ಧಾರ್ಮಿಕ ಕ್ಷೇತ್ರದಲ್ಲಿನ ಹೊಸ ದಾಖಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

Spread the love

ಬೆಂಗಳೂರು: ಜನ್ಮ ಕ್ರಿಯೆಷನ್ಸ್ ಲಾಂಛನದಲ್ಲಿ ದಕ್ಷಿಣ ಭಾರತದ ಎಂಟು ಪುಣ್ಯಕ್ಷೇತ್ರಗಳ ಕನ್ನಡ ಭಕ್ತಿಗೀತೆಗಳ ಧ್ವನಿಸುರುಳಿ “ಅಷ್ಟ ಕ್ಷೇತ್ರ ಗಾನ ವೈಭವ” ಇತ್ತೀಚೆಗೆ ಜಗತ್ತಿನ ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಗೊಂಡು ಧಾರ್ಮಿಕ ಹಾಗೂ ಕನ್ನಡ ಭಕ್ತಿಗೀತೆಗಳ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿ ಇದೀಗ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಗೌರವಕ್ಕೆ ಪಾತ್ರವಾಗಿದೆ.

india-book-of-record

ಖ್ಯಾತ ಆಧ್ಯಾತ್ಮಿಕ ಗುರು ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಧ್ವನಿಸುರುಳಿಯ ನಿರ್ಮಾಪಕ ಪುತ್ತೂರಿನ ಡಾ. ಹರ್ಷಕುಮಾರ ರೈ ಮಾಡಾವು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು april 29 th ಬೆಂಗಳೂರಿನಲ್ಲಿ ಹಸ್ತಾಂತರಿಸಿದರು.
ಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಹಾಗೂ ಸುರೇಖಾ ಕೆ.ಎಸ್ ಹಾಡಿರುವ ಈ ಭಕ್ತಿಗೀತೆಗಳಿಗೆ ಪುತ್ತೂರು ಉಮೇಶ್ ನಾಯಕ್ ಸಾಹಿತ್ಯ ನೀಡಿದ್ದಾರೆ. ಈ ಧ್ವನಿಸುರುಳಿಯಲ್ಲಿ ತಿರುಪತಿ, ಪೊಳಲಿ, ಶಬರಿಮಲೆ, ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ, ಕೊಲ್ಲೂರು ಹಾಗೂ ಪುತ್ತೂರಿನ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಸಂಬಂಧಿಸಿದ ಹಾಡುಗಳಿವೆ. ಅಮೇರಿಕಾ, ಇಂಗ್ಲೇಡ್, ಆಸ್ಟ್ರೇಲಿಯಾ, ದುಬೈ, ಕತಾರ್, ಅಬುದಾಬಿ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಧ್ವನಿಸುರುಳಿ ಬಿಡುಗಡೆಗೊಂಡಿತ್ತು.


Spread the love