ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ  ಸಂಭ್ರಮದ ಈದುಲ್ ‌ಫಿತ್ರ್

Spread the love

ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ  ಸಂಭ್ರಮದ ಈದುಲ್ ‌ಫಿತ್ರ್

ಮಂಗಳೂರು: ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಶುಕ್ರವಾರ ಸಂಭ್ರಮದಿಂದ ಈದುಲ್ ‌ಫಿತ್ರ್ ಆಚರಿಸಲಾಯಿತು.

ಈದ್ ಸಂದೇಶ ನೀಡಿ ಮಾತನಾಡಿದ ಖತೀಬ್ ಅಲ್ ಹಾಜ್ ಅಬ್ದುಲ್ ನಾಸೀರ್ ಸಾದಿ, ಬಡವರು, ಅನಾಥರು ಮತ್ತು ಅಸಹಾಯಕರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಈದ್ ಹಬ್ಬವು ಕೇವಲ ಸಂಭ್ರಮದ ಹಬ್ಬವಲ್ಲ, ಅದು ತ್ಯಾಗ, ಸಹಾನುಭೂತಿಯ ಸಂಕೇತವಾಗಿರಬೇಕು ಎಂದು ಹೇಳಿದರು.

ನಾವು ಪರಸ್ಪರ ವೈಷಮ್ಯ, ಕಚ್ಛಾಟಗಳನ್ನು ಬದಿಗಿಟ್ಟು ಸೌಹಾರ್ದತೆಯಿಂದ ಜೀವನ ನಡೆಸಬೇಕು. ಅಲ್ಲಾಹು ನೀಡಿದ ಆರೋಗ್ಯ, ಸಂಪತ್ತು ಮತ್ತು ಸಮಯ ಎಂಬ ಅಮೂಲ್ಯ ಅನುಗ್ರಹಗಳನ್ನು ಜೂಜಾಟ, ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆಗಳ ಮೂಲಕ ನಿಷ್ಫಲಗೊಳಿಸಬಾರದು ಎಂದು ಕರೆ ನೀಡಿದರು.

ಬಳಿಕಕುತುಬಾ ಪಾರಾಯಣ, ಸಾಮೂಹಿಕ ನಮಾಝ್ ನಿರ್ವಹಿಸಲಾಯಿತು. ಇದೇ ವೇಳೆ ಮಸೀದಿ ಅಧ್ಯಕ್ಷ, ಮ.ನ.ಪಾ ನಿಟಕಪೂರ್ವ ಸದಸ್ಯ ಅಬ್ದುಲ್ ರವೂಫ್ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಮಸೀದಿ ದ್ವಾರ ಉದ್ಘಾಟಿಸಲಾಯಿತು.

ಈ ಸಂದರ್ಭ ಮ.ನ.ಪಾ ನಿಕಟಪೂರ್ವ ಸದಸ್ಯ ಅಶ್ರಫ್ ಕೆ.ಇ, ಬಿ.ಜೆ.ಎಂ ಮಾಜಿ ಅಧ್ಯಕ್ಷ ಹಾಜಿ ಬಿ.ಎನ್ ಅಬ್ಬಾಸ್, ಉಪಾಧ್ಯಕ್ಷರು ಮುಹಮ್ಮದ್, ಸಂಚಾಲಕ ಬಿ. ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೊಶಾಧಿಕಾರಿ ನಝೀರ್ ಪಾಂಡೆಲ್, ಕಾರ್ಯದರ್ಶಿ ಮುಹಮ್ಮದ್ ಹನೀಫ್, ಮೇಲುಸ್ತುವಾರಿ ಅಶ್ರಫ್ ತೋಟ, ನಝೀರ್ ಬಜಾಲ್, ಯೂಸುಫ್, ಇಕ್ಬಲ್ ಅಸಾನಿ, ಅಬ್ದುಲ್ ರಹಿಮಾನ್ ಮದನಿ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments