ನಿಯಮ ಉಲ್ಲಂಘನೆ: 11 ಮೆಡಿಕಲ್‍ಗಳ ಲೈಸನ್ಸ್ ಅಮಾನತು

Spread the love

ನಿಯಮ ಉಲ್ಲಂಘನೆ: 11 ಮೆಡಿಕಲ್‍ಗಳ ಲೈಸನ್ಸ್ ಅಮಾನತು

ಮ0ಗಳೂರು : ಅವಧಿ ಮೀರಿದ ಔಷಧಿ ಮಾರಾಟ, ಫಾರ್ಮಾಸಿಸ್ಟ್‍ಗಳಿಲ್ಲದೇ ಮೆಡಿಕಲ್‍ನಲ್ಲಿ ಔಷಧಿಗಳ ಮಾರಾಟ ಸೇರಿದಂತೆ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ 11 ಮೆಡಿಕಲ್ ಮತ್ತು ಸಗಟು ಔಷಧ ಮಾರಾಟ ಸಂಸ್ಥೆಯ ಲೈಸನ್ಸನ್ನು ಅಮಾನತುಗೊಳಿಸಲಾಗಿದೆ.

ಔಷಧ ನಿಯಂತ್ರಕ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ವಿವಿದೆಡೆ ಮೆಡಿಕಲ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ನಿಯಮ ಉಲ್ಲಂಘನೆ ಕಂಡುಬಂದಿವೆ. ಪರಿವೀಕ್ಷಣೆ ಸಮಯದಲ್ಲಿ ಕಂಡುಬಂದಿರುವ ಪರವಾನಿಗೆ ಷರತ್ತುಗಳ ಉಲ್ಲಂಘನೆ ಮತ್ತು ಔಷಧ ಮತ್ತು ಕಾಂತಿವರ್ಧಕಗಳ ಅಧಿನಿಯಮ 1940 ಮತ್ತದರ ನಿಯಮಾವಳಿಗಳ ಉಲ್ಲಂಘನೆಗಳಿಗಾಗಿ ಸುಮಾರು 11 ಸಂಸ್ಥೆಗಳ ಪರವಾನಿಗೆಗಳನ್ನು ನಿಗದಿತ ಅವಧಿಗೆ ಅಮಾನತುಗೊಳಿಸಲಾಗಿದೆ.

ಮೆಡಿಕಲ್‍ನಲ್ಲಿ ಔಷಧಿಗಳು ಫಾರ್ಮಾಸಿಸ್ಟ್‍ಗಳೇ ನೀಡಬೇಕಿದೆ. ತಪಾಸಣೆ ಸಂದರ್ಭದಲ್ಲಿ ಫಾಮಾಸಿಸ್ಟ್‍ಗಳಿಲ್ಲದೇ ಔಷಧ ಮಾರಾಟ ಮಾಡುತ್ತಿದ್ದ ಹಾಗೂ ವಾಯಿದೆ ಮೀರಿದ ಔಷಧಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೆ ಹಾಗೂ ಜನವಸತಿ ಪ್ರದೇಶದಲ್ಲಿ ಎಸೆದಿರುವ ಎರಡು ಮೆಡಿಕಲ್‍ಗಳ ಲೈಸನ್ಸ್ ರದ್ದುಪಡಿಸಲಾಗಿದೆ.

ಇದಲ್ಲದೇ, ಬದಲಿ ಔಷಧ ಮಾರಾಟ, ಫಾರ್ಮಾಸಿಸ್ಟ್‍ಗಳ ಗೈರುಹಾಜರಿಯಲ್ಲಿ ಔಷಧ ಮಾರಾಟ ಸೇರಿದಂತೆ ವಿವಿಧ ನಿಯಮಗಳನ್ನು ಉಲ್ಲಂಘಿಸಿದ 10 ಮೆಡಿಕಲ್‍ಗಳ ಹಾಗೂ 1 ಸಗಟು ಔಷಧ ಮಾರಾಟ ಸಂಸ್ಥೆಯ ಪರವಾನಿಗೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಹಾಯಕ ಔಷಧ ನಿಯಂತ್ರಕರ ಪ್ರಕಟಣೆ ತಿಳಿಸಿದೆ.


Spread the love