ದ.ಕ. ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ -ವಿಲ್ಫ್ರೆಡ್ ಡಿಸೋಜಾ ನೇಮಕ

Spread the love

ದ.ಕ. ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ -ವಿಲ್ಫ್ರೆಡ್ ಡಿಸೋಜಾ ನೇಮಕ

ಮಂಗಳೂರು : ನೆಹರು ಯುವ ಕೇಂದ್ರ ಉಡುಪಿಯ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿರುವ ವಿಲ್ಫ್ರೆಡ್ ಡಿಸೋಜಾ ಇವರು ದ.ಕ.ಜಿಲ್ಲೆಯ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ಪ್ರಭಾರದ ಮೇಲೆ ನೇಮಕಗೊಂಡಿರುತ್ತಾರೆ ಇವರು ಪ್ರಸ್ತುತ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ನೆಹರು ಯುವ ಕೇಂದ್ರಗಳ ಕಾರ್ಯಭಾರವನ್ನು ನಿರ್ವಹಿಸುತಿದ್ದಾರೆ. ಈ ಹಿಂದೆ  ಸಯಂ ಸೇವಕಿಯಾಗಿದ್ದ ಶಿಂತಿಯಾ ಲೋಬೊ 2 ವರ್ಷ ಸೇವೆಯ ನಂತರದ ರಾಜಿನಾಮೆ ನಿಮಿತ್ತ ತೆರವಾದ ಸ್ಥಾನಕ್ಕೆ ವಿಲ್ಫ್ರೆಡ್ ಡಿಸೋಜಾ ಇವರನ್ನು ನೇಮಿಸಿ ಎಂ.ಎನ್. ನಟರಾಜ್, ರಾಜ್ಯ ನಿರ್ದೇಶಕರು(ಪ್ರಭಾರ), ನೆಹರು ಯುವ ಕೇಂದ್ರ ಸಂಘಟನೆ ಬೆಂಗಳೂರು ಆದೇಶ ಹೊರಡಿಸಿದ್ದಾರೆ.

ಅವರು ಅರ್ಥಶಾಸ್ತ್ರ ಪದವೀಧರರಾಗಿದ್ದು, ಸಾರ್ವಜನಿಕ ಸಂಪರ್ಕಗಳು & ಜಾಹೀರಾತು ವಿಭಾಗದಲ್ಲಿ ಸ್ನಾತಕೊತ್ತರ ಪದವಿ ಹೊಂದಿರುತ್ತಾರೆ. ಅಲ್ಲದೆ, ಎಂ.ಬಿ.ಎ. ಪದವಿಯನ್ನು ಮಾನವ ಸಂಪನ್ಮೂಲ ಅಭಿವೃದ್ದಿ ವ್ಯವಸ್ಥಾಪನೆ & ತರಬೇತಿಯಲ್ಲಿ ಹೊಂದಿರುತ್ತಾರೆ. ಡಿಸೋಜಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾಗಿದ್ದಾರೆ. ವಿಲ್ಫ್ರೆಡ್ ಡಿಸೋಜಾ, ಇವರು ಹೊಸ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಪೂರ್ವದಲಿ,್ಲ ಪ್ರಖ್ಯಾತ ಹರಿಯಾಣ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಹರಿಯಾಣ ಸರ್ಕಾರದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ, ನವದೆಹಲಿಯನ್ನೊಳಗೊಂಡಂತೆ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವವನ್ನು ಹೊಂದಿರುತ್ತಾರೆ. ಕರ್ತವ್ಯದಲ್ಲಿ ನುರಿತ ಹಾಗೂ ಅನುಭವಶಾಲಿಗಳಾಗಿದ್ದು, ಅವರು ವಿವಿಧ ಕ್ಷೇತ್ರಗಳಾದ ಸಾರ್ವಜನಿಕ ಸಂಪರ್ಕ, ಶಿಷ್ಟಾಚಾರ & ಸಮನ್ವಯ & ಸಹಭಾಗಿತ್ವದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ವೈಯುಕ್ತಿಕವಾಗಿ ತೊಡಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಅನುಭವವನ್ನು ಹೊಂದಿರುತ್ತಾರೆ.

ಡಿಸೋಜಾ ಇವರು ನೆಹರು ಯುವ ಕೇಂದ್ರ ಸಂಘಟನೆಯ ಭವಿಷ್ಯದ ಆಶೋತ್ತರಗಳನ್ನು ಈಡೇರಿಸುವಿಕೆಯಲ್ಲಿ ತಮ್ಮ ಪ್ರಮುಖ ಪಾತ್ರವನ್ನು ನಿರ್ವಹಿಸಲು ಸದಾ ಸನ್ನದ್ಧರಾಗಿರುತ್ತಾರೆ. ಅಂದರೆ, ಗ್ರಾಮೀಣ ಯುವಜನರನ್ನು ರಾಷ್ಟ್ರ ನಿರ್ಮಾಣಕ್ಕೆ ತೊಡಗಿಸಿಕೊಂಡು ಅವರುಗಳಲ್ಲಿ ಒಳ್ಳೆಯ ಭಾವನೆಗಳನ್ನು ಪ್ರೋತ್ಸಾಹಿಸಿ ಜವಾಬ್ದಾರಿಯುತ ನಾಗರೀಕರಾಗಿ ಮಾದರಿ ಪ್ರಜಾಪ್ರಭುತ್ವ ಹಾಗೂ ಇಡೀ ರಾಷ್ಟ್ರದ ಸರ್ವತೋಮುಖ ಏಳಿಗೆ ಹಾಗೂ ಅಭಿವೃದ್ದಿಗಾಗಿ ಸದಾ ಶ್ರಮಿಸಲು ಉತ್ಸಾಹಿಯಾಗಿರುತ್ತಾರೆ. ನೆಹರು ಯುವ ಕೇಂದ್ರ ಸಂಘಟನೆಯು ಯುವಕರನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಹಲವಾರು ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಯುವಜನ ಸೇವೆಗಳ ಮಂತ್ರಾಲಯದಿಂದ ಹಾಗೂ ಕೆಲವು ವಿಶೇಷ ಕಾರ್ಯಕ್ರಮಗಳು ಹಾಗೂ ಇನ್ನಿತರೆ ಮಂತ್ರಾಲಯಗಳ ಸಹಾಯ-ಸಹಕಾರಗಳಿಂದ ಸದಾ ಕಾರ್ಯೋನ್ಮುಖವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಯುವಕ ಹಾಗೂ ಯುವತಿ ಮಂಡಳದ ಸದಸ್ಯರು ಇವರನ್ನು ನೆಹರು ಯುವ ಕೇಂದ್ರ ನಡೆಸುವ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ವiಂಗಳೂರಿನ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ನೆಹರು ಯುವ ಕೇಂದ್ರದ ಕಛೇರಿಯಲ್ಲಿ ಸಂಪರ್ಕಿಸಬಹುದಾಗಿದೆ. ವಿಳಾಸ: ವಿಲ್ಫ್ರೆಡ್ ಡಿಸೋಜಾ, ಜಿಲ್ಲಾ ಯುವ ಸಮನ್ವಯಾಧಿಕಾರಿ, ರೆವೆನ್ಯೂ ಭವನ ಡಿ.ಸಿ.ಆಫೀಸ್ ಕಾಂಪ್ಲೆಕ್ಸ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಎದುರು ಮಂಗಳೂರು ಪೋ:-0824-2422264.


Spread the love