ಪಿಲಿಕುಳದಲ್ಲಿ ದೇಶದ ಮೊದಲ 3ಡಿ ತಾರಲಯ ಅಕ್ಟೋಬರ್ ತಿಂಗಳಲ್ಲಿ ಲೋಕಾರ್ಪಣೆ; ಶಾಸಕ ಲೋಬೊ

Spread the love

ಪಿಲಿಕುಳದಲ್ಲಿ ದೇಶದ ಮೊದಲ 3ಡಿ ತಾರಲಯ ಅಕ್ಟೋಬರ್ ತಿಂಗಳಲ್ಲಿ ಲೋಕಾರ್ಪಣೆ; ಶಾಸಕ ಲೋಬೊ

ಮಂಗಳೂರು: ಪಿಲಿಕುಳದ ಡಾ ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಿರ್ಮಾಣವಗಿರುವ 3ಡಿ ಡಿಜಿಟಲ್ ಹೈಬ್ರೀಡ್ ಸ್ವಾಮಿ ವಿವೆಕಾನಂದ ತಾರಾಲಯ ಅಕ್ಟೋಬರ್ ಕೊನೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಜೆ ಆರ್ ಲೋಬೊ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯವು ದೇಶದ ಪ್ರಥಮ    ತಾರಾಲಯ ಆಗಿರುತ್ತದೆ. ಇದು ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತು ವಿಶೇಷವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ಸಂದ ಹೆಗ್ಗಳಿಕೆಯಾಗಿರುತ್ತದೆ. ತಾರಾಲಯದ ಕಟ್ಟಡ ನಿರ್ಮಾಣವು ಹೆಚ್ಚು ಕಡಿಮೆ ಪೂರ್ಣಗೊಳ್ಳುತ್ತಿದೆ. ರಾಯ್ ಕನ್‍ಸ್ಟ್ರಕ್ಟನ್ಸ್ ರವರು ಇದನ್ನು ನಿರ್ಮಾಣ ಮಾಡುವುದಾಗಿದೆ. ಎನ್.ಐ.ಟಿ.ಕೆ. ಸುರತ್ಕಲ್ ಇವರು ಇದರ  ಬಗ್ಗೆ ತಾಂತ್ರಿಕ ಮಾಹಿತಿ  ನೀಡುತ್ತಿದೆ.

3ಡಿ, 8ಏ ಡಿಜಿಟಲ್ ಪ್ಲಾನೆಟೋರಿಯಂನ್ನು ಪಡೆದ ಮಂಗಳೂರು  ದೇಶದ ಪ್ರಥಮ ನಗರ ಇದಾಗಿದೆ. ಈ ತಾರಾಲಯವು, ಸಿಂಗಾಪುರ, ಶಾಂಘೈ-ಚೀನಾ, ರಿಚ್‍ಮಂಡ್ – ಯುಎಸ್‍ಎ, ಆ್ಯನ್ಸ್‍ಯೊಂಗ್- ಕೊರಿಯಾ, ಕಾಲ್‍ಗೇರಿ-ಕೆನಡಾ, ಬ್ರಿಸ್ಪಾಲ್ – ಯುಕೆ, ಹ್ಯಾಮ್‍ಬರ್ಗ್-ಜರ್ಮನಿ, ಟೋಕಿಯೋ-ಜಪಾನ್, ಲೋಡ್ಜ್ – ಪೋಲೆಂಡ್ ಮುಂತಾದ ಅಂತರಾಷ್ಟ್ರೀಯ ಮಟ್ಟದ ಉನ್ನತ ತಾರಾಲಯಗಳಿಗೆ ಸರಿಸಮಾನವಾಗಿರುತ್ತದೆ ಮತ್ತು ಈ ಶ್ರೇಣಿಯ ನಗರಗಳಲ್ಲಿ ನಮ್ಮ ಮಂಗಳೂರು ಸೇರಿದಂತಾಗುತ್ತದೆ.

ಪಿಲಿಕುಳ ನಿಸರ್ಗಧಾಮದ ವತಿಯಿಂದ ಮೊತ್ತ ಮೊದಲಿಗೆ ರೂ. 8.00 ಕೋಟಿ ಯೋಜನಾ ವರದಿಯನ್ನು ತಾರಾಲಯ ನಿರ್ಮಾಣಕ್ಕೆ ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆಗ ತಾರಾಲಯ ನಿರ್ಮಾಣದ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ವಿವರ ಕಲೆ ಹಾಕಿಕೊಂಡಾಗ 3 ಡಿ ತಾರಾಲಯ ನಿರ್ಮಾಣಕ್ಕೆ ಸುಮಾರು ರೂ. 15.50 ಕೋಟಿ ವೆಚ್ಚಕ್ಕೆ ಯೋಜನಾ ವರದಿಯನ್ನು ಪರಿಷ್ಕರಿಸಲಾಯಿತು. ಇದನ್ನು ಮಂಜೂರು ಮಾಡಿದ ಕರ್ನಾಟಕ ಸರಕಾರ, ಇದರ ತಾಂತ್ರಿಕ ಅಧ್ಯಯನಕ್ಕೆ ಹಾಗೂ ಸರಿಯಾದ ಯೋಜನಾ ವೆಚ್ಚ ಅಂತಿಮಗೊಳಿಸಲು, ಬೆಂಗಳೂರಿನ ತಾರಾಲಯ ನಿರ್ದೇಶಕರಾದ ಡಾII ಶುಕ್ರೆಯವರ ನೇತ್ರತ್ವದಲ್ಲಿ ತಾಂತ್ರಿಕ ಸಮಿತಿಯನ್ನು ನೇಮಿಸಲಾಯಿತು. ಸದ್ರಿ ಸಮಿತಿಯಲ್ಲಿ ಕೇರಳ ರಾಜ್ಯದ ವಿಜ್ಞಾನ ತಂತ್ರಜ್ಞಾನ ನಿರ್ದೇಶಕರಾದ ಡಾII ಅರುಳ್ ಪ್ರಕಾಶ್, ತಮಿಳುನಾಡು ರಾಜ್ಯದ  ವಿಜ್ಞಾನ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ಡಾII ಐ. ಯಂ. ಪೆರುಮಾಳ್, ಗಿ I ಖಿ ಒ, ಬೆಂಗಳೂರು ಇದರ ನಿರ್ದೇಶಕರಾದ ಡಾIIಶಿವಪ್ರಸಾದ್ ಕೆನೆದ್ ಪಿಲಿಕುಳ ನಿಸರ್ಗಧಾಮದಿಂದ ನಾನು ಮತ್ತು ಡಾII ಕೆ.ವಿ. ರಾವ್ ಹಾಗೂ ಕರ್ನಾಟಕ ರಾಜ್ಯದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ  ಡಾII ಹೊನ್ನೇಗೌಡ ಇವರೇ ಮುಂತಾದವರು ಸದಸ್ಯರಾಗಿದ್ದೆವು. ಈ ಸಮಿತಿಯು ನಮ್ಮ ದೇಶದ ಹಲವು ತಾರಾಲಯಗಳನ್ನು ನೋಡಿ, ತಜ್ಞರೊಂದಿಗೆ ಚರ್ಚಿಸಿ, ಪಿಲಿಕುಳದಲ್ಲಿ ರಾಷ್ಟ್ರದ ಮೊತ್ತ ಮೊದಲಿನ ತಾರಾಲಯ ನಿರ್ಮಿಸಬೇಕೆಂದು ಶಿಫಾರಸು ಮಾಡಿ, ಇದಕ್ಕೆ ಅಂದಾಜು ರೂ. 24.50 ಕೋಟಿ ವೆಚ್ಚ ತಗಲಬಹುದೆಂದು ಸರಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯ ಆಧಾರದ ಮೇಲೆ ಸರಕಾರ ರೂ. 24.50 ಕೋಟಿ ಮಂಜೂರು ಮಾಡಿ ಸ್ವಾಮಿ ವಿವೇಕಾನಂದರ 150ನೇ ವರ್ಷದ ಜನ್ಮ ದಿನದ ಆಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದ ತಾರಾಲಯ ಎಂದು ಹೆಸರಿಟ್ಟು ಆದೇಶಿಸಲಾಯಿತು.

ಪಿಲಿಕುಳ ತಾರಾಲಯದ ಪೂರ್ತಿ ದಿವಸ ಹಲವು 2ಡಿ ಮತ್ತು 3ಡಿ ಪ್ರದರ್ಶನಗಳನ್ನು ನೀಡುವುದು. ಈ ಪ್ರದರ್ಶನಗಳನ್ನು ಎಲ್ಲಾ ವಯಸ್ಸಿನವರಿಗೂ ಸರಿ ಹೋಗುವಂತಹವುಗಳು. ಈ ಪ್ರದರ್ಶನಗಳು ಖಗೋಳ ಶಾಸ್ತ್ರ, ಭೂ ಮಂಡಲ, ನೈಸರ್ಗಿಕ, ಪರಿಸರ ವಿಜ್ಞಾನ, ಇತಿಹಾಸ ಮೇಲೆ ಇರುವುದು. ಇವುಗಳು ಇಂಗ್ಲೀಷ್, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಇರುವುದು. ಶಾಲಾ ಸಿಲೆಬಸ್ ನ ಮೇಲೂ ಕೆಲವು ಪ್ರದರ್ಶನಗಳು ಇರುವವು. ಸುಮಾರು 20 ರಿಂದ 25 ನಿಮಿಷದ ಕರ್ನಾಟಕ ದರ್ಶನ ಪ್ರದರ್ಶನ ಕೂಡಾ ಅಳವಡಿಸಲಾಗುವುದು.

ಅಂತರಾಷ್ಟ್ರೀಯ ಮಟ್ಟದ ಟೆಂಡರನ್ನು ಕರೆದ ನಂತರ, ಇದರ ವೆಚ್ಚ ರೂ. 35.60 ಕೋಟಿಗೆ ಏರಿತು. ಇದರಲ್ಲಿ 5 ವರುಷದ ವಾರಂಡಿ ಕೂಡಾ ಸೇರಿತು. (ಸಾಮಾನ್ಯವಾಗಿ 2 ವರ್ಷ ಕೇಳುವುದಾಗಿದೆ) ಈ ಹೆಚ್ಚುವರಿ ಯೋಜನಾ ವೆಚ್ಚವನ್ನು ಕರ್ನಾಟಕ ಸರಕಾರ ಮಂಜೂರು ಮಾಡಿತು.

ಸುದ್ದಿಗೋಷ್ಠಿಯಲ್ಲಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ ಕೆ ವಿ ರಾವ್ ಮನಾಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಇತರರು ಉಪಸ್ಥಿತರಿದ್ದರು.

 


Spread the love