ಪವಿತ್ರಾತ್ಮ ಅಭಿಶೆಕೋತ್ಸವ 2017 ಮೂರು ದಿನಗಳ ಮುಖಂಡರ ತರಬೇತಿ ಉದ್ಗಾಟನೆ

Spread the love

ಪವಿತ್ರಾತ್ಮ ಅಭಿಶೆಕೋತ್ಸವ 2017 ಮೂರು ದಿನಗಳ ಮುಖಂಡರ ತರಬೇತಿ ಉದ್ಗಾಟನೆ

ಅ. ವಂ. ಡಾ. ಲಾರೆನ್ಸ್ ಮುಕ್ಕುಳಿ, ಕರ್ನಾಟಕ ಕ್ಯಾರಿಜ್ಮ್ಯಾಟಿಕ್ ಆಧ್ಯಾತ್ಮಿಕ ಸಲಹೆಗಾರರು ಮೂರು ದಿವಸಗಳ ಮುಖಂಡರ ತರಬೇತಿಯನ್ನು ಸಂತ ಆಶ್ರಮದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಉದ್ಗಾಟಿಸಿದರು.

ನೆರೆದಿದ್ದ ಮುಖಂಡರನ್ನು ಉದ್ದೇಶಿಸಿ ಧರ್ಮಾಧ್ಯಕ್ಷರು, ನೀವು ಯೇಸು ಸ್ವಾಮಿಯಿಂದ ವಿಶೇಷವಾಗಿ ಕರೆಯಲ್ಪಟ್ಟವರು ಆದ್ದರಿಂದ ಯೇಸು ಸ್ವಾಮಿಗೆ ಸಾಕ್ಷಿಗಳಾಗಿ ಜೀವಿಸುವ ಜವಾಬ್ದಾರಿ ನಿಮಗಿದೆ. ಈ ಜವಾಬ್ದಾರಿ ದೇವರು ನಿಮಗೆ ನೀಡಿದ ಒಂದು ಅವಾಕಾಶವಾಗಿದೆ ಎಂದರು.

ತರಬೇತುದಾರರಾದ ಬೆಂಗಳೂರು ಲೊಗೋಸ್ ಕೇಂದ್ರದ ಫಾ. ಜೋಸ್ ವೆಟ್ಟಿಯಾಂಕಲ್, ಪಾಟ್ನ ಫಾತಿಮಾ ಕೇಂದ್ರದ ಫಾ. ಜೋರ್ಜ್ ಕರಮಾಯಿಲ್, ಫಾ. ಫ್ರಾಂಕ್ಲಿನ್ ಡಿ’ಸೋಜ, ಸಂತ ಅಂತೋನಿ ಆಶ್ರಮದ ಫಾ. ಒನಿಲ್ ಡಿ’ಸೋಜ, ಶ್ರೀ ಮೆಕಲ್ ನೊರೊನ್ಹಾ, ಶ್ರೀ ಅರುಣ್ ಲೋಬೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕದ 14 ಧರ್ಮಪ್ರಾಂತ್ಯಗಳಿಂದ 300 ಪ್ರತಿನಿಧಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಫಾ. ಮೆಲ್ವಿನ್ ನೊರೊನ್ಹಾ, ಮಂಗಳೂರು ಸೇವಾಸಮಿತ್ಯ ಆತ್ಮಿಕ ನಿರ್ದೇಶಕರು ಸ್ವಾಗತಿಸಿದರು. ಕರ್ನಾಟಕ ಸೇವಾಸಮಿತಿಯ ಉಪಾಧ್ಯಕ್ಷರು ಸೈಮನ್ ರೊಡ್ರಿಗಸ್ ವಂದಿಸಿದರು.


Spread the love