ನರ್ಮ್ ಬಸ್ಸುಗಳ ಒಡಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ ತಂದ ಖಾಸಗಿ ಮ್ಹಾಲಕರು; 55 ಬಸ್ಸು ಸಂಚಾರ ಸ್ಥಗಿತ?

Spread the love

ನರ್ಮ್ ಬಸ್ಸುಗಳ ಒಡಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ ತಂದ ಖಾಸಗಿ ಮ್ಹಾಲಕರು; 55 ಬಸ್ಸು ಸಂಚಾರ ಸ್ಥಗಿತ?

ಉಡುಪಿ: ಸಾರ್ವಜನಿಕರ ಹೋರಾಟ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಹಿಂದಿನ ಜಿಲ್ಲಾಧಿಕಾರಿ ಡಾ ಆರ್ ವಿಶಾಲ್ ಅವರ ದಿಟ್ಟ ನಿರ್ಧಾರದ ಪರಿಣಾಮವಾಗಿ ಉಡುಪಿ ನಗರ, ಗ್ರಾಮಾಂತರ ಹಾಗೂ ಆಗುಂಬೆ ಸಾರಿಗೆ ಹೆಸರಿನಲ್ಲಿ ಓಡಾಟ ಪ್ರಾರಂಭಿಸಿದ್ದ ಸುಮಾರು 55 ಬಸ್ಸುಗಳು ಖಾಸಗಿ ಬಸ್ ಮ್ಹಾಲಿಕರ ಸಂಘದವರು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದ ಪರಿಣಾಮ ಏಕಾಏಕಿ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಜನಸಾಮಾನ್ಯರು, ಹಿರಿಯ ನಾಗರಿಕರು, ಅಂಗವಿಕಲು ಹಾಗೂ  ವಿದ್ಯಾರ್ಥಿಗಳು, ಸರಕಾರಿ ಬಸ್ಸುಗಳನ್ನು ಹೆಚ್ಚು ನೆಚ್ಚಿಕೊಂಡ ಪರಿಣಾಮ ಜಿಲ್ಲೆಯಲ್ಲಿ ಓಡಾಡುತ್ತಿರುವ ಖಾಸಗಿ ಬಸ್ಸುಗಳ ಭವಿಷ್ಯ ಅತಂತ್ರ ಸ್ಥಿತಿಗೆ ತೆರಳಿತ್ತು. ಸರಕಾರಿ ಬಸ್ಸುಗಳಲ್ಲಿನ ಸಿಬಂದಿಗಳು ಮಾನವೀಯ ಸೇವೆ, ದರದಲ್ಲಿ ರಿಯಾಯತಿ ಪ್ರಯಾಣಿಕರನ್ನು ಖಾಸಗಿ ಬಸ್ಸಿನತ್ತ ತಲೆ ಹಾಕದಂತೆ ಮಾಡಿತ್ತು. ಅಲ್ಲದೆ ಖಾಸಗಿ ಬಸ್ಸಿನ ಸಿಬಂದಿಗಳ ಅಮಾನವೀಯ ವರ್ತನೆಯಿಂದ ರೋಸಿಹೋದ ಜನರು ಹೆಚ್ಚು ಹೆಚ್ಚು ಸರಕಾರಿ ಬಸ್ಸುಗಳನ್ನು ಹಾಕುವಂತೆ ಸಾರಿಗೆ ಪ್ರಾಧಿಕಾರದ ಸಭೆಗಳಲ್ಲಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ರಾಜ್ಯ ಕೆ.ಎಸ್.ಆರ್.ಟಿ.ಸಿ. ನಿಗಮದ ಅಧ್ಯಕ್ಷರಾಗಿ ಆಯ್ಕೆಗೊಂಡ ಬೈಂದೂರು ಶಾಸಕ ಗೋಪಾಲ ಪೂಜಾರಿಯವರ ವಿಶೇಷ ಮುತುವರ್ಜಿಯ ಪರಿಣಾಮ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಸರಕಾರಿ ಬಸ್ಸುಗಳು ಓಡುವಂತಾಯಿತು.

ಇದರಿಂದ ಖಾಸಗಿ ಬಸ್ಸುಗಳ ವ್ಯವಹಾರಕ್ಕೆ ಕುತ್ತು ಬಂದ ಪರಿಣಾಮವಾಗಿ ಮಾರ್ಚ್ 21 ರ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಗೆ 55 ಪರ್ಮಿಟ್ಗಳನ್ನು ರಹದಾರಿ ಮತ್ತು ಸಮಯ ನಿಗದಯೊಂದಿಗೆ ನೀಡಿದ್ದು ಖಾಸಗಿ ಬಸ್ಸುಗಳಿಗೆ ನೀಡಿಲ್ಲ ಅಲ್ಲದೆ ಆರ್ಟಿಎ ನಡಾವಳಿಯಲ್ಲಿ 278 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದರೂ ಸರತಿ ತಪ್ಪಿಸಿ ಕೆ.ಎಸ್.ಆರ್.ಟಿ.ಸಿ.ಗೆ ರಾಷ್ಟ್ರೀಕೃತವಲ್ಲದ ಮಾರ್ಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. 1997, 2007ರಲ್ಲಿ ಹೈಕೋರ್ಟ್ ನೀಡಿದ ಆದೇಶವನ್ನು ಪಾಲಿಸಿಲ್ಲ ಎಂದು ಆರೋಪಿಸಿ ಖಾಸಗಿ ಬಸ್ಸಿನ ಮ್ಹಾಲಕರು ಹೈಕೋರ್ಟಿನ ಮೆಟ್ಟಿಲೇರಿದ್ದರು. ಅದರಂತೆ ಜೂನ್ 22 ರಂದು ಕೆ.ಎಸ್.ಆರ್.ಟಿ.ಸಿ.ಯ 55 ಬಸ್ಸುಗಳ ಪರ್ಮೀಟ್ ರದ್ದುಗೋಲಿಸಿ ಹೈಕೋರ್ಟ್ ಆದೇಶವನ್ನು ನೀಡಿತ್ತು.

ಹೈಕೋರ್ಟಿನ ಆದೇಶದಂತೆ ಕೆ.ಎಸ್.ಆರ್.ಟಿ.ಸಿ.ಯ 55 ಬಸ್ಸುಗಳ ಪರ್ಮೀಟ್ ರದ್ದುಗೋಳಿಸಿದ್ದರೂ ಆದೇಶವನ್ನು ಪಾಲಿಸದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ನಡೆಯನ್ನು ವಿರೋಧೀಸಿ ಖಾಸಗಿ ಬಸ್ಸುಗಳ ಮ್ಹಾಲಿಕರು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹಾಗೂ ಪ್ರಾದೇಶಿಕ ಸಾರಿಗೆ ಉಪ ಆಯುಕ್ತ ಗುರುಮೂರ್ತಿ ಕುಲಕ್ಣಿ ಅವರಿಗೆ ಮನವಿ ಸಲ್ಲಿಸಿ ಕೂಡ ಬಸ್ಸುಗಳನ್ನು ನಿಲ್ಲಿಸುವಂತೆ ವಿನಂತಿಸಿದ್ದಾರೆ. ಈಗಾಗಲೇ ಉಡುಪಿಯಲ್ಲಿ 3 ಸರಕಾರಿ ಬಸ್ಸುಗಳನ್ನು ವಶಕ್ಕೆ ಪಡೆದಿದ್ದು ಉಳಿದ 52 ಬಸ್ಸುಗಳನ್ನು ನಿಲ್ಲಿಸುವ ಕ್ರಮಕ್ಕೆ ಮುಂದಾಗಿದ್ದಾರೆ.

ಜಿಲ್ಲೆಯ ಗ್ರಾಮೀಣ ಭಾಗಗಳಾದ ನಾಡ್ಪಾಲು, ಅಮಾಸೆಬೈಲು, ಉಡುಪಿ ಶಿವಮೊಗ್ಗ ಪ್ರದೇಶಗಳೀಗೆ ಯಾವುದೇ ಖಾಸಗಿ ಬಸ್ಸುಗಳು ತೆರಳದ ಪರಿಣಾಮ ಖಾಸಗಿ ಬಸ್ಸುಗಳ ಸಂಚಾರದಿಂದ ಈ ಭಾಗದ ಜನತೆ ಹರ್ಷಗೊಂಡಿದ್ದರು ಈಗ ಹೈಕೋರ್ಟ್ ಆದೇಶದ ಪರಿಣಾಮ ಇಲ್ಲಿನ ಜನರು ಮತ್ತೆ ಸಂಚಾರದ ಸಂಕಷ್ಟವನ್ನು ಎದುರಿಸಬೇಕಾಗದ ಪರಿಸ್ಥಿತಿ ಒದಗಿ ಬಂದಿದೆ.

ಈ ನಡುವೆ ತಡೆಯಾಜ್ಞೆಯನ್ನು ತೆರವುಗೊಳಿಸಲು ಸಾರಿಗೆ ಸಚಿವರು, ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷರು, ಆಡಳಿತ ನಿರ್ದೇಶಕರೊಂದಿಗೆ ಮಾತನಾಡಿದ್ದು ಜನಸಾಮಾನ್ಯರಿಗೆ ಪರವಾಗಿ ಕಾನೂನು ಸಮರವನ್ನು ಮುಂದುವರಿಸಿ ಸದಾ ಜನರ ಪರವಾಗಿ ಇರುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳೀದ್ದಾರೆ. ಜನಸಾಮಾನ್ಯರಿಗೆ ಅನೂಕೂಲವಾಗಬೇಕೆಂಬ ನಿಟ್ಟಿನಲ್ಲಿ ಜೆನರ್ಮ್ ಬಸ್ಸುಗಳನ್ನು ಜಾರಿಗೆ ತಂದೆವು ಆದರೆ ಖಾಸಗಿ ಬಸ್ಸಿನವರು ಸರಕಾರಿ ಬಸ್ಸುಗಳ ಓಡಾಟಕ್ಕೆ ತಡೆಯಾಜ್ಞೆ ತಂದಿರುವುದು ಖಂಡನೀಯ. ಜನರ ಅನೂಕೂಲ ಮಾಡುವ ಸರಕಾರದ ಕೆಲಸಕ್ಕೆ ಖಾಸಗಿ ಬಸ್ಸಿನ ಮ್ಹಾಲಕರು ಅಡ್ಡಗಾಲು ಹಾಕುವ ಬದಲು ಸಹಕಾರ ನೀಡಬೇಕಿತ್ತು ಅದನ್ನು ಬಿಟ್ಟು ಅವರು ತಡೆಯಾಜ್ಞೆ ತಂದಿದ್ದಾರೆ ಎಂದರು.

 


Spread the love