ನಗರಸಭೆಯ ಶೇ.24.10 ಮತ್ತು ಶೆ.7.25 ನಿಧಿಯಡಿ ಸವಲತ್ತು ವಿತರಣೆ

Spread the love

ನಗರಸಭೆಯ ಶೇ.24.10 ಮತ್ತು ಶೆ.7.25 ನಿಧಿಯಡಿ ಸವಲತ್ತು ವಿತರಣೆ

ಉಡುಪಿ : ಉಡುಪಿ ನಗರಸಭೆಯ 2016-17 ನೇ ಸಾಲಿನ ಶೇ.24.10 ನಿಧಿಯಡಿ ಮತ್ತು ಶೆ.7.25 ನಿಧಿಯಡಿ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗುರುವಾರ ನಗರಸಭೆಯ ಸಭಾಂಗಣದಲ್ಲಿ ವಿತರಿಸಿದರು.

ಪ.ಜಾತಿ ಪಂಗಡಕ್ಕೆ ಮೀಸಲಾದ ಶೇ.24.10 ನಿಧಿಯಡಿ 76 ವಿದ್ಯಾರ್ಥಿಗಳಿಗೆ 4,80,000.00 ವಿದ್ಯಾರ್ಥಿ ವೇತನ, ಇಬ್ಬರಿಗೆ ಪಕ್ಕಾ ಮನೆ ನಿರ್ಮಾಣಕ್ಕೆ 2 ಲಕ್ಷ, 10 ಮಂದಿಗೆ ಮನೆ ದುರಸ್ಥಿಗೆ 2 ಲಕ್ಷ , 17 ಮಂದಿಗೆ ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯಧನ 60000.00, ಶೌಚಾಲಯ ನಿರ್ಮಾಣಕ್ಕಾಗಿ 2,66,000.00, ಆರೋಗ್ಯ ವಿಮೆಗಾಗಿ 5 ಲಕ್ಷ ಮೊತ್ತದ ಸವಲತ್ತುಗಳನ್ನು ಸಚಿವರು ವಿತರಿಸಿದರು.

ಬಡ ಜನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಾದ ಶೇ. 7.25 ನಿಧಿಯಡಿ 70 ವಿದ್ಯಾರ್ಥಿಗಳಿಗೆ 4,09,500.00, 7 ಮಂದಿಗೆ ಮನೆ ದುರಸ್ಥಿಗೆ 1,40,000.00 ಲಕ್ಷ , 20ಮಂದಿಗೆ ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯಧನ 84000.00, ಶೌಚಾಲಯ ನಿರ್ಮಾಣಕ್ಕಾಗಿ 3,20,000.00 ಮೊತ್ತದ ಸವಲತ್ತುಗಳನ್ನು ಸಚಿವರು ವಿತರಿಸಿದರು.

ಇದೇ ಸಂದರ್ಭದಲ್ಲಿ ಅಂಬೇಡ್ಕರ್ ನಿವಾಸ ಯೋಜನೆಯಡಿ ಪ.ಜಾತಿ ,ಪಂಗಡದ 68 ಮಂದಿಗೆ ಮನೆ ನಿರ್ಮಾಣಕ್ಕಾಗಿ ರೂ.2.24 ಕೋಟಿ ಮೊತ್ತದ ಚೆಕ್ ಗಳನ್ನು ಸಚಿವರು ವಿತರಿಸಿದರು.

ನಂತರ ಮಾತನಾಡಿದ ಸಚಿವರು , ದೇಶದಲ್ಲಿ ಬಡತನದಲ್ಲಿರುವ ಪ.ಜಾತಿ ಪಂಗಡದ ಸಮುದಾಯ ಹಾಗೂ ಇತರೆ ಸಮುದಾಯದ ಅಭಿವೃದ್ಧಿಗಾಗಿ ಕಡ್ಡಾಯವಾಗಿ ಮೀಸಲಿಟ್ಟಿರುವ ನಿಧಿಯಿಂದ ಈ ಸೌಲಭ್ಯಗಳನ್ನು ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ತಮಗೆ ನೀಡಿರುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ , ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಹಾಗೂ ನಗರಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು.
ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.


Spread the love