ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ

Spread the love

ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ

ಮಂಗಳೂರು: ಇಂದು ನಾಡಿಗೆ ನಾಡೇ ದೀಪಾವಳಿ ಅಥವಾ ಯಾವುದೇ ಉತ್ಸವವನ್ನು ಉತ್ಸಾಹದಿಂದ ಆಚರಿಸುತ್ತಿದ್ದರೂ, ಈ ಎಲ್ಲಾ ಸಂಭ್ರಮದ ಹಿಂದಿನ ನಿಜವಾದ ಶಕ್ತಿ ಎಂದರೆ ಅದು ಸಿಯಾಚಿನ್‍ನಂತಹ ದುರ್ಗಮ ಪ್ರದೇಶದಲ್ಲಿ ತನ್ನೆಲ್ಲಾ ಸ್ವಾರ್ಥ ತ್ಯಾಗ ಮಾಡಿ ದೇಶ ಕಾಯುವ ವೀರ ಯೋಧರ ಕೊಡುಗೆ ಎಂದು ಸಂಸ್ಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ಆದರ್ಶ ಗೋಖಲೆ ಹೇಳಿದರು. ಅವರು ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ, ಜಿಲ್ಲೆ 317-ಡಿಯ ದೀಪಾವಳಿ ಆಚರಣೆಯ ವೇಳೆ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ನಮ್ಮ ನೆಲದ ಸಂಸ್ಕøತಿಯನ್ನು ಬೆಳೆಸಿ, ಮುಂದಿನ ಪೀಳಿಗೆಗೂ ಅದರ ಪರಿಚಯಮಾಡಿ ಅನುಸರಿಸುವಂತೆ ಮಾಡುವುದು ನಮ್ಮ ಕರ್ತವ್ಯ ಎಂದೂ ಅವರು ಹೇಳಿದರು.

deepavali-362-2 deepavali-366-1

ಮುಖ್ಯ ಅತಿಥಿಗಳಾಗಿದ್ದ ಡಾ. ಬಿ ಎ ವಿವೇಕ್ ರೈ ಲಯನ್ಸ್‍ನಂತಹ ಸೇವಾ ಸಂಸ್ಥೆ ದೀಪಾವಳಿಯಂತಹ ಸಂಭ್ರಮವನ್ನು ಪಿಲಿಕುಳ ಗುತ್ತಿನ ಮನೆಯಲ್ಲಿ ಆಯೋಜಿಸುವ ಮೂಲಕ, ನಮಗೂ ಪ್ರೇರಣೆನೀಡಿದೆ ಎಂದರು. ಪಿಲಿಕುಳ ನಿಸರ್ಗಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಈ ಪ್ರೇರಣೆಯಿಂದ ಗುತ್ತಿನ ಮನೆಯಲ್ಲೂ ಪ್ರತೀ ವರ್ಷ ದೀಪಾವಳಿ ಆರಂಭಿಸುವ ಉತ್ಸಾಹ ಮೂಡಿದೆ ಎಂದರು. ಕಣಚೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಯು ಕೆ ಮೋನು, ಜಾತಿ ಮಥ ಪಂಥಗಳನ್ನು ಮೆಟ್ಟಿನಿಂತು, ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಲಯನ್ಸ್ ಕೆಲಸ ಶ್ಲಾಘನೀಯ ಎಂದರು

ಲಯನ್ಸ್ ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ ಮತ್ತು ಜಿಲ್ಲೆಯ ಪ್ರಥಮ ಮಹಿಳೆ ಇಂದಿರಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಲಯನಿಸಂ ಸದಾ ಕಾಲ ಸಾಮರಸ್ಯಕ್ಕೆ ವಿಶೇಷ ಒತ್ತು ನೀಡುವ ಸಮಾಜ ಸೇವಾ ಸಂಸ್ಥೆ ಎಂದರು.

ಲಯನ್ಸ್ ದೀಪಾವಳಿ ಸಂಯೋಜಕ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಲಯನ್ಸ್ ಜಿಲ್ಲಾ ಪ್ರಥಮ ಉಪಗವರ್ನರ್ ಹೆಚ್ ಆರ್ ಹರೀಶ್, ದ್ವಿತೀಯ ಉಪಗವರ್ನರ್ ದೇವದಾಸ ಭಂಡಾರಿ ಶುಭ ಹಾರೈಸಿದರು. ನಿಕಟಪೂರ್ವ ಗವರ್ನರ್ ಕವಿತಾ ಶಾಸ್ತ್ರಿ, ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಕುಡ್ಪಿ ಅರವಿಂದ ಶೆಣೈ, ಕೋಶಾಧಿಕಾರಿ ದೇವಿಪ್ರಸಾದ್ ರಾವ್, ಲಯನೆಸ್ ಜಿಲ್ಲಾಧ್ಯಕ್ಷೆ ಮಲ್ಲಿಕಾ ಆಳ್ವ,ಲಿಯೋ ಜಿಲ್ಲಾಧ್ಯಕ್ಷೆ ಅಹಿಮಾ ಶೆಟ್ಟಿ, ಲಯನ್ಸ್ ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕ ರೊನಾಲ್ಡ್ ಐಸಾಕ್ ಗೋಮ್ಸ್ ಹಾಗೂ ದೀಪಾವಳಿ ಆಯೋಜನಾ ಸಮಿತಿಯ ಸದಸ್ಯರು, ಮತ್ತು ಸುಮಾರು 1000ಕ್ಕೂ ಮಿಕ್ಕಿ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ, ಗೋಪೂಜೆ, ಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ ಹಾಗೂ ತುಳಸಿ ಪೂಜೆಯಂತಹ ದೀಪಾವಳಿಯ ಸಂಪ್ರದಾಯಗಳನ್ನು ನೆರವೇರಿಸಿ, ಕಾರ್ಯಕ್ರಮ ನಿರೂಪಿಸಿದರು. ರಚನಾ ರಾಜೇಶ್ ಕಾಮತ್ ಬಳಗದ ಲಯನ್ಸ್ ಮ್ಯೂಸಿಕ್ ತಂಡದಿಂದ ಭಜನೆ ಹಾಗೂ ಲಯನ್ಸ್ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದುವು. ಜಯಶ್ರೀ ಎಸ್ ಶೆಟ್ಟಿ ವಂದಿಸಿದರು.


Spread the love