ಪಡಿತರ ಕೂಪನ್ : ಜಿಲ್ಲೆಯ 111 ಗ್ರಾ.ಪಂ.ಗಳಿಗೆ ವಿಸ್ತರಣೆ

Spread the love

ಪಡಿತರ ಕೂಪನ್ : ಜಿಲ್ಲೆಯ 111 ಗ್ರಾ.ಪಂ.ಗಳಿಗೆ ವಿಸ್ತರಣೆ

ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016ನೇ ಅಕ್ಟೋಬರ್ ತಿಂಗಳಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಪ್ರದೇಶ, ಪುರಸಭೆ ,ಪಟ್ಟಣ ಪಂಚಾಯತ್ ಹಾಗೂ ಆಯ್ದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಡಿತರ ಸಾಮಾಗ್ರಿ ಪಡೆಯಲು ಕೂಪನ್ ವ್ಯವಸ್ಥೆ ಮಾಡಲಾಗಿದ್ದು, 3 ತಿಂಗಳ ಕೂಪನ್ ಒಮ್ಮೆಗೇ ನೀಡಲಾಗುತ್ತಿದೆ. ಪಡಿತರ ಚೀಟಿದಾರರು ಅಕ್ಟೋಬರ್ ತಿಂಗಳಿಗೆ ಸಂಬಂಧಿಸಿದ ಕೂಪನ್ ಮಾತ್ರ ನ್ಯಾಯಬೆಲೆ ಅಂಗಡಿಗೆ ನೀಡಿ ಪಡಿತರ ಸಾಮಾಗ್ರಿ ಪಡೆದುಕೊಳ್ಳಬೇಕು. ಮುಂದಿನ ಎರಡು ತಿಂಗಳ ಕೂಪನ್ ಜೋಪಾನವಾಗಿ ಇಟ್ಟುಕೊಂಡು ತಿಂಗಳಿನಲ್ಲಿ ಪಡಿತರ ಪಡೆದುಕೊಳ್ಳಬೇಕು.

ಈಗಾಗಲೇ ಕೂಪನ್ ವ್ಯವಸ್ಥೆ ಜಾರಿಯಲ್ಲಿರುವ ಪ್ರದೇಶಗಳ ಜೊತೆಗೆ ನವೆಂಬರ್ ತಿಂಗಳಿನಿಂದ ಮಂಗಳೂರು ತಾಲೂಕಿನ 23 ಗ್ರಾಮ ಪಂಚಾಯತ್‍ಗಳು, ಬಂಟ್ಟಾಳ ತಾಲೂಕಿನ 30 ಗ್ರಾಮ ಪಂಚಾಯತ್‍ಗಳು, ಪುತ್ತೂರು ತಾಲೂಕಿನ 20 ಗ್ರಾಮ ಪಂಚಾಯತ್‍ಗಳು, ಸುಳ್ಯ ತಾಲೂಕಿನ 12 ಗ್ರಾಮ ಪಂಚಾಯತ್‍ಗಳು ಹಾಗೂ ಬೆಳ್ತಂಗಡಿ ತಾಲೂಕಿನ 26 ಗ್ರಾಮ ಪಂಚಾಯತ್‍ಗಳು ಸೇರಿದಂತೆ ಒಟ್ಟು 111 ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಾಮಾಗ್ರಿ ಪಡೆಯಲು ಕೂಪನ್ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಕೂಪನ್ ವ್ಯವಸ್ಥೆ ಜ್ಯಾರಿಗೆ ಬರಲಿರುವ ಗ್ರಾಮಪಂಚಾಯತ್‍ಗಳ ವಿವರ ಆಯಾ ತಾಲೂಕು ಕಛೇರಿಗಳಲ್ಲಿ ಲಭ್ಯವಿದೆ.

ಪಡಿತರ ಚೀಟಿದಾರರಿಗೆ ಕೂಪನ್ ಪಡೆದುಕೊಳ್ಳಲು ಅನುಕೂಲವಾಗುವಂತೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಂಚೈಸಿಗಳನ್ನು ತೆರೆಯಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್‍ಗಳ ಮೂಲಕ ಕೂಪನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.ಪಡಿತರ ಪಡೆಯುವ ವ್ಯವಸ್ಥೆ 161 ನಂಬರಿಗೆ ಡಯಾಲ್ ಮಾಡಿ 4 ನ್ನು ಒತ್ತಿದಾಗ ಆಹಾರ ಶಾಖೆಯ ವೆಬ್ ಸಂಪರ್ಕ ಸಿಗುತ್ತದೆ.ಈ ಸೌಲಭ್ಯ ಇಚ್ಚಿಸುವವರು ಸಮೀಪದ ಆಧಾರ ಕೇಂದ್ರಗಳಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳುವಂತೆ ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love