ಪಂಜಿಮೊಗರುವಿನಲ್ಲಿ ಮನೆ ಕುಸಿದ ಸ್ಥಳಕ್ಕೆ ನಳಿನ್-ಡಾ.ಭರತ್ ಶೆಟ್ಟಿ ಭೇಟಿ  

Spread the love

ಪಂಜಿಮೊಗರುವಿನಲ್ಲಿ ಮನೆ ಕುಸಿದ ಸ್ಥಳಕ್ಕೆ ನಳಿನ್-ಡಾ.ಭರತ್ ಶೆಟ್ಟಿ ಭೇಟಿ  

ಮಂಗಳೂರು: ಪಂಜಿಮೊಗರುವಿನಲ್ಲಿ ಮಂಗಳವಾರ ಮನೆ ಕುಸಿದು ಮೂವರಿಗೆ ಗಾಯವಾಗಿದ್ದು ,ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕ ಡಾ.ವೈ.ಭರತ್ ಶೆಟ್ಟಿ ಬೇಟಿ ನೀಡ ಪರಿಶೀಲನೆ ನಡೆಸಿದರು.

ಮನೆಯವರೊಂದಿಗೆ ಮಾತುಕತೆ ನಡೆಸಿದ ಅವರು ಪರಿಹಾರ ಒದಗಿಸುವ ಭರವಸೆ ನೀಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ನೆರೆ ಹಾವಳಿಯಿಂದ ನೂರು ಕೋಟಿ ನಷ್ಟವಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡರೂ ರಾಜ್ಯ ಸರಕಾರ ನಿದ್ದೆಯಲ್ಲಿದೆ. ಪಾಲಿಕೆಯ ಎಡವಟ್ಟಿನಿಂದ ಕೃತಕ ನೆರೆ ಹಾವಳಿ ಉಂಟಾಗಿದೆ. ಇದನ್ನು ಅಧಿಕಾರಿಗಳೇ ಸರಿ ಪಡಿಸ ಬೇಕು ಎಂದು ತಾಕೀತು ಮಾಡಿದರು.

ಶಾಸಕ ಡಾ.ವೈ ಭರತ್ ಶೆಟ್ಟಿ ಮಾತನಾಡಿ ಪಾಲಿಕೆಯ ವೈಫಲ್ಯದಿಂದ ಸಮಸ್ಯೆ ಗಂಭೀರವಾಯಿತು. ರಾಜ್ಯ ಸರಕಾರ ವಿಶೇಷ ತಂಡ ಕಳಿಸಿ ನಷ್ಟವನ್ನು ಕೂಡಲೇ ಬಿಡುಗಡೆ ಮಾಡಬೇಕು. ರಸ್ತೆ, ಸೇತುವೆ, ಮನೆ, ಶಾಲೆಗಳಿಗೆ ಹಾನಿಯಾಗಿದೆ. ಮಂಗಳೂರು ಉತ್ತರ ಕ್ಷೇತ್ರದ ಪ್ರತೀ ನೆರೆ ಪೀಡಿತ ಪ್ರದೇಶಗಳಿಗೆ ನೀಡಿ ಪರಿಶೀಲನೆ ನಡೆಸಿದ್ದೇನೆ.ಪರಿಹಾರ ನೀಡುವ ಕುರಿತಂತೆ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿದ್ದೇನೆ ಎಂದರು.

ವೈಯುಕ್ತಿಕ ಹೆಲ್ಪ್ ಲೈನ್ :
ಮಂಗಳೂರು ಉತ್ತರ ಕ್ಷೇತ್ರದದಲ್ಲಿ ಮಳೆಗಾಲದ ಸಂದರ್ಭ ಗಂಭೀರ ಸಮಸ್ಯೆಗಳಾದರೆ ನೇರವಾಗಿ ನನ್ನನ್ನು ಸಂಪರ್ಕಿಸ ಬಹುದು. ಯಾವುದೇ ಸಂದರ್ಭದಲ್ಲೂ ನಾನು ಅಥವಾ ನನ್ನ ಕಾರ್ಯಕರ್ತರು ಸಹಾಯಕ್ಕೆ ಬರಲಿದ್ದಾರೆ. ಸಣ್ಣ ಸಮಸ್ಯೆಗಳನ್ನು ಸ್ಥಳೀಯ ವಿ.ಎ ,ತಹಶೀಲ್ದಾರ್ ಅವರಿಗೆ ನಿರ್ವಹಣೆ ಮಾಡುವಂತೆ ಸೂಚಿಸಲಾಗುವುದು. ಗಂಭೀರ ಸ್ಥಿತಿಯಲ್ಲಿ ನಾನೇ ಖುದ್ದು ತುರ್ತು ಸಂಪರ್ಕ ಸಹಾಯವಾಣಿ: 8904636375, 9035774818
ಡಾ.ವೈ.ಭರತ್ ಶೆಟ್ಟಿ, ಶಾಸಕರು , ಮಂ.ಉತ್ತರ ವಿಧಾನ ಸಭಾ ಕ್ಷೇತ್ರ


Spread the love