ಪತ್ರಕರ್ತರ ಮೇಲೆ ಹಲ್ಲೆ – ರಕ್ಷಣೆ ಕೋರಿ ಪತ್ರಕರ್ತರಿಂದ ಮನವಿ

Spread the love

 ಪತ್ರಕರ್ತರ ಮೇಲೆ ಹಲ್ಲೆ – ರಕ್ಷಣೆ ಕೋರಿ ಪತ್ರಕರ್ತರಿಂದ ಮನವಿ

ಮಂಗಳೂರು: ಪತ್ರಕರ್ತರ ಮೇಲೆ ಆಗಾಗ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಯೊಬ್ಬನ ಮನೆಗೆ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿಯ ಕುರಿತಂತೆ ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ವಾರ್ತಾಭಾರತಿ ಪತ್ರಿಕೆಯ ಬಂಟ್ವಾಳ ವರದಿಗಾರ ಇಮ್ತಿಯಾಜ್ ತುಂಬೆಯವರ ಮೇಲೆ ಬಂಟ್ವಾಳ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ

ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ತಕ್ಷಣ ಪೊಲೀಸರು ಇಂತಹ ವರದಿಗಾರನೆ ವರದಿ ಮಾಡಿದ್ದಾರೆ ಎಂಬ ಗುಮಾನಿಯ ಮೇರೆಗೆ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿರುವುದು ಖಂಡನಿಯ.

ಪೊಲೀಸರು ತಮ್ಮ ತಪ್ಪನ್ನು ಮರೆಮಾಚಲು ಅಥವಾ ಪತ್ರಕರ್ತರ ಬಾಯಿ ಮುಚ್ಚಿಸಲು ಈ ಕ್ರಮ ಕೈಗೊಂಡತಿದೆ. ಪತ್ರಕರ್ತರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ನಡೆದು ಕೊಂಡಿರುವುದು ಸರಿಯಲ್ಲ.

ಮಂಗಳೂರು ನಗರದಲ್ಲಿ ಗುರುವಾರ ಬಿಜೆಪಿ ಯವ ಮೋರ್ಚಾ ಆಯೋಜಿಸಿದ ಮಂಗಳೂರು ಚಲೋ ರ್ಯಾಲಿಯ ವರದಿಗೆ ತೆರಳಿದ್ದ ಖಾಸಗಿ ವಾಹಿನಿ ವಿ4 ಚಾನೆಲ್‍ನ ವರದಿಗಾರ ಮೂಸಾ ಕಲೀಂ ಹಾಗೂ ರಾಷ್ಟ್ರೀಯ ವಾಹಿನಿಯ ಕ್ಯಾಮರಮೆನ್ ಒಬ್ಬರ ಮೇಲೆ ಹಲ್ಲೆ ನಡೆದಿದೆ.

ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಪತ್ರಕರ್ತರ ಸಂಘ ಖಂಡಿಸುತ್ತದೆ ಹಾಗೂ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪತ್ರಕರ್ತರಿಗೆ ರಕ್ಷಣೆ ಒದಗಿಸುವಂತೆ ಪತ್ರಕರ್ತರ ಸಂಘ ಒತ್ತಾಯಿಸಿದೆ.

 


Spread the love