ಧರ್ಮಸಂಸತ್ ಕಾರ್ಯಾಲಯಕ್ಕೆ ಯಡ್ಯೂರಪ್ಪ ಭೇಟಿ

Spread the love

ಧರ್ಮಸಂಸತ್ ಕಾರ್ಯಾಲಯಕ್ಕೆ ಯಡ್ಯೂರಪ್ಪ ಭೇಟಿ

ಉಡುಪಿ: ಬಿಜೆಪಿ ರಾಜ್ಯಧ್ಯಕ್ಷರಾದ ಬಿ ಎಸ್ ಯಡ್ಯೂರಪ್ಪ ಅವರು ಸೋಮವಾರ ನವೆಂಬರ್ 24 ರಿಂದ 26 ರ ವರೆಗೆ ನಡೆಯುವ ಧರ್ಮ ಸಂಸತ್ ಇದರ ಕಾರ್ಯಾಲಯಕ್ಕೆ ಭೇಟಿ ನೀಡಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಯಡ್ಯೂರಪ್ಪ ಅವರು ಬಿಜೆಪಿಯ ಪರಿವರ್ತನಾ ಯಾತ್ರೆ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಅವರ ಆಶೀರ್ವಾದಗಳನ್ನು ಪಡೆಯುವುದರೊಂದಿಗೆ ಉಡುಪಿಯಲ್ಲಿ ನಡೆಯುವ ಐತಿಹಾಸಿಕ ಕಾರ್ಯಕ್ರಮವಾದ ಧರ್ಮಸಂಸತ್ ಕಾರ್ಯಾಲಯಕ್ಕೆ ಭೇಟಿ ನೀಡುವ ಅವಕಾಶ ನನಗೆ ಒದಗಿ ಬಂದಿದೆ. ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರ ಸಂದೇಶ ಕೇಳುವ ಒಂದು ಅವಕಾಶ ಲಭಿಸಿದ್ದು ತಾನೂ ಕೂಡ 24 ರಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಸಂದೇಶವನ್ನು ಕೇಳಿ ಆಶೀರ್ವಾದವನ್ನು ಪಡೆದುಕೊಳ್ಳಲಿದ್ದೇನೆ. ಧರ್ಮಸಂಸತ್ತಿನಲ್ಲಿ ತೆಗೆದುಕೊಂಡ ನಿರ್ಣಯಗಳು ಕಾರ್ಯರೂಪಕ್ಕೆ ಬರುವಲ್ಲಿ ದೇಶದ ಪ್ರಧಾನಿ ನರೇಂದ್ರಮೋದಿಯವರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂಬ ಭರವಸೆ ತನಗಿದೆ ಎಂದರು.

ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ರಘುಪತಿ ಭಟ್, ಪದಾಧಿಕಾರಿಗಳಾದ ಗೋಪಾಲ್ ಜಿ,, ಎಮ್ ಬಿ ಪುರಾಣಿಕ್, ವಿಲಾಸ್ ನಾಯಕ್ ಹಾಗೂ ಇತರರು ಉಪಸ್ಥಿತತರಿದ್ದರು.


Spread the love