ಪುತ್ತೂರು | ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಎಲ್ಲರೂ ಚೇತರಿಕೆ

Spread the love

ಪುತ್ತೂರು | ಜನಮನ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಎಲ್ಲರೂ ಚೇತರಿಕೆ

ಪುತ್ತೂರು: ಅಕ್ಟೋಬರ್ 20, 2025 ರಂದು ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ನಡೆದ ಜನಮನ ಕಾರ್ಯಕ್ರಮದ ವೇಳೆ, ಅಲ್ಲಿ ಉಪಸ್ಥಿತರಿದ್ದ ಕೆಲವರಿಗೆ ದೇಹ ನಿರ್ಜಲೀಕರಣಗೊಂಡ ಕಾರಣ ಅಸ್ವಸ್ಥತೆ ಉಂಟಾದ ಘಟನೆ ವರದಿಯಾಗಿದೆ.

ಅಸ್ವಸ್ಥರಾದವರನ್ನು ತಕ್ಷಣವೇ ಸ್ಥಳದಲ್ಲಿಯೇ ವೈದ್ಯಕೀಯ ಸಹಾಯ ನೀಡಲಾಗಿದ್ದು, ಚಿಕಿತ್ಸೆ ಪಡೆದ ನಂತರ ಎಲ್ಲರೂ ಸಂಪೂರ್ಣ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಒಟ್ಟು 13 ಮಂದಿ ಪುತ್ತೂರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ (OPD) ಚಿಕಿತ್ಸೆ ಪಡೆದಿದ್ದು, ಪ್ರಸ್ತುತ ಎಲ್ಲರೂ ಆರೋಗ್ಯವಾಗಿದ್ದಾರೆ. ಯಾರಿಗೂ ತೀವ್ರವಾದ ಯಾವುದೇ ಆರೋಗ್ಯ ತೊಂದರೆ ಉಂಟಾಗಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments