ಪ್ರತಿವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಟಿಪ್ಪು ಜಯಂತಿ: ಸಚಿವ ಮಧ್ವರಾಜ್

Spread the love

ಪ್ರತಿವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಟಿಪ್ಪು ಜಯಂತಿ: ಸಚಿವ ಮಧ್ವರಾಜ್

ಉಡುಪಿ: ಜಿಲ್ಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಟಿಪ್ಪು ಜಯಂತಿ ಅಚರಿಸಲಾಗುವುದು ಎಂದು ಉಡಪಿ ಉಸ್ತುವಾರಿ ಅಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಸೋಮವಾರ, ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಎಸ್‍ವಿಎಚ್ ಶಾಲೆ ಸಹಯೋಗದಲ್ಲಿ ಕಾಪು ಬಳಿಯ ಇನ್ನಂಜೆ ಎಸ್‍ವಿಎಚ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳ ಉಡುಪಿ ವಲಯ ಮಟ್ಟದ ಕ್ರೀಡಾ ಕೂಟಕ್ಕಾಗಿ ನೂತನವಾಗಿ ನಿರ್ಮಿಸಲ್ಪಟ್ಟ ಕ್ರೀಡಾಂಗಣವನ್ನು ಉದ್ಘಾಟಿಸಿದ ನಂತರ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಯಾವುದೇ ಗೊಂದಲ ಇಲ್ಲ. ಕಳೆದ ಬಾರಿಯೂ ಟಿಪ್ಪು ಜಯಂತಿಯನ್ನು ಸರಳವಾಗಿ ಆಚರಿಸಿದ್ದೇವೆ. ಈ ಬಾರಿಯೂ ಸರಳವಾಗಿ ಆಚರಿಸುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಹೊಸ ಕ್ರೀಡಾ ನೀತಿ: ಕರ್ನಾಕ ಸರಕಾರ ಹೊ ಕ್ರೀಡಾ ನೀತಿಯೊಂದನ್ನು ತರುತ್ತಿದ್ದು, ಇದರಿಂದ ಎಳವೆಯಲ್ಲಿಯೇ ಮಕ್ಕಳು ಕ್ರೀಡೆಯತ್ತ ಮುಖ ಮಡಲು ಸಹಕಾರಿ ಆಗಲಿದೆ. ಕ್ರೀಡಾ ಕ್ಷೇತ್ರದ್ಲಲಿ ಸಾಧನೆ ಮಾಡುವಾಗ, ಅವರ ಶೈಕ್ಷಣಿಕ ಸಾಧನೆಯಲ್ಲಿ ತೊಡಕಾಗದಂತೆ ಅವರಿಗೆ ಬೇಕಾದ ಸೌಕರ್ಯಗಳನ್ನು, ಗ್ರೇಸ್ ಮಾರ್ಕ್‍ಗಳನ್ನು, ಅವರ ಹಾಜರಾತಿ ಹಾಗೂ ಉದ್ಯೋಗ ಖಾತರಿಗಳನ್ನು ಮಾಡ ತಕ್ಕ ಹೊಸ ಕ್ರೀಡಾ ನೀತಿಯನ್ನು ರಾಜ್ಯದಲ್ಲಿ ರಾಜ್ಯದಲ್ಲಿ ತರಬೇಕೆಂದು ಇಚ್ಛಿಸಲಾಗಿದೆ.

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮುಂದೆ ಬಂದಾಗ ಅವರ ಮನೆಯವರು ಹಾಗೂ ಅವರು ಕಲಿಯುವ ಶಿಕ್ಷಣ ಸಂಸ್ಥೆಗಳು ಅವರ ಕ್ರೀಡಾ ಮನೋಭಾವವನ್ನು ಚಿವುಟಿ ಹಾಕುವ ಪರಿಸ್ಥಿತಿ ನೆಲೆಸಿದೆ. ಇದರಿಂದ ಕ್ರೀಡಾ ಪಟುಗಳು ಮುನ್ನಡೆಯುವುದಕ್ಕಿಂತ ಹಿನ್ನಡೆ ಪಡೆಯುತ್ತಾರೆ. ಆದ್ದರಿಂದ ಮೊದಲಿಗೆ ಅದನ್ನು ಬದಲಾಯಿಸುವ ಅತ್ಯಗತ್ಯತೆ ಇದೆ.

ಒಂದು ಸಾವಿರ ಕ್ರೀಡಾಳುಗಳ ಗುರುತಿಸಿ ದತ್ತು ಸ್ವೀಕಾರ: ರಾಜ್ಯದಲ್ಲಿ ಕ್ರೀಡಾಸಕ್ತಿ ಹೊಂದಿರುವ ಒಂದು ಸಾವಿರ ಕ್ರೀಡಾಳುಗಳನ್ನು ಗುರುತಿಸಲಾಗುವುದು. ಕಲಿಕೆಯ ಎಲ್ಲಾ ಖರ್ಚುಗಳ ಜೊತೆಗೆ ಪೂರಕ ಎಲ್ಲಾ ಸವಲತ್ತುಗಳನ್ನು ಆ ವಿದ್ಯಾರ್ಥಿಗೆ ನೀಡಲಾಗುವುದು. ಇದರಿಂದ ಕಲಿಕೆಯ ಜೊತೆಗೆ ಕ್ರೀಡೆಯಲ್ಲಿಯೂ ಮುಂದುವರಿಯಲ್ಲು ಸಹಕಾರಿ ಆಗುತ್ತದೆ. ಇದಕ್ಕಾಗಿ ಕಾರ್ಪೊರೇಟ್ ಕಂಪನಿಗಳ ಬೆಂಬಲ ಕೇಳಲಾಗಿದ್ದು, ಅವರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದೂ ಪ್ರಮೋಧ್ ಮಧ್ವರಾಜ್ ಹೇಳಿದ್ದಾರೆ.

ಸೋಧೆ ವಾದಿರಾಜ ಮಠಾಧೀಶ ವಿಶ್ವವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕ್ರೀಡಾಕೂಟವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕ್ರೀಡಾ ಧ್ವಜರೋಹಣಗೈದರು. ಕ್ರೀಡಾ ಜ್ಯೋತಿಯನ್ನು ಅಂತರ್‍ರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ ಬೆಳಗಿಸಿದರು.

ಇದೇ ವೇಳೆ ವಿದಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಅದಾನಿ ಯುಪಿಸಿಎಲ್ ಕಂಪನಿಯ ಉಪಾಧ್ಯಕ್ಷ ಕಿಶೋರ್ ಆಳ್ವಾ, ಉಧ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ ಸುವರ್ಣ, ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿ ದಿವಾಕರ ಶೆಟ್ಟಿ, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಅನಿಲ್, ತಾಲೂಕು ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ ಮತ್ತಿರರು ವೇದಿಕೆಲ್ಲಿದ್ದರು.


Spread the love