ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಎಸ್. ಎಸ್ ದಾಸಿಲಾ

Spread the love

ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಎಸ್. ಎಸ್ ದಾಸಿಲಾ

ವಿದ್ಯಾಗಿರಿ: ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಹೊರತು ಬೇರೆಯವರು ನಡೆದ ದಾರಿಯನ್ನು ಅನುಕರಣೆ ಮಾಡಬಾರದು ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಡಿಐಜಿ ಎಸ್. ಎಸ್ ದಾಸಿಲಾ ಹೇಳಿದರು.

ಇವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ನಡೆಯುತ್ತಿರುವ ‘ಬೂಟ್‍ಕ್ಯಾಂಪ್’ನ ಉಪನ್ಯಾಸ ಸರಣಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಯನ್ನು ಅಪೇಕ್ಷಿಸುತ್ತಾನೆ ಆದರೆ ಬದಲಾವಣೆಯ ಹಾದಿಯಲ್ಲಿ ಮುಂದುವರಿಯಲು ಎಡವುತ್ತಾನೆ. ಸುಂದರ ಬದುಕನ್ನು ರೂಪಿಸುವಲ್ಲಿ ಬದಲಾವಣೆ ಸಹಕಾರಿಯಾಗಿರುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳು ಸಫಲತೆಯ ಮೆಟ್ಟಿಲು. ಸವಾಲುಗಳ ಕುರಿತು ಚಿಂತಿಸದೇ ನಮ್ಮ ಸಾಮಥ್ರ್ಯದಿಂದ ಎದುರಿಸಿ ಮುಂದುವರೆದಾಗ ಹಾಗೂ ನಾವು ತೆರೆದ ಕಣ್ಣಿನಿಂದ ಕನಸನ್ನುಕಂಡಾಗ ಜೀವನದಗುರಿಯನ್ನು ಸಾಧಿಸಬಹುದು ಎಂದರು.

ಮಸ್ತಿಷ್ಕದಿಂದ ನಮ್ಮ ನೋವನ್ನು ಹಿಡಿದಿಟ್ಟುಕೊಂಡು, ನಮಗೆ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ನಾವು ಸಕಾರಾತ್ಮಕ ಯೋಚನೆಗಳನ್ನು ಇತರರೊಂದಿಗೆ ಹಂಚಿಕೊಂಡಾಗ ನಮ್ಮಲಿನ ವಿಚಾರಗಳು ಅಭಿವೃದ್ಧಿಯಾಗುತ್ತವೆ. ಜೀವನದಲ್ಲಿ ಬುದ್ಧಿ ಹಾಗೂ ಸಮಯವನ್ನು ಸೂಕ್ತವಾಗಿ ಉಪಯೋಗಿಸಬೇಕು. ರಾಷ್ಟ್ರದ ಕ್ಷಿಪ್ರ ಬೆಳವಣಿಗೆಯಲ್ಲಿ ತಾಂತ್ರಿಕತೆ ಹೆಚ್ಚಾದಂತೆ ಜನರು ಮಾನವೀಯತೆಯನ್ನು ಮರೆಯುತ್ತಿದ್ದಾರೆ. ಮಾನವೀಯತೆಯಿಂದ ಜೀವನ ಸಾಗಿಸುವುದು ಒಳಿತು ಎಂದವರು ಹೇಳಿದರು.

“ನಾವು ಸಂತೋಷದಿಂದಿದ್ದರೆ ಸಮಾಜ, ಕುಟುಂಬ ಹಾಗೂ ಸ್ನೇಹಿತರನ್ನು ಸಂತೋಷದಿಂದಿರಿಸಬಹುದು. ನಮ್ಮ ಯೋಚನೆಗಳ ಗುಲಾಮರಾಗಬಾರದು. ಮನಸ್ಸಿನ ದುಗುಡಗಳನ್ನು ದೂರವಾಗಿಸಿ, ಶಕ್ತಿ ಸಾಮಥ್ರ್ಯಗಳನ್ನು ವೃದ್ಧಿಸಿಕೊಂಡು ಮನಃಪೂರ್ವಕ ಮಾತನಾಡುವುದನ್ನು ಕಲಿತುಕೊಳ್ಳಬೇಕು. ಸಮಾಜದಲ್ಲಿ ನಾವು ನೀರಿನಂತೆ ವರ್ತಿಸಬೇಕು. ಏಕೆಂದರೆ ಯಾವುದೇ ಅಡೆ-ತಡೆಗಳು ಬಂದರೂ ಹೊಂದಾಣಿಕೆಯಿಂದ ಉತ್ತಮ ಜೀವನವನ್ನು ನಡೆಸಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮ್ಯಾನೇಜಿಂಗ್ ಟ್ರಸ್ಟೀ ವೀವೇಕ್ ಆಳ್ವ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೋಫಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love