ಪ್ರಖ್ಯಾತ ಕೊಂಕಣಿ ಸಾಹಿತಿ ಶಾಂತಾರಾಮ ವರ್ದೇ ವಾಲಾವಲೀಕಾರ ನಿಧನ

Spread the love

ಪ್ರಖ್ಯಾತ ಕೊಂಕಣಿ ಸಾಹಿತಿ ಶಾಂತಾರಾಮ ವರ್ದೇ ವಾಲಾವಲೀಕಾರ ನಿಧನ

ಗೋವಾ: ಪ್ರಖ್ಯಾತ ಕೊಂಕಣಿ ಭಾಷಾ ವಿದ್ವಾಂಸ, ಗೋವಾದಲ್ಲಿ ಮಾಹಿತಿ ತಂತ್ರಜ್ಞಾನ ಮೊದಲಾಗಿ ಪ್ರಚುರಪಡಿಸಿದ್ದ ಶಾಂತಾರಾಮ ವರ್ದೇ ವಾಲಾವಲೀಕರ ತಮ್ಮ 80 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

‘ಕೊಂಕಣಿ ಭಾಷಾ ಚಳವಳಿ ಪಿತ’ರೆಂದು ಖ್ಯಾತನಾಮರಾದ ಶೆಣೈ ಗೊಂಯ ಬಾಬ (ವಾಮನ ರಘುನಾಥ ವರ್ದೇ ವಾಲಾವಲೀಕಾರ) ಇವರ ಮೊಮ್ಮಗ ಶಾಂತಾರಾಮ ವರ್ದೇ ವಾಲಾವಲೀಕಾರ ಅವರು ಕೊಂಕಣಿ ಕವಿ, ಅಣಕಾರ ಹಾಗೂ 1960 ರ ದಶಕದಲ್ಲಿ “ಅಪುರಬಾಯ” ಕೊಂಕಣಿ ಚಿಣ್ಣರ ಮಾಸಪತ್ರಿಕೆಯ ಸಂಪಾದಕರಾಗಿದ್ದು ತಮ್ಮ ತಾತ ಶೆಣೈ ಗೊಂಯಬಾಬರು ಆರಿಸಿದ ಸಾಹಿತ್ಯ ಕೃತಿಗಳನ್ನು ‘ವಜೃಲೇಖನಿ’ (1977) ಶಿರೋನಾಮೆಯಲ್ಲಿ ಹಾಗೂ “ಸಮಗ್ರ ಶೆಣೈ ಗೊಂಯಬಾಬ” ಕೃತಿಗಳನ್ನು 4 ಸಂಪುಟಗಳಲ್ಲಿ (2006) ಹೊರತಂದರು. ಅವರು ಮೇಟಿ ತಂತ್ರಜ್ಞಾನ ಪ್ರಚುರ ಪಡಿಸುವಲ್ಲಿ ಮೊದಲಾಗಿದ್ದು ಭಾರತೀಯ ಕಂಪ್ಯೂಟರ್ ಸೊಸೈಟಿಯ ಗೋವಾ ರಾಜ್ಯದ ಸಂಚಾಲಕರಾಗಿದ್ದರು. ಕೇಂದ್ರ ಸರಕಾರದ ಕೊಂಕಣಿ ಶಬ್ದ ಸಂಗ್ರಹ ಭಂಢಾರ ಯೋಜನೆಯನ್ನು ಸಮರ್ಪಕವಾಗಿ ಪೂರೈಸಿಕೊಟ್ಟಿದ್ದರು.

ದಿ. ಶಾಂತಾರಾಮ ವರ್ದೇ ವಾಲಾವಲೀಕಾರ ಕಾಳಿದಾಸನ ಸಂಸ್ಕøತ ಮೇಘ ದೂತವನ್ನು ಕೊಂಕಣಿಗೆ ಭಾಷಾಂತರಿಸಿದ್ದರು. ಅಲ್ಲದೇ ವಿಶ್ವ ಕೊಂಕಣಿ ಕೇಂದ್ರದ ಸಂಪೂರ್ಣ “ಋಗ್ವೇದ” ಕೊಂಕಣಿ ಭಾಷಾಂತರವನ್ನು ಕೈಗೆತ್ತಿಕೊಂಡಿದ್ದರು.


Spread the love