ಪುಟ್ಟ ಕಂದಮ್ಮನ ಬಾಳಿಗೆ ಬೆಳಕಾದ ಅಮೃತಸಂಜೀವಿನಿ

Spread the love

ಪುಟ್ಟ ಕಂದಮ್ಮನ ಬಾಳಿಗೆ ಬೆಳಕಾದ ಅಮೃತಸಂಜೀವಿನಿ

ಕಲ್ಲಡ್ಕ: ಪರಿಹಾರಕ್ಕಿಂತ ಆಶ್ವಾಸನೆಗಳೇ ಹೆಚ್ಚಾದ ಕಾಲಘಟ್ಟದಲ್ಲಿ ಕಣ್ಣಿಗೆ ಕಾಣದ ಬಡ ಮುಖಗಳನ್ನು ಸಮಾಜದ ಮುಂದೆ ಪರಿಚಯಿಸಿ ಆ ಕುಟುಂಬಕ್ಕೆ ಬೆಳಕಾಗುವ ನಿಟ್ಟಿನಲ್ಲಿ ಸದೃಢ ಸಮಾಜವನ್ನು ನಿರ್ಮಿಸುವ ಕನಸ್ಸು ಹೊತ್ತಿರುವ‌ ಅಮೃತಸಂಜೀವಿನಿ ತನ್ನ ಹದಿನೆಂಟನೆಯ ಸೇವಾ ಯೋಜನೆಯನ್ನು ಕಲ್ಲಡ್ಕದ ಬಾಲ್ತಿಲ‌ ಗ್ರಾಮದ ಪ್ರನಾಮ್ ಎನ್ನುವ ಪುಟ್ಟ ಕಂದಮ್ಮನ ಬಾಳಿಗೆ ಧನಸಹಾಯ ನೀಡಿ ಬೆಳಕಾಯಿತು.

ಮನೆಯ ಯಜಮಾನಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳು ಹೀಗೆ 5 ಜನರ ಚಿಕ್ಕ ಸಂಸಾರ ಇರುವುದು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಬಾಳ್ತಿಲ ಎಂಬ ಊರಲ್ಲಿ. ಮನೆಯ ವ್ಯವಸ್ಥೆ ಸರಿದೂಗಲು ಬೀಡಿಯೊಂದೇ ಆಧಾರ. ಯಶೋದ ಮನೆಯ ಯಜಮಾನಿ ಅವರ ಗಂಡ ತೀರಿ ಹೋಗಿ ಸುಮಾರು 18 ವರುಷಗಳೇ ಕಳೆದಿವೆ. ಮನೆಯ ವ್ಯವಸ್ಥೆಗೆ ಹೆಗಲು ಕೊಡಬೇಕಾದ ದೊಡ್ಡ ಮಗಳು ರೂಪ ಮಾನಸಿಕ ಅಸ್ವಸ್ಥತೆ, ಎರಡನೇ ಮಗಳು ಪ್ರಮಿಳ ಗಂಡನಿಂದ ದೂರವಾಗಿ ಇದೇ ಮನೆಯಲ್ಲಿ ಸಂಸಾರ ಪ್ರಮಿಳಾ ಅವರಿಗೆ ಇಬ್ಬರು ಮಕ್ಕಳು ಒಂದು ಗಂಡು ಇನ್ನೊಂದು ಹಣ್ಣು, ಗಂಡು ಮಗುವಿನ ಹೆಸರು ಪ್ರಣಾಮ್ ಹೆಣ್ಣು ಮಗುವಿನ ಹೆಸರು ಬಿಂದು.

ಮನುಷ್ಯನ ದೇಹದ ವ್ಯವಸ್ಥೆ ಸಮತೋಲನದಲ್ಲಿ ಹೋಗಬೇಕಾದರೆ ರಕ್ತದಲ್ಲಿ ಉತ್ಪತ್ತಿಯಾಗುವ ಎಲ್ಲಾ ಕಣಗಳೂ ಅತೀ ಮುಖ್ಯ ಆದರೆ ಈ 2 ವರ್ಷಗಳ ಪ್ರಣಮ್ ಎಂಬ ಮಗುವಿಗೆ ರಕ್ತದಲ್ಲಿ ಹೆಮೋಫಲಿಸ್ ಎಂಬ ಮಾರಕ ಕಾಯಿಲೆ ಹೃದಯ ಕರಗುವ ಈ ಸಮಸ್ಯೆಯನ್ನು‌ ಅರಿತ ಸಂಜೀವಿನಿ‌ಗಳ ತಂಡ ಸಮಾಜದ ಮುಂದೆ ವಾಟ್ಸಪ್ ,ಫೇಸ್ ಬುಕ್ ಮುಖೇನ ತಿಳಿಸಿ ಅದರಿಂದ ಬಂದ ಧನಸಹಾಯವನ್ನು ಒಟ್ಟು ಮಾಡಿ ರೂ 85,000 ಧನಸಹಾಯವನ್ನು ಆ ಪುಟ್ಟ ಕಂದಮ್ಮನ ಆರೋಗ್ಯದ ಮುಂದಿನ ಚಿಕಿತ್ಸೆಗೆ ನೀಡಲಾಯಿತು.


Spread the love

1 Comment

Comments are closed.