ಪ್ರಾಣಿ ಪಕ್ಷಿಗಳ ಚಿಕಿತ್ಸೆಗಳಲ್ಲಿ ಹೊಮಿಯೋಪತಿ ಔಷಧಗಳು ಪರಿಣಾಮಕಾರಿ

Spread the love

ಪ್ರಾಣಿ ಪಕ್ಷಿಗಳ ಚಿಕಿತ್ಸೆಗಳಲ್ಲಿ ಹೊಮಿಯೋಪತಿ ಔಷಧಗಳು ಪರಿಣಾಮಕಾರಿ

ಮಿಜಾರು: ಪ್ರಾಣಿ ಪಕ್ಷಿಗಳು ಶುದ್ದ ಮನಸ್ಸಿನವುಗಳಾಗಿದ್ದು ಪ್ರಾಣಿಗಳೊಂದಿಗಿನ ಒಡನಾಟ ವ್ಯಕ್ತಿಯ ಮಾನಸಿಕ ಆರೊಗ್ಯವನ್ನು ಹೆಚ್ಚಿಸುವುದಲ್ಲದೇ ಕುಟುಂಬದ ಆರೋಗ್ಯಕ್ಕೂ ಸಹಕಾರಿ ಆಗುತ್ತದೆ. ನಿಸರ್ಗಕ್ಕೆ ಹೆಚ್ಚು ಹತ್ತಿರ ಇರುವುದರಿಂದ ಪಶುಪಕ್ಷಿಗಳು ಹೊಮಿಯೋಪತಿ ಔಷಧಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ ಎಂದು ಖ್ಯಾತ ಪಶುವೈದ್ಯ ಡಾ. ಮನೋಹರ ಉಪಾಧ್ಯಾಯ ತಿಳಿಸಿದರು.

ಆಳ್ವಾಸ್ ಹೋಮಿಪತಿಮೆಡಿಕಲ್ ಕಾಲೇಜಿನಲ್ಲಿ ನಡೆದ “ಪಶು ಚಿಕಿತ್ಸೆಯಲ್ಲಿ ಹೊಮಿಯೊಪತಿ ಔಷಧಗಳ ಬಳಕೆ” ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪಶುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಲುಬಾಯಿ ರೊಗ, ದಿಸ್ಟೆಂಪರ್ ರೋಗ ,ವಿಷಜಂತುಗಳ ಕಡಿತ ,ಕೆಚ್ಚಲುಬಾವುಗಳಿಗೆ ಹೋಮಿಯೊಪತಿ ಔಷಧಗಳು ಪರಿಣಾಮಕಾರಿಯಾಗಿವೆಎಂದು ಮಾಹಿತಿ ನೀಡಿದರು.

ಪ್ರಾಂಶುಪಾಲರಾದ ಡಾ.ಪ್ರವೀಣ್‍ರಾಜ್ ಮಾತನಾಡಿ, ಹೊಮಿಯೋಪತಿ ಔಷಧಗಳು ಪಶು ಚಿಕಿತ್ಸೆಯಲ್ಲಿ ಬಳಕೆಯಲ್ಲಿದ್ದು ಅವುಗಳ ಕಾರ್ಯಕ್ಷಮತೆ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಡಾ.ರೊಶನ್ ಪಿಂಟೊ ಹಾಗೂ ಪ್ರಾಧ್ಯಾಪಕರಾದ ಡಾ.ಲಕ್ಷ್ಮಿಪ್ರಭ ಹಾಗು ಡಾ.ಅಂಜಲಿ ಉಪಸ್ಥಿತರಿದ್ದರು.


Spread the love