ಪರಸ್ಪರ ಸಂವಹನದಿಂದ ನೈಪುಣ್ಯತೆ ವೃದ್ಧಿ- ಆಸ್ಟ್ರೋಮೋಹನ್

Spread the love

ಪರಸ್ಪರ ಸಂವಹನದಿಂದ ನೈಪುಣ್ಯತೆ ವೃದ್ಧಿ- ಆಸ್ಟ್ರೋಮೋಹನ್

ಉಡುಪಿ: ವಿದ್ಯೆಯನ್ನು ದಾನ ಮಾಡಿದಾಗ ಪರಿಪೂರ್ಣತೆ ಬರುವಂತೆ ಸಂದೇಹಗಳನ್ನು ಮುಂದಿಟ್ಟು ಅದಕ್ಕೆ ತಕ್ಕ ಉತ್ತರಗಳನ್ನು ಪಡಕೊಂಡಾಗ ಮಾಡವ ವೃತ್ತಿಯಲ್ಲಿ ಕುಶಲತೆ ಜಾಸ್ತಿಯಾಗುವುದು ಎಂದು ಉದಯವಾಣಿಯ ಖ್ಯಾತ ಪತ್ರಕರ್ತ, ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರಗ್ರಾಹಕ ಆಸ್ಟ್ರೋಮೋಹನ್ ಕೊಡವೂರು ಬ್ರಾಹ್ಮಣ ಮಹಾಸಭಾ “ವಿಂಶತಿ” ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಉಡುಪಿ ಜಿಲ್ಲೆಯ ವಿಪ್ರ ಛಾಯಾಚಿತ್ರಗ್ರಾಹಕರಿಗೆ “ಛಾಯಾಗ್ರಹಣದ ಬಗ್ಗೆ ಉಚಿತ ತರಬೇತಿ ಶಿಬಿರ” ದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ವಿಪ್ರರಲ್ಲಿ ‘ಧಿ’ ಶಕ್ತಿ ಇದೆ. ನೈಪುಣ್ಯತೆಯನ್ನು ಸಾಧಿಸಲು ಪರಸ್ಪರ ಸಂವಹನ ಕ್ರಿಯೆ ಇರಬೇಕು. ಅಂತಹ ಅವಕಾಶ ನೀಡುವ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ದಕ್ಷತೆಯನ್ನು ಹೆಚ್ಚಿಸಿಕೊಳ್ಳ ಬೇಕು ಎಂದು ಅಭಿಪ್ರಾಯ ಪಟ್ಟರು.

vipra-samaja-kodavoor vipra-samaja-kodavoor-jpg00 vipra-samaja-kodavoor-jpg01 vipra-samaja-kodavoor-jpg02

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಸಭಾದ ಅಧ್ಯಕ್ಷ ಕೆ.ಬಾಸ್ಕರ್ ಭಟ್ ಮಾತನಾಡಿ ವಿಂಶತಿ ವರ್ಷದ ಸರಣಿ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಬ್ರಾಹ್ಮಣ ಸಭಾ ಕೊಡವೂರು ಇನ್ನು ಮುಂದೆಯೂ ಇಂತಹ ಜನಹಿತ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.

ಈ ಸಂದರ್ಭದಲ್ಲಿ ವೃತ್ತಿಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ವಿಪ್ರ ಛಾಯಾಗ್ರಾಹಕರಾದ ಬ್ರಹ್ಮಾವರದ ಮೋಹನ್ ಉಡುಪ ಹಂದಾಡಿ, ಪರಶುರಾಮ ಭಟ್ ಕುಂಜಾರುಗಿರಿ, ಅನಂತಕೃಷ್ಣ ಭಾಗವತ್ ಉಡುಪಿ ಹಾಗು ಪ್ರಸನ್ನ ಹೆಬ್ಬಾರ್ ಪೆರ್ಡೂರ್ ಇವರನ್ನು ಅಭಿನಂದಿಸಲಾಯಿತು.

ಸಭಾದ ಗೌರವ ಅಧ್ಯಕ್ಷ ಪಿ.ಗುರುರಾಜ ಭಟ್ ಉಪಸ್ಥಿತರಿದ್ದರು. ಜನಾರ್ದನ್ ಕೊಡವೂರು ಸ್ವಾಗತಿಸಿ ಪ್ರಸ್ತಾಪಿಸಿದರು. ಪೂಜಾ ಕೊಡವೂರು ಪ್ರಾರ್ಥಿಸಿ, ಪೂರ್ಣಿಮಾ ಜನಾರ್ದನ್ ವಂದಿಸಿದರು.


Spread the love