ಪಿ.ಎಂ. ಸ್ವನಿಧಿ ಸಾಲದ ಮಿತಿ ಏರಿಸಲು ಬೀದಿ ವ್ಯಾಪಾರಿಗಳ ಪ್ರತಿಭಟನೆ

Spread the love

ಪಿ.ಎಂ. ಸ್ವನಿಧಿ ಸಾಲದ ಮಿತಿ ಏರಿಸಲು ಬೀದಿ ವ್ಯಾಪಾರಿಗಳ ಪ್ರತಿಭಟನೆ

ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ಸ್ವಾವಲಂಬನೆಯ ಯೋಜನೆಯಾದ ಪಿ.ಎಂ. ಸ್ವನಿಧಿ ಸಾಲ ಯೋಜನೆ ಮುಂದುವರಿಸಿ; ಸಾಲದ ಮಿತಿ ಏರಿಸಲು ಒತ್ತಾಯಿಸಿ. ಪ್ರತಿಭಟನೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರತಸ್ತರ ಸಂಘ ದಿಂದ ಪ್ರತಿಭಟನೆ , ಬಳ್ಳಾಲ್ಬಾಗ್ ನಿಂದ ಲಾಲ್ಬಾಗ್ ಮಹಾ ನಗರ ಪಾಲಿಕೆಯ ತನಕ ಪಾದಯಾತ್ರೆ ನಡೆಸಲಾಯಿತು

ಬೀದಿಬದಿ ವ್ಯಾಪಾರಿಗಳ ಸ್ವಾವಲಂಬನೆಯ ಕಿರು ಸಾಲ ಯೋಜನೆಯಾದ ಪಿ.ಎಂ. ಸ್ವನಿದಿ ಯೋಜನೆಯನ್ನು ಸರಕಾರ ತಡೆಹಿಡಿದಿರುವುದರಿಂದ ಬಡ ಬೀದಿ ವ್ಯಾಪಾರಿಗಳಿಗೆ ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿದೆ. ಈಗಾಗಲೇ ಕಿರುಸಾಲ ಪಡೆದ ಬೀದಿ ವ್ಯಾಪಾರಿಗಳು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ರೂ. 10,000 ಎರಡನೇ ಹಂತದಲ್ಲಿ ರೂ. 20,000/- ಮೂರನೇ ಹಂತದಲ್ಲಿ ರೂ. 50,000/- ಸಾಲ ವಿತರಣೆ ಮಾಡಲಾಗುತ್ತಿತ್ತು. ಆದರೆ ಕಳೆದ 7-8 ತಿಂಗಳಿನಿಂದ ಪಿ.ಎಂ. ಸ್ವನಿಧಿ ಸಾಲ ಪಡೆಯಲು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅಸಾಧ್ಯವಾಗುತ್ತಿದೆ. ನಿಯಮಿತವಾಗಿ ಸಾಲ ಮರುಪಾವತಿ ಮಾಡಿರುವ ಬೀದಿ ವ್ಯಾಪಾರಿಗಳಿಗಾಗಿ ಪಿ.ಎಂ. ಸ್ವನಿಧಿ ಯೋಜನೆ ಮುಂದುವರಿಸಬೇಕಿದೆ. ಮ.ನ.ಪಾ. ಕಚೇರಿ ಎದುರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತ್ತು


Spread the love
Subscribe
Notify of

0 Comments
Inline Feedbacks
View all comments