ನಿತ್ಯಾಧರ್ ಮಾತೆ ದೇವಾಲಯದಲ್ಲಿ ಯುವ ಜನರಿಗಾಗಿ ಸಮೂಹ ಗಾಯನ ಸ್ಪರ್ಧೆ

Spread the love

ನಿತ್ಯಾಧರ್ ಮಾತೆ ದೇವಾಲಯದಲ್ಲಿ ಯುವ ಜನರಿಗಾಗಿ ಸಮೂಹ ಗಾಯನ ಸ್ಪರ್ಧೆ

ಮಂಗಳೂರು: ಮಂಗಳೂರಿನ ನಿತ್ಯಾಧರ್ ನಗರದಲ್ಲಿರುವ ನಿತ್ಯಾಧರ್ ಮಾತೆ ದೇವಾಲಯದಲ್ಲಿ ಯುವ ಜನರಿಗಾಗಿ ಸಮೂಹ ಗಾಯನ ಸ್ಪರ್ಧೆಯನ್ನು ಯುವಜನರ ವರ್ಷದ ಅಂಗವಾಗಿ ಆಚರಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯವು ಕಳೆದ ಒಂದು ವರ್ಷವನ್ನು ಯುವಜನರ ವರ್ಷವಾಗಿ ಆಚರಿಸಲು ಕರೆನೀಡಿದ್ದು ಇದರ ಅನುಸಾರವಾಗಿ ಈ ಚರ್ಚಿನಲ್ಲಿ ಪ್ರತಿತಿಂಗಳು ಒಂದು ಕಾರ್ಯಕ್ರಮವನ್ನು ನಡೆಸಿದ್ದು ಡಿಸೆಂಬರ್ ತಿಂಗಳ ಕಾರ್ಯಕ್ರಮವಾಗಿ ಯುವಕ ಹಾಗೂ ಯುವತಿಯರಿಗಾಗಿ ಸಮೂಹ ಸಂಗೀತ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ| ಎಲಿಯಾಸ್ ಡಿ’ಸೋಜಾ ಅವರು ಬೆಲೂನು ಗಳನ್ನು ಆಕಾಶಕ್ಕೆ ಹಾರಿಸಿ ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳಿಂದ ನಮ್ಮ ಯುವ ಜನರಲ್ಲಿ ಇರುವ ಹಾಡುವ ಕಲೆಯನ್ನು ಹೊರ ಹೊಮ್ಮಲು ಸಾಧ್ಯವಾಗುತ್ತದೆ. ಭಾಗವಹಿಸುವ ಪ್ರತಿ ಯುವಕರಿಗೆ ಅಭಿನಂದನೆ ಸಲ್ಲಿಸಿ ಚರ್ಚಿನ ಸರ್ವತೋಮುಖ ಅಭಿವೃದ್ಧಿಗೆ ಈ ಯುವಕರ ಕೊಡುಗೆ ಇನ್ನಷ್ಟು ಬೇಕಾಗಿದೆ ಎಂದರು.

ಚರ್ಚಿನ ಮಾಜಿ ಧರ್ಮಗುರು ಗಳಾದ ವಂದನೀಯ ಡೆನ್ನಿಸ್ ಸುವಾರಿಸ್, ವಲಯ ಯುವ ನಿರ್ದೇಶಕ ಹಾಗೂ ಬೊಳ ಚರ್ಚಿನ ಧರ್ಮಗುರುಗಳಾದ ವಂದನೀಯ ಮೈಕಲ್ ಡಿ’ಸೋಜಾ, ಪೆರ್ಮನ್ನೂರು ಚರ್ಚಿನ ಉಪಾಧ್ಯಕ್ಷ ಮೆಲ್ವಿನ್ ಡಿ’ ಸೋಜಾ, ಮುಂತಾದವರು ಉಪಸ್ಥಿತರಿದ್ದರು. ಚರ್ಚಿನ 50ಕ್ಕೂ ಮೇಲ್ಪಟ್ಟ ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love