ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂತ ಸಮ್ಮೇಳನ

Spread the love

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂತ ಸಮ್ಮೇಳನ

ಉಜಿರೆ: ಸಕಲ ಪಾಪಕರ್ಮಗಳ ಕ್ಷಯ ಮಾಡಿ ಮೋಕ್ಷ ಪ್ರಾಪ್ತಿಯೇ ಸಕಲ ಜೀವಿಗಳ ಗುರಿಯಾಗಿದೆ. ಆತ್ಮ ವೈಭವವೇ ಶ್ರೇಷ್ಠ ವೈಭವಎಂದುಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರು ಹೇಳಿದರು.
ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಶುಕ್ರವಾರ ಆಯೋಜಿಸಿದ ಸಂತ ಸಮ್ಮೇಳನದಲ್ಲಿ ಆಶೀರ್ವಚನ ನೀಡಿಅವರು ಮಾತನಾಡಿದರು.

ಲೌಕಿಕ ಸುಖ-ಭೋಗಗಳಿಂದ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಅಹಿಂಸೆ, ತ್ಯಾಗ, ಮೈತ್ರಿ, ಮತ್ತುಧ್ಯಾನದಿಂದ ಶಾಶ್ವತ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಬಾಹುಬಲಿಯಜೀವನದಿಂದ ನಮಗೆ ಉತ್ತಮ ಸಂದೇಶದೊರಕುತ್ತದೆ.ಆತ್ಮ ವೈಭವವೇ ಶ್ರೇಷ್ಠ ವೈಭವ ಹಾಗೂ ಶಾಶ್ವತ, ಬಾಕಿ ಎಲ್ಲಾ ನಶ್ವರಎಂದುಅವರು ಹೇಳಿದರು.

ಆಚಾರ್ಯ ಪುಷ್ಪದಂತ ಸಾಗರ ಮುನಿಮಹಾರಾಜರು ಮಾತನಾಡಿ, ಪ್ರಕೃತಿ-ಪರಿಸರವನ್ನು ನಾವು ಪ್ರೀತಿಸಬೇಕು.ಪರಸ್ಪರ ಪ್ರೀತಿ-ವಿಶ್ವಾಸ, ಗೌರವದಿಂದ ಸಂತಸ, ನೆಮ್ಮದಿಯಜೀವನ ಸಾಧ್ಯ.ನಾವು ಸುಸಂಸ್ಕøತರಾಗಿ ಸಾರ್ಥಕಜೀವನ ನಡೆಸಬೇಕುಎಂದುಅವರು ಸಲಹೆ ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರುಒಬ್ಬಆದರ್ಶ ವ್ಯಕ್ತಿ.ಎಲ್ಲರಿಗೂ ಮಾರ್ಗದರ್ಶಕರುಎಂದು ಹೇಳಿದರು.

ಹೊಂಬುಜಜೈನ ಮಠದದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಮಾತನಾಡಿ, ಬಾಹುಬಲಿ ವೈಭವದಿಂದ ನಮ್ಮಆಧ್ಯಾತ್ಮಿಕ ವೈಭವದಜಾಗೃತಿಯಾಗುತ್ತದೆ. ಅಧಿಕಾರ ಪ್ರಾಪ್ತಿಗಾಗಿ ವಿವೇಕವನ್ನು, ಮಾನವೀಯತೆಯನ್ನು ಕಳೆದುಕೊಳ್ಳಬಾರದು ಎಂದು ಬಾಹುಬಲಿಯ ಜೀವನದಿಂದ ನಮಗೆ ಸಂದೇಶ ದೊರಕುತ್ತದೆ. ಶಸ್ತ್ರಾಸ್ತ್ರರಹಿತವಾಗಿ ಯುದ್ಧ ಮಾಡಬಹುದೆಂದು ಮೊದಲು ತೋರಿಸಿಕೊಟ್ಟವರು ಭಗವಾನ್ ಬಾಹುಬಲಿ ಎಂದು ಸ್ವಾಮೀಜಿ ಹೇಳಿದರು.

ಒಡಿಯೂರುಗುರುದೇವಾನಂದ ಸ್ವಾಮೀಜಿ ಮಾತನಾಡಿ, ಸಂತರಿಗೂ ಸಮಾಜಕ್ಕೂ ಅವಿನಾಭಾವ ಸಂಬಂಧವಿದ್ದು ಸಂತರಿಂದ ಸಮಾಜದ ಶುದ್ಧೀಕರಣ ಸಾಧ್ಯಎಂದು ಹೇಳಿದರು.

ಮಡಿಕೇರಿಯ ಶಾಂತಾಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಆಸೆಯೇದುಃಖಕ್ಕೆ ಮೂಲವಾಗಿದೆತ್ಯಾಗ ಮತ್ತು ಮನೋನಿಗ್ರಹದಿಂದ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿಜೈನಧರ್ಮದಉದಾತ್ತ ತತ್ವಗಳಾದ ತ್ಯಾಗ, ಅಹಿಂಸೆಯಂದ ಶಾಂತಿಯುತಜೀವನ ನಡೆಸಬಹುದುಎಂದು ಹೇಳಿದರು.

ಕನ್ಯಾಡಿರಾಮಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಅಂತರಂಗ ಪರಿಶುದ್ಧವಾಗಿದ್ದಾಗಜೀವನ ಪಾವನವಾಗುತ್ತದೆ.ನಿರಂತರಅಭ್ಯಾಸದಿಂದ ಬುದ್ಧಿ ಮನಸ್ಸನ್ನುಗೆದ್ದರೆಉನ್ನತ ಸಾಧನೆ ಮಾಡಬಹುದುಎಂದು ಹೇಳಿದರು.

ಸಚಿವಎಚ್.ಡಿ.ರೇವಣ್ಣ ಮಾತನಾಡಿ, ಧರ್ಮಸ್ಥಳದಲ್ಲಿ ರಸ್ತೆಅಭಿವೃದ್ಧಿಗಾಗಿ ಈಗಾಗಲೇ 23 ಕೋಟಿರೂ.ಮಂಜೂರು ಮಾಡಿದ್ದುಕಾಮಗಾರಿ ಪ್ರಗತಿಯಲ್ಲಿದೆಎಂದು ಹೇಳಿದರು.

ಹೈಮಾಸ್ಟ್ ವಿದ್ಯುದ್ದೀಪ ಅಳವಡಿಕೆಗಾಗಿ ಎರಡುಕೋಟಿರೂ. ಮಂಜೂರು ಮಾಡಿದ್ದು ಕೆಲಸ ಈಗಾಗಲೇ ಪ್ರಾರಂಭಿಸಲಾಗಿದೆಎಂದರು.

ಭಕ್ತಾದಿಗಳ ಅನುಕೂಲಕ್ಕಾಗಿ ಧರ್ಮಸ್ಥಳವನ್ನು ಸಂಪರ್ಕಿಸುವಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದುಎಂದು ಸಚಿವರು ಭರವಸೆ ನೀಡಿದರು.ರಾಷ್ಟ್ರೀಯ ಹೆದ್ದಾರಿಅಭಿವೃದ್ಧಿಗಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.

ಹೆಗ್ಗಡೆಯವರ ಸಲಹೆಯಂತೆ ಸರ್ಕಾರದ ಸಹಭಾಗಿತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ನೇತೃತ್ವದಲ್ಲಿ ನೂರು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದುಎಂದು ಸಚಿವರು ಪ್ರಕಟಿಸಿದರು.
ಚೆನ್ನಮ್ಮದೇವೇಗೌಡ ಬೆಳ್ಳಿ ದೀಪ ಬೆಳಗಿಸಿ ಮಹೋತ್ಸವಕ್ಕೆ ಚಾಲನೆ ನೀಡಿದರು

ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಅಧ್ಯಕ್ಷತೆ ವಹಿಸಿದರು.ಸಂತೋಷ್‍ಗುರೂಜಿ ಶುಭಾಶಂಸನೆ ಮಾಡಿದರು.

ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು.ಮೂಡಬಿದ್ರೆಯಕೃಷ್ಣರಾಜ ಹೆಗ್ಡೆ ಧನ್ಯವಾದವಿತ್ತರು.ಬಾರ್ಕೂರುದಾಮೋದರ ಶರ್ಮಾಕಾರ್ಯಕ್ರಮ ನಿರ್ವಹಿಸಿದರು.


Spread the love