ನಮೋ ಮೊಯರ್ ಗ್ಲೋಬಲ್ ಫೌಂಡೇಶನ್; ಧಾರ್ಮಿಕ ಮುಂದಾಳುಗಳಿಗೆ ಸನ್ಮಾನ, ಗೌರವಾರ್ಪಣೆ

Spread the love

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್; ಧಾರ್ಮಿಕ ಮುಂದಾಳುಗಳಿಗೆ ಸನ್ಮಾನ, ಗೌರವಾರ್ಪಣೆ

ಮುಂಬಯಿ /ಉಪ್ಪಳ: ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ಕೇವಲ ಕೆಲವೇ ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಈಗಾಗಲೇ ಮುಂಬಯಿ ಹಾಗೂ ಮಹಾರಾಷ್ಟ್ರದ ಇತರೆಡೆ ಮಾತ್ರವಲ್ಲದೆ ತವರೂರಲ್ಲಿ ಹಲವಾರು ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ ಜನ ಸಾಮಾನ್ಯರ ಪ್ರೀತಿ ವಿಶ್ವಾಸವನ್ನು ಗಳಿಸಿದೆ. ನಾವೂ ಇನ್ನೂ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು ಅದನ್ನೂ ಸದ್ಯದಲ್ಲೇ ಕಾರ್ಯರೂಪಕ್ಕೆ ತರಲಿದ್ದೇವೆ. ಸಮಾಜ ಬಾಂಧವರ ಹಾಗೂ ದಾನಿಗಳ ಮತ್ತು ಅಭಿಮಾನಿಗಳ ಸಹಾಯ ನಮಗಿದ್ದು ಮುಂದೆಯೂ ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜಪರ ಕೆಲಸಕ್ಕೆ ಕೈಜೋಡಿಸೋಣ ಎಂದು ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷರಾದ ರವಿ ಉಚ್ಚಿಲ್ ನುಡಿದರು.

ಮೇ 19ರಂದು ಉಪ್ಪಳ ರೈಲು ನಿಲ್ಧಾಣದ ಸಮೀಪ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಮುಂಬಯಿಯ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ನಡೆದ ಸಮುದಾಯದ ಹನ್ನೊಂದು ಭಗವತೀ ಕ್ಷೇತ್ರಗಳಲ್ಲಿ 25 ವರ್ಷಕ್ಕಿಂತ ಅಧಿಕ ಕಾಲ ಸೇವೆ ಸಲ್ಲಿಸಿದ, ಗೌರವಾನ್ವಿತ ದೈವ ಪಾತ್ರಿ (ಅಚ್ಚಮಾರರು)ಗಳನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮುಂಬಯಿಯ ಹಿರಿಯ ಸಮಾಜ ಸೇವಕ ಈಶ್ವರ್ ಕೆ ಐಲ್ , ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೌರವಾನ್ವಿತ ಅಚ್ಚಮಾರರಾದ ಬೀರ ಬೆಳ್ಚಪ್ಪಾಡರು ಶ್ರೀ ಭಗವತೀ ಕ್ಷೇತ್ರ ಉದ್ಯಾವರ, ತಳಪುರತ್ತ್ ಅಂಬಾಡಿ ಬೆಳ್ಚಪ್ಪಾಡ್, ಶ್ರೀ ಕೊಯಂಗರ ಭಗವತೀ ಕ್ಶೇತ್ರ, ಕುಂಞಿರಾಮನ್ ಕಾರ್ನವರು, ಶ್ರೀ ಕೊಯಂಗರ ಭಗವತೀ ಕ್ಶೇತ್ರ, ಕುಂಞಿರಾಮನ್ ಕಾರ್ನವರು,ಮಾಡಾಯಿ ಅಚ್ಚನ್, ನೀಲೆಶ್ವರ ಶ್ರೀ ಭಗವತೀ ಕ್ಶೇತ್ರ, ನಾರಾಯಣ ಕಾರ್ನವರ್ , ಶ್ರೀ ಕಾಡಾಂಕೋಟ್ ಭಗವತೀ ಕ್ಶೇತ್ರ, ಜೋಗಿಪೂಜಾರಿ, ವಾಮಂಜೂರು ಶ್ರೀ ಗುತ್ಯಮ್ಮ ಭಗವತೀ ಬಬ್ಬರ್ಯ ಕ್ಷೇತ್ರ,ಐಲ, ಕುಂಞಂಬು ಕಾರ್ನವರ್, ಕೋಟ್ಟಪುರ ಶ್ರೀ ಭಗವತೀ ಭಗವತೀ ಕ್ಶೇತ್ರ, ಚೋಮ ಬೆಳ್ಚಪ್ಪಾಡರು, ಶ್ರೀ ಭಗವತೀ ಕ್ಷೇತ್ರ ಉದ್ಯಾವರ, ತಂಬಾನ್ ಕಾರ್ನವರ್ , ನೀಲೆಶ್ವರ ಶ್ರೀ ಭಗವತೀ ಕ್ಶೇತ್ರ, ಗಂಗಾಧರ ಬೆಳ್ಚಪ್ಪಾಡ್, ಆದೂರ್ ಶ್ರೀ ಭಗವತೀ ಕ್ಷೇತ್ರ, ಕೊಟ್ಟನ್ ಪೂಜಾರಿ, ಆದೂರ್ ಶ್ರೀ ಭಗವತೀ ಕ್ಷೇತ್ರ, ಕರುಣಾಕರ ಬೆಳ್ಚಪ್ಪಾಡರು, ವಾಮಂಜೂರು ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ,ಐಲ, ರಘುಕಾರ್ನವರು, ಶ್ರೀ ಭಗವತೀ ಕ್ಷೇತ್ರ ಉದ್ಯಾವರ ಇವರ ಸನ್ಮಾನ ಕಾರ್ಯಕ್ರಮವು ಅದ್ದೂರಿಯಾಗಿ ಅರ್ಥಪೂರ್ಣವಾಗಿ ನೆರವೇರಿತು. ಸನ್ಮಾನ ಸ್ವೀಕರಿಸಿದ ಅಚ್ಚಮಾರರ ರ ಮುಖದಲ್ಲಿ ಮಂದಹಾಸದ ನಗು ಹಾಗೂ ವೇದಿಕೆಯಲ್ಲಿಯೇ ಅವರು ಕೊಟ್ಟ ಮನದಾಳದ ಆಶೀರ್ವಚನ ಸಂಸ್ಥೆಗೆ ಪ್ರೇರಕವಾಗಿದೆ ಮಾತ್ರವಲ್ಲ ಶ್ರೀದೇವಿಯ ಕೃಪೆ ಶಾಶ್ವತವಾಗಿ ಇರಲಿ ಎಂಬ ಸಂದೇಶ ಅವರಿಂದ ವ್ಯಕ್ತವಾಯಿತು.

ಹಾಗೆಯೇ ಸಮುದಾಯದ 74ಕ್ಕಿಂತಲೂ ಹೆಚ್ಚು ಬಾರಿ ಶಬರಿಮಲೆಗೆ ಯಾತ್ರೆಗೈದ ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ಗುರುಸ್ವಾಮಿ ಆಗಿರುವ ಕುಟ್ಟಿಕೃಷ್ಣನ್ ಇವರನ್ನು ಸನ್ಮಾನಿಸಲಾಯಿತು

ಸಮುದಾಯದ ಪರಿಣಿತ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರಾದ ಲಿಮ್ಕಾ ದಾಖಲೆಯ ಕುಮಾರಿ ಜಾಗೃತಿ .ಎನ್ ಅಡ್ಕ ಇವರನ್ನು ಸನ್ಮಾನಿಸಲಾಯಿತು.

ಅಚ್ಚಮಾರರ ಉಪಸ್ಥಿತಿಯಲ್ಲಿ 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ 95%ಕ್ಕಿಂತ ಹೆಚ್ಚು ಅಂಕಗಳಿಸಿದ ನಮ್ಮ ಸಮುದಾಯದ ಸುಮಾರು 15 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಭಾಷಣ ಸ್ಪರ್ಧೆ, ಚಿತ್ರ ಸ್ಪರ್ಧೆ, ಛದ್ಮವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ನಮೋ ಮೋಯರ್ ಮೆಲೋಡಿಯಸ್ ಗ್ರೂಪಿನ ಸಕ್ರಿಯ ಗಾಯಕರನ್ನು ಗೌರವಿಸಲಾಯಿತು. ಕುಮಾರಿ ರಕ್ಷಿತಾ ಹಾಗೂ ಕುಮಾರಿ ನಂದನ ಇವರಿಗೆ ಆರ್ಥಿಕ ನೆರವನ್ನು ಒದಗಿಸಲಾಯಿತು.
ನಮೋ ಮೋಯರ್ ಗ್ಲೋಬಲ್ ಪೌಂಡೇಶನ್ ಕೋಶಾಧಿಕಾರಿ ಯಶವಂತ್ ಐಲ್, ನವೀನ್ ಬೆಳ್ಚಪಾಡ, ಉದಯ ಕಾರ್ನವರು, ಶ್ರೀಮತಿ ಪದ್ಮಲತಾ ಶಿರಿಯ, ಮುಕಾಯಬೋವಿ ಸಮುದಾಯ ಸಭಾ, ಮಹಿಳಾ ವಿಭಾಗ, ಇದರ ಅಧ್ಯಕ್ಷರು ಶ್ರೀಮತಿ ಶಾಲಿನಿ ಬೆಂಗೆರೆ, ವಾಮಂಜೂರು ಶ್ರೀ ಗುತ್ಯಮ್ಮ ಭಗವತಿ ಕ್ಷೇತ್ರದ ಅಧ್ಯಕ್ಷ ಆನಂದ್ ಎಸ್. ಐಲ್. ಮೂರೂರ ಬೋವಿ ಮಹಾಸಭಾ, ಇದರ ಅಧ್ಯಕ್ಷ ಹರೀಶ್ ಉಚ್ಚಿಲ್ ,ಉದ್ಯಾವರ ಭಗವತಿ ಕ್ಷೇತ್ರ ಹಾಗೂ ಉದ್ಯಾವರ ಎ.ಎಲ್.ಪಿ ಶಾಲೆಯ ವ್ಯವಸ್ಥಾಪಕ ರಾಜೇಶ್ ಉದ್ಯಾವರ್, ಗೌರವ ಸಲಹೆಗಾರರಾದ ವಿಜಯ್ ಉಚ್ಚಿಲ್, ಶ್ರೀಮತಿ ಮೀರಾ ಶೆಟ್ಟಿ ಹಾಗೂ ಚಿದಾನಂದ ಉದ್ಯಾವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ ಪತ್ರವನ್ನು ಕೆ.ಪಿ ನಾಭ, ಶ್ರೀಮತಿ ಪಾವನ ಕೋಟೆಕಾರ್ ಹಾಗೂ ಶ್ರೀಮತಿ ಚಂಚಲಾಕ್ಷಿ ವಾಚಿಸಿದರು. ಕೆ.ಪಿ ನಾಭ ಐಲ್ ಇವರು ವೇದಿಕೆಯಲ್ಲಿದ್ದ ಅತಿಥಿಗಳನ್ನು ಸ್ವಾಗತಿಸಿದರು.

ಮನೋರಂಜನೆಯ ಅಂಗವಾಗಿ ಕರ್ನಾಟಕ ರತ್ನ ನಾಟ್ಯಾಚಾರ್ಯ ಮೋಹನ್ ಕುಮಾರ್ ಅವರ ಸುಪುತ್ರಿ ರಾಜಶ್ರೀ ಅವರ ಶಿಷ್ಯರಂದವರಿಂದ ನೃತ್ಯ ವೈಭವವು ನಡೆಯಿತು. ದಿಪ್ತೇಶ್ ಕೋಟೆಕಾರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಯಶವಂತ ಐಲ್ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ಯಶಸ್ವಿಗೆ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ದಕ್ಷಿಣ ವಲಯದ ಸದಸ್ಯರಾದ ಸಂದೇಶ್ ಐಲ್, ಚಿದಾನಂದ್ ಉದ್ಯಾವರ್, ಪಾವನ ಕೋಟೆಕಾರ್, ಚಂಚಲಾಕ್ಷಿ ಉಚ್ಚಿಲ್, ವಿನಿತಾ ಮಂಜೇಶ್ವರ್ ಹಾಗೂ ಮುಂಬೈ ಸಮಿತಿಯ ಸದಸ್ಯರಾದ ಸೌಮ್ಯ ರವಿ ಉಚ್ಚಿಲ್ ಹಾಗೂ ಶ್ವೇತಾ ಉಚ್ಚಿಲ್, ಶ್ರೀ ಅಯ್ಯಪ್ಪ ಭಜನಾ ಮಂದಿರ ಸಮಿತಿ ಉಪ್ಪಳ, ಕೃಷ್ಣಕುಮಾರ್ ಐಲ್, ಪುಟಾಣಿಗಳಾದ ಹರ್ಷಿಕ ಐಲ್ , ದೃಶ್ಯ ಕೋಟೆಕಾರ್ ಮತ್ತಿತರರು ಸಹಕರಿಸಿದರು.

ಪುರುಷೋತ್ತಮ್ .ಕೆ. ಐಲ್ ಅವರಿಗೆ ಶ್ರದ್ದಾಂಜಲಿ
ಕಾರ್ಯಕ್ರಮವನ್ನು ಆಯೋಜಿಸಿದ ಸಂಸ್ಥೆಯ ಹಿರಿಯ ಸದಸ್ಯ, ಕ್ರೀಡಾಪಟು ಪುರುಷೋತ್ತಮ್ .ಕೆ. ಐಲ್ ಇತ್ತೀಚೆಗೆ ನಿಧನರಾಗಿದ್ದು ಅವರ ಉತ್ತರಕ್ರಿಯೆಯಯಾದ ಅಂದು ಹನ್ನೊಂದು ಕ್ಷೇತ್ರದ ಅಚ್ಚಮಾರರ ನೇತೃತ್ವದಲ್ಲಿ, ಅಗಲಿದ ಆತ್ಮಕ್ಕೆ ಮೌನ ಪ್ರಾರ್ಥನೆ ಹಾಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.


Spread the love

Leave a Reply