ಪರಶುರಾಮ ಥೀಂ ಪಾರ್ಕ್‌ಗೆ ಅಕ್ರಮ ಪ್ರವೇಶ: ಹಲವರ ವಿರುದ್ಧ ಪ್ರಕರಣ ದಾಖಲು

Spread the love

ಪರಶುರಾಮ ಥೀಂ ಪಾರ್ಕ್‌ಗೆ ಅಕ್ರಮ ಪ್ರವೇಶ: ಹಲವರ ವಿರುದ್ಧ ಪ್ರಕರಣ ದಾಖಲು
 

ಕಾರ್ಕಳ: ಸಾರ್ವಜನಿಕ ಪ್ರವೇಶ ನಿಷೇಧಿತ ಬೈಲೂರಿನ ಉಮಿಕ್ಕಳ ಬೆಟ್ಟಕ್ಕೆ ಅಕ್ರಮ ಪ್ರವೇಶ ಮಾಡಿರುವ ಘಟನೆಗೆ ಸಂಬಂದಿಸಿ ಕಾರ್ಕಳ ನಗರ ಠಾಣೆಯಲ್ಲಿ ಪ್ರತ್ಯೇಕ ದೂರಿನನ್ವಯ ಇತ್ತಂಡಗಳ ಹಲವು ಮಂದಿಯ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.

ಪ್ರಸ್ತುತ ಥೀಮ್‌ ಪಾರ್ಕ್‌ಗೆ ಭೇಟಿ ನೀಡಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಆದರೆ ಅ. 19ರಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ಅನಂತರ ಸುಹಾಸ್‌, ಮಹಾವೀರ, ಸುಮಿತ್‌, ವಿಖ್ಯಾತ್‌, ಮುಸ್ತಾಫ‌, ರಾಕೇಶ್‌, ಸಮೃದ್ದಿ ಹಾಗೂ ಇತರರು ಪಾರ್ಕ್‌ನಲ್ಲಿರುವ ಮೂರ್ತಿಯ ಪಕ್ಕಕ್ಕೆ ಹೋಗಿ ಪರಶುರಾಮರ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದಾಗಿ ದಿವ್ಯಾ ನಾಯಕ್‌ ಕಾರ್ಕಳ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಶುಭದ ರಾವ್‌, ದೀಕ್ಷಿತ್‌, ದೀಪಕ್‌, ಸುಬಿತ್‌, ವಿವೇಕಾನಂದ, ಯೋಗೀಶ, ಸೂರಜ್‌, ಪ್ರದೀಪ್‌, ಅಲ್ಪಾಜ್‌, ಐವಾನ್‌, ದಿವ್ಯಾ, ಕೃಷ್ಣ, ಹರೀಶ್‌ ಹಾಗೂ ಇತರರು ಅ.19ರಂದು ಪಾರ್ಕ್‌ಗೆ ಹೋಗಿ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣ ಕವಚವನ್ನು ಹರಿದು ಹಾಕಿ ಕಂಚಿನ ಮೂರ್ತಿಯ ಮೇಲಿದ್ದ ಫಿನಿಶಿಂಗ್‌ ಲೇಪನವನ್ನು ಹರಿದು ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿ ಹಾನಿ ಮಾಡಿ ಸರಕಾರಕ್ಕೆ ನಷ್ಟವುಂಟುಮಾಡಿದ್ದಾರೆ ಎಂದು ಸುನೀಲ್‌ ಹೆಗ್ಡೆ ಎಂಬವರು ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love