ಧರ್ಮಗುರು ಆಗಬೇಕೆಂಬ ಕನಸು ನನಸಾಗಿದೆ : ಫಾ ಮೈಕಲ್ ಕುಲಾಸೊ

Spread the love

ಧರ್ಮಗುರು ಆಗಬೇಕೆಂಬ ಕನಸು ನನಸಾಗಿದೆ : ಫಾ ಮೈಕಲ್ ಕುಲಾಸೊ

ಪ್ರೌಢಶಾಲಾ ಶಿಕ್ಷಣದ ತನಕ ಧರ್ಮಗುರು ಆಗಬೇಕೆಂಬ ಕನಸಿರಲಿಲ್ಲ. ಅದರ ಬಳಿಕ ಧರ್ಮಗುರು ಆಗಬೇಕೆಂಬ ಕನಸು ಕಂಡಿದ್ದೆ. ಅದು ಈಗ ದೇವರ ಆಶೀರ್ವಾದದಿಂದ ನನಸಾಗಿದೆ ಎಂದು ವಂದನೀಯ ಫಾ ಮೈಕಲ್ ಜಾನ್ ಕುಲಾಸೊ ತಿಳಿಸಿದರು.

ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದಲ್ಲಿ ಇತ್ತೀಚೆಗೆ ಧರ್ಮಗುರುಗಳಾಗಿ ಗುರು ದೀಕ್ಷೆಯನ್ನು ಸ್ವೀಕರಿಸಿದ ಅವರನ್ನು, ದೇವಾಲಯದ ವ್ಯಾಪ್ತಿಯ ಸಾವುದ್ ಎ ವಾರ್ಡ್ ನ ಪರವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು.

ಧರ್ಮಗುರುಗಳಾಗ ಬೇಕೆಂದು ಬಹಳಷ್ಟು ಮಂದಿಗೆ ಆಸೆ ಇರುತ್ತದೆ. ಆದರೆ ಎಲ್ಲರ ಆಸೆ ಈಡೇರುವುದಿಲ್ಲ. ದೇವರು ಯಾರನ್ನೂ ಆಯ್ಕೆ ಮಾಡುತ್ತಾರೋ, ಅವರು ಮಾತ್ರ ಧರ್ಮ ಗುರುಗಳಾಗುತ್ತಾರೆ. ಈ ವಾರ್ಡ್ನಲ್ಲಿ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆಲ್ಲರಿಗೂ ಶುಭವಾಗಲಿ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಾಲನಾ ಮಂಡಳಿಯ ಕಾರ್ಯದರ್ಶಿ ಮೈಕಲ್ ಡಿಸೋಜ ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್ನ ಗುರಿಕಾರರಾದ ಗಾಡ್ಫ್ರೀ ಡಿಸೋಜಾರವರು ವಹಿಸಿ, ಶುಭ ಹಾರೈಸಿದರು.

ಸನ್ಮಾನ ಪತ್ರವನ್ನು ಪ್ರತಿನಿಧಿ ನ್ಯಾನ್ಸಿ ಅಂದ್ರಾದೆ ವಾಚಿಸಿದರೆ, ಅಭಿನಂದನೆ ಗೀತೆಯನ್ನು ಐರಿನ್ ಮಸ್ಕರೇನಸ್ ಅವರು ಹಾಡಿದರು.

ಮಾಜಿ ಗುರಿಕಾರರಾದ ಸಾಲ್ವದೋರ್ ದಾಂತಿ ಸ್ವಾಗತಿಸಿ, ವಿನೀತಾ ಪಿರೇರಾ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ಈ ಸಂದರ್ಭದಲ್ಲಿ ಧರ್ಮಗುರುಗಳ ತಂದೆ ತಾಯಿ ಜೋಸೆಫ್ ದುಲ್ಸಿನ್ ಕುಲಾಸೊ, ಜಾನ್ ಗೊಮ್ಸ್, ಸಿಂಥಿಯಾ ಮಾರ್ಟಿಸ್, ಫ್ರಾನ್ಸಿಸ್ ಕುಲಾಸೊ, ಜಾನೆಟ್ ಡಿಸೋಜಾ, ಪೀಟರ್ ಮಾರ್ಟಿಸ್ ಮತ್ತು ವಾರ್ಡ್ನ ಸದಸ್ಯರು ಉಪಸ್ಥಿತರಿದ್ದರು.


Spread the love