ನೇಜಾರು ಹತ್ಯಾಕಾಂಡ: ಆರೋಪಿ ಸ್ಥಳ ಮಹಜರಿನ ವೇಳೆ ಸಾರ್ವಜನಿಕರ ಆಕ್ರೋಶ, ಲಾಠಿ ಪ್ರಹಾರ

Spread the love

ನೇಜಾರು ಹತ್ಯಾಕಾಂಡ: ಆರೋಪಿ ಸ್ಥಳ ಮಹಜರಿನ ವೇಳೆ ಸಾರ್ವಜನಿಕರ ಆಕ್ರೋಶ, ಲಘು  ಪ್ರಹಾರ

ಉಡುಪಿ: ಒಂದೇ ಕುಟುಂಬದ ನಾಲ್ವರು ಕಗ್ಗೊಲೆ ಮಾಡಿದ ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಸ್ಥಳ ಮಹಜರಿಗಾಗಿ ಕರೆದುಕೊಂಡು ಬಂದ ವೇಳೆ ಉದ್ರಿಕ್ತಗೊಂಡ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

ಸ್ಥಳ ಮಹಜರಿಗಾಗಿ ಕರೆದುಕೊಂಡು ಬಂದ ವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ಇದ್ದ ಪೊಲೀಸ್ ವಾಹನದ ಮೇಲೆ ನುಗ್ಗಲು ಯತ್ನಿಸಿದ ಸಾರ್ವಜನಿರನ್ನು ಲಾಠಿ ಹಿಡಿದು ಪೊಲೀಸರು ಚದುರಿಸಿಬೇಕಾಯಿತು. ಈ ವೇಳೆ ಸ್ಥಳದಲ್ಲಿ ಕೆಲ ಸಾರ್ವಜನಿಕರಿಗೆ ಲಾಟಿ ಏಟು ಬಿದ್ದಿದೆ.

ಆತ 15 ನಿಮಿಷ ತೆಗೆದುಕೊಂಡಿದ್ದಾನೆ ನಮಗೆ 30 ಸೆಕೆಂಡು ಅವನನ್ನು ಕೊಡಿ ಎಂದು ಪೊಲೀಸರ ವಿರುದ್ಧ ಸಾರ್ವಜನಿಕರ ಧಿಕ್ಕಾರ ಕೂಗಿದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿದ್ದು ಜನಾಕ್ರೋಶದ ನಡುವೆ ಮಹಜರು ಮುಗಿಸಿ ಆರೋಪಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.

ಈ ನಡುವೆ ಸಾರ್ವಜನಿಕರು ರಸ್ತೆ ತಡೆ ನಡೆಸಿ ಸ್ಥಳಕ್ಕೆ ಎಸ್ ಪಿ, ಡಿ ಸಿ ಬರಬೇಕು ಎಂದು ಆಗ್ರಹಿಸಿದ್ದಾರೆ

ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಮಲ್ಪೆ ಠಾಣಾಧಿಕಾರಿ ಗುರುನಾಥ ಹಾದಿಮನಿ ಅವರು ಸೂಕ್ತ ತನಿಖೆ ಆಗುತ್ತಿದ್ದು ಕಾನೂನು ಪ್ರಕಾರ ಆರೋಪಿಗೆ ಶಿಕ್ಷೆಯಾಗಲಿದೆ ಪ್ರತಿಭಟನೆಯನ್ನು ಕೈಬಿಡುವಂತೆ ಅವರು ಮನವಿ ಮಾಡಿದರು. ಮಲ್ಪೆ ಠಾಣಾಧಿಕಾರಿ ಗುರುನಾಥ ಹಾದಿಮನಿ ಅವರ ಮಾತಿಗೆ ಬೆಲೆ ಕೊಟ್ಟ ಸಾರ್ವಜನಿಕರು ಪ್ರತಿಭಟನೆಯನ್ನು ಕೈ ಬಿಟ್ಟರು.


Spread the love