ ಈ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದನ್ನ ಗಮನಿಸಲಾಗಿರುತ್ತದೆ. ನೆರೆಯ ರಾಜ್ಯ, ಜಿಲ್ಲೆಗಳಿಂದ ದಕ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದ ವ್ಯಕ್ತಿಯಿಂದ ವ್ಯಕ್ತಿಗೆ ಈ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದ್ದು, ಜಿಲ್ಲೆಯಲ್ಲಿ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ಅನಿವಾರ್ಯವಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ಹೊರಡಿಸಿದ್ದಾರೆ.

ಏನೇನು ನಿರ್ಬಂಧ?
– ದ.ಕ. ಜಿಲ್ಲೆಯಿಂದ ಇತರ ಜಿಲ್ಲೆ, ರಾಜ್ಯಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲ.
– ಸರಕಾರಿ-ಖಾಸಗಿ ಕಾರ್ಯಕ್ರಮಗಳು ಸ್ಥಗಿತ
– ಜನರು ಗುಂಪು ಸೇರುವಂತಿಲ್ಲ.
– ಬಾರ್, ರೆಸ್ಟೋರೆಂಟ್ ಬಂದ್
– ಸರಕು ಸಾಗಾಟಕ್ಕೆ ಅನುಮತಿ ಇಲ್ಲ.
– ಗೂಡ್ಸ್ ವಾಹನಗಳು, ಮಾಲ್, ಚಿತ್ರಮಂದಿರಗಳು ಬಂದ್

ಏನೇನು ಇವೆ?
– ಆಸ್ಪತ್ರೆ ಸೇವೆ
– ಮೆಡಿಕಲ್ ಶಾಪ್
– ಆಯಂಬ್ಯುಲೆನ್ಸ್ ಸೇವೆ
– ನಿತ್ಯ ಜೀವನದ ಅಗತ್ಯ ವಸ್ತುಗಳು
– ನೀರು ಸರಬರಾಜು

ನಿರ್ಬಂಧಗಳು
– ತುರ್ತು ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಹೋಗಬಾರದು.
– ಸಭೆ ಸಮಾರಂಭಗಳು, ಜಾತ್ರೆ-ಉತ್ಸವ ಆಚರಿಸಬಾರದು.
– ಅಂಗಡಿ, ವಾಣಿಜ್ಯ ಸಂಕೀರ್ಣ, ವರ್ಕ್‌ಶಾಪ್, ಗೋದಾಮುಗಳನ್ನು ಮುಚ್ಚಬೇಕು.
– ಕೈಗಾರಿಕೆ-ಕಾರ್ಖಾನೆಗಳಲ್ಲಿ ಶೇ.50ರ ಅನುಪಾತದ ರೊಟೇಶನ್ ಆಧಾರದಲ್ಲಿ ಕೆಲಸ ನಿರ್ವಹಿಸಬೇಕು.
– ಮಾಹಿತಿ ತ್ತು ಜೈವಿಕ ತಂತ್ರಜ್ಞಾನ ಘಟಕಗಳ ಪೈಕಿ ತುರ್ತು ಹೊರತು ಇತರ ಸೇವೆಗಳನ್ನು ಮನೆಯಿಂದಲೇ ನೀಡಬೇಕು.
– ಬೀಚ್-ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.
– ಕ್ರೀಡಾಕೂಟ, ಶಿಬಿರ, ಉಪನ್ಯಾಸ, ಕಮ್ಮಟ, ವಸ್ತುಪ್ರದರ್ಶ, ಸಂಗೀತ ಕಾರ್ಯಕ್ರಮ, ಬೇಸಿಗೆ ಶಿಬಿರ ಇತ್ಯಾದಿ ಎಲ್ಲವನ್ನೂ ನಿಷೇಧಿಸಲಾಗಿದೆ.

ವಿನಾಯಿತಿಗಳು
– ಪಡಿತರ ಅಂಗಡಿ, ಮೀನು ಮಾರುಕಟ್ಟೆ, ತರಕಾರಿ, ಹಣ್ಣು ಹಂಪಲು ಅಂಗಡಿಗಳು
– ಅಂಚೆ, ಪೊಲೀಸ್, ಅಗ್ನಿಶಾಮಕ ದಳದ ಸೇವೆಗಳು
– ಸರಕಾರಿ ಕಚೇರಿಗಳು
– ಬ್ಯಾಂಕ್, ಎಟಿಎಂ, ದೂರವಾಣಿ, ಇಂಟರ್‌ನೆಟ್ ಸೇವೆಗಳು
– ಎಲ್ಲಾ ಸರಕು ಸಾಗಾಣಿಕೆ ವಾಹನಗಳು

 


Spread the love