ನಿರ್ಲಕ್ಷ್ಯ ವಹಿಸಿ ಮೃತದೇಹ ಕೊಳೆಯುವಂತೆ ಮಾಡಿದ ಯೇನಪೋಯ ಆಸ್ಪತ್ರೆಯ ಮೇಲೆ ಕ್ರಮಕ್ಕೆ ಡಿವೈಎಫ್‍ಐ ಆಗ್ರಹ

Spread the love

ನಿರ್ಲಕ್ಷ್ಯ ವಹಿಸಿ ಮೃತದೇಹ ಕೊಳೆಯುವಂತೆ ಮಾಡಿದ ಯೇನಪೋಯ ಆಸ್ಪತ್ರೆಯ ಮೇಲೆ ಕ್ರಮಕ್ಕೆ ಡಿವೈಎಫ್‍ಐ ಆಗ್ರಹ

ತೊಕ್ಕೊಟ್ಟು   : ಮೊನ್ನೆ ಕಲ್ಲಾಪುವಿನಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವಿಲ್ಸನ್ ಅಲೆನ್ ಫೆರ್ನಾಂಡಿಸ್ ಅವರ ಮೃತದೇಹವನ್ನು ದೇರಳಕಟ್ಟೆಯ ಯೇನಪೋಯ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇಡಲಾಗಿತ್ತು . ಇಂದು ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚರ್ಚ್‍ನಲ್ಲಿ ಅಂತ್ಯಕ್ರಿಯಾ ವಿಧಿಗಳನ್ನು ಹಮ್ಮಿಕೊಂಡಿದ್ದು ಅದರಂತೆ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಸ್ವೀಕರಿಸಲು ಹೋದಾಗ ಮೃತದೇಹ ಕೊಳೆತಿದ್ದು ಕಣ್ಣುಗಳು ಹೊರಗೆ ಬಂದು ವಿಕಾರವಾಗಿತ್ತು. ಆಸ್ಪತ್ರೆಯ ಸಿಬ್ಬಂದಿಗಳು ಶವಾಗಾರದ ವಿದ್ಯುತ್ ಸಂಪರ್ಕವನ್ನು ಆನ್ ಮಾಡದೇ ಹಾಗೇ ಶವ ಇಟ್ಟು ಹೋದ ಕಾರಣ ಈ ಘಟನೆ ನಡೆದಿದ್ದು ಮೃತದೇಹದ ಅಂತಿಮ ದರ್ಶನಕ್ಕೆ ಬಂದ ಕುಟುಂಬದವರು ಮತ್ತು ಗೆಳೆಯರಿಗೆ ಮೃತ ದೇಹದ ಪರಿಸ್ಥಿತಿಯನ್ನು ಕಂಡು ರೋಧಿಸುವ ಸ್ಥಿತಿಗೆ ಬಂದಿದ್ದರು. ಇದಕ್ಕೆ ಯೇನಪೋಯ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಮತ್ತು ಆಡಳಿತ ಮಂಡಳಿಯ ಬೇಜವಾಬ್ಧಾರಿ ನಿರ್ವಹಣೆಯೇ ಕಾರಣವಾಗಿದ್ದು ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮತ್ತು ಕಾರ್ಯದರ್ಶಿ ಸುನಿಲ್ ತೇವುಲ ಆಗ್ರಹಿಸಿದ್ದಾರೆ.

ದೇರಳಕಟ್ಟೆ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಆಗಾಗ ಇಂತಹ ನಿರ್ಲಕ್ಷ್ಯದ ಘಟನೆಗಳು ವರದಿಯಾಗುತ್ತಿವೆ. ಆದರೆ ಹಣದ ಪ್ರಭಾವದಿಂದ ಇವುಗಳನ್ನು ರಾಜಿ ಪಂಚಾಯಿತಿಯಲ್ಲಿ ಮುಗಿಸುವ ಕೆಲಸಗಳೂ ನಡೆಯುತ್ತವೆ. ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಬಂದ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗಾಗಿ ಇಲ್ಲಿನ ಅಮಾಯಕ ಜನಗಳನ್ನು ಬಳಸಿಕೊಂಡು ಅವರ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಈ ಬಗ್ಗೆ ವೈದ್ಯಕೀಯ ಇಲಾಖೆ ಮತ್ತು ಜಿಲ್ಲಾಡಳಿತ ಗಮನಹರಿಸಬೇಕು . ಇಂದು ನಡೆದ ಘಟನೆ ಇನ್ನು ಮುಂದೆ ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಲಿಖಿತವಾಗಿ ವಿಲ್ಸನ್ ಅಲೆನ್ ಫೆರ್ನಾಂಡಿಸ್ ಅವರ ಕುಟುಂಬಕ್ಕೆ ನೀಡಿ ಯೆನಪೋಯ ಆಸ್ಪತ್ರೆ ಕುಟುಂಬಸ್ಥರ ಕ್ಷಮೆಯಾಚಿಸಬೇಕು ಮತ್ತು ಮ್ಥತದೇಹ ಪರಿಪಾಲಲನೆಯಲ್ಲಿ ನಿರ್ಲಕ್ಷ್ಯವಹಿಸಿ ಕಟುಂಬಸ್ಥರಿಗೆ ನೋವುಂಟು ಮಾಡಿದ್ದಕ್ಕಾಗಿ ಅವರಿಗೆ 10 ಲಕ್ಷ ರೂ ಪರಿಹಾರವನ್ನೂ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ .
ನಿರ್ಲಕ್ಷ್ಯ ವಹಿಸಿ ಮೃತದೇಹ ಕೊಳೆಯುವಂತೆ ಮಾಡಿದ ಯೇನಪೋಯ ಆಸ್ಪತ್ರೆಯ ಮೇಲೆ ಕ್ರಮಕ್ಕೆ ಡಿವೈಎಫ್‍ಐ ಆಗ್ರಹ

ತೊಕ್ಕೊಟ್ಟು (ಅಕ್ಟೋಬರ್ 27) : ಮೊನ್ನೆ ಕಲ್ಲಾಪುವಿನಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವಿಲ್ಸನ್ ಅಲೆನ್ ಫೆರ್ನಾಂಡಿಸ್ ಅವರ ಮೃತದೇಹವನ್ನು ದೇರಳಕಟ್ಟೆಯ ಯೇನಪೋಯ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇಡಲಾಗಿತ್ತು . ಇಂದು ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚರ್ಚ್‍ನಲ್ಲಿ ಅಂತ್ಯಕ್ರಿಯಾ ವಿಧಿಗಳನ್ನು ಹಮ್ಮಿಕೊಂಡಿದ್ದು ಅದರಂತೆ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಸ್ವೀಕರಿಸಲು ಹೋದಾಗ ಮೃತದೇಹ ಕೊಳೆತಿದ್ದು ಕಣ್ಣುಗಳು ಹೊರಗೆ ಬಂದು ವಿಕಾರವಾಗಿತ್ತು. ಆಸ್ಪತ್ರೆಯ ಸಿಬ್ಬಂದಿಗಳು ಶವಾಗಾರದ ವಿದ್ಯುತ್ ಸಂಪರ್ಕವನ್ನು ಆನ್ ಮಾಡದೇ ಹಾಗೇ ಶವ ಇಟ್ಟು ಹೋದ ಕಾರಣ ಈ ಘಟನೆ ನಡೆದಿದ್ದು ಮೃತದೇಹದ ಅಂತಿಮ ದರ್ಶನಕ್ಕೆ ಬಂದ ಕುಟುಂಬದವರು ಮತ್ತು ಗೆಳೆಯರಿಗೆ ಮೃತ ದೇಹದ ಪರಿಸ್ಥಿತಿಯನ್ನು ಕಂಡು ರೋಧಿಸುವ ಸ್ಥಿತಿಗೆ ಬಂದಿದ್ದರು. ಇದಕ್ಕೆ ಯೇನಪೋಯ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಮತ್ತು ಆಡಳಿತ ಮಂಡಳಿಯ ಬೇಜವಾಬ್ಧಾರಿ ನಿರ್ವಹಣೆಯೇ ಕಾರಣವಾಗಿದ್ದು ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮತ್ತು ಕಾರ್ಯದರ್ಶಿ ಸುನಿಲ್ ತೇವುಲ ಆಗ್ರಹಿಸಿದ್ದಾರೆ.