ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಇಬ್ಬರ ಬಂಧನ, ಹೊಡೆದಾಟದ ವಿಡಿಯೋ ವೈರಲ್

Spread the love

ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಇಬ್ಬರ ಬಂಧನ, ಹೊಡೆದಾಟದ ವಿಡಿಯೋ ವೈರಲ್

ಉಡುಪಿ: ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗರುಡ ಗ್ಯಾಂಗ್ ಗೆ ಸೇರಿದ ಇಬ್ಬರು ಆರೋಪಿಗಳಾದ ಆಶಿಕ್ ಮತ್ತು ರಖೀಬ್ ಎಂಬವರನ್ನು ಬಂಧಿಸಲಾಗಿದ್ದು ಉಳಿದವರು ಪರಾರಿಯಾಗಿದ್ದಾರೆ. ಮೇ 20ರಂದು ಪ್ರಕರಣ ದಾಖಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಆಧರಿಸಿ ಹೆಚ್ಚು ವರಿ ಪ್ರಕರಣಗಳನ್ನು ದಾಖಲಿಸಲಾಗುವುದು. ಎರಡು ಸ್ವಿಫ್ಟ್ ಕಾರು, ಎರಡು ಬೈಕ್, ಒಂದು ತಲವಾರು ಹಾಗೂ ಡ್ರ್ಯಾಗರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ಅರುಣ್ ಕೆ ಹೇಳಿದ್ದಾರೆ.

ಆರೋಪಿಗಳಿಗೆ ಜೂನ್ 1 ರ ವರೆಗೆ ನ್ಯಾಯಂಗ ಬಂಧನ ವಿಧಿಸಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 20 ರಂದು ನಡೆದಿರುವ ಈ ಘಟನೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Spread the love

Leave a Reply